ರೈತನೊಂದಿಗೆ ಕೇಂದ್ರ ಸಚಿವ ಖೂಬಾ ಒರಟು ಮಾತು, ಆಡಿಯೋ ಕ್ಲಿಪ್ ವೈರಲ್!
ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ರೈತರೊಬ್ಬರೊಂದಿಗೆ ಅಗೌರವಯುತವಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಆಡಿಯೋ ಕ್ಲಿಪ್ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕಲಬುರಗಿ: ರಸಗೊಬ್ಬರ ಪೂರೈಕೆಗೆ ಸಂಬಂಧಿಸಿದಂತೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ರೈತರೊಬ್ಬರೊಂದಿಗೆ ಅಗೌರವಯುತವಾಗಿ ಮಾತನಾಡಿದ್ದಾರೆ ಎನ್ನುವ ಆರೋಪದ ಆಡಿಯೋ ಕ್ಲಿಪ್ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಔರಾದ್ ತಾಲೂಕಿನ ಹೆಡಗಾಪುರ ಗ್ರಾಮದ ರೈತನೆಂದು ಹೇಳಿಕೊಳ್ಳುವ ವ್ಯಕ್ತಿಯೊಬ್ಬರು ಸಚಿವರ ಜತೆ ದೂರವಾಣಿಯಲ್ಲಿ ಮಾತನಾಡಿರುವ ಕ್ಲಿಪ್ ಇದಾಗಿದೆ. ನಿನ್ನೆ ರಾತ್ರಿ ಉತ್ತಮ ಮಳೆಯಾಗಿದೆ, ಆದರೆ ಗ್ರಾಮಕ್ಕೆ ರಸಗೊಬ್ಬರ ಸಿಕ್ಕಿಲ್ಲ ಎಂದು ರೈತರು ಸಚಿವರಿಗೆ ಹೇಳುತ್ತಾರೆ.
ಇದಕ್ಕೆ ಸಚಿವರು, ಸ್ಥಳೀಯ ಸಮಸ್ಯೆಗಳಿಗೆ ಶಾಸಕರು, ಅಧಿಕಾರಿಗಳಿದ್ದಾರೆ, ರಾಜ್ಯಕ್ಕೆ ರಸಗೊಬ್ಬರ ನೀಡುವುದು ನನ್ನ ಕರ್ತವ್ಯವಾಗಿದ್ದು, ಅದನ್ನು ಮಾಡಿರುವುದಾಗಿ ಉತ್ತರಿಸಿದ್ದಾರೆ. ಸುಮಾರು ನಾಲ್ಕು ನಿಮಿಷಗಳ ಕಾಲ ಮಾತುಕತೆ ಮುಂದುವರಿದಿದ್ದು, ಸಮಸ್ಯೆ ಬಗೆಹರಿಸುವಂತೆ ರೈತರು ಸಚಿವರನ್ನು ಒತ್ತಾಯಿಸಿದ್ದಾರೆ. ಮುಂದಿನ ಚುನಾವಣೆಯಲ್ಲಿ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ರೈತ ಸಚಿವರಿಗೆ ಹೇಳುತ್ತಿರುವುದು ಕೇಳಿಬಂದಿದೆ. ಇಂತಹ ಬೆದರಿಕೆಗಳಿಗೆ ಸಚಿವರು ಸಿದ್ಧ ಎಂಬ ಮಾತುಗಳೂ ಕೇಳಿಬಂದಿವೆ.
ಇದೇ ವೇಳೆ ಗುರುವಾರ ಸ್ಪಷ್ಟನೆ ನೀಡಿರುವ ಖೂಬಾ, ಜೂ.10ರಂದು ತಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿದವರು ರೈತರಲ್ಲ, ಸರ್ಕಾರಿ ಶಾಲೆಯ ಶಿಕ್ಷಕರಾಗಿದ್ದಾರೆ. ಆ ವ್ಯಕ್ತಿ ತನ್ನನ್ನು 3-4 ಬಾರಿ ದೂರವಾಣಿಯಲ್ಲಿ ಸಂಪರ್ಕಿಸಲು ಪ್ರಯತ್ನಿಸಿದ್ದರಿಂದ ಏನಾದರೂ ಏನಾದರೂ ಮಹತ್ವದ ಸಮಸ್ಯೆ ಇರಬಹುದೆಂದು ಭಾವಿಸಿ ಕರೆ ಮಾಡಿದ್ದೆ. ಆತ ಗೊಬ್ಬರದ ಬಗ್ಗೆ ಕೇಳುವ ನೆಪದಲ್ಲಿ ವ್ಯಕ್ತಿ ಅವಹೇಳನಕಾರಿ ಪದಗಳನ್ನು ಬಳಸಿದ್ದಾನೆಯೇ ಹೊರತು ನಾನಲ್ಲ ಎಂದು ಸಚಿವರು ಹೇಳಿದರು.
ಆಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ತನಗೆ ಮತ್ತು ತನ್ನ ಪಕ್ಷಕ್ಕೆ ಮಾನಹಾನಿ ಮಾಡಲು ಆಯ್ದ ಭಾಗವನ್ನು ವೈರಲ್ ಮಾಡಲಾಗಿದೆ ಎಂದು ಖೂಬಾ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


