ಶಿಕಾರಿಪುರ: ನಿಷೇಧಿತ ಸಂಘಟನೆ 'ಸಿಎಫ್ಐ' ಸೇರುವಂತೆ ಗೋಡೆ ಬರಹ, ಪ್ರಕರಣ ದಾಖಲು
ನಿಷೇಧಿತ ಪಿಎಫ್ಐ ಸಂಘಟನೆಯ ಅಂಗ ಸಂಸ್ಥೆ ಸಿಎಫ್ಐ ಸೇರುವಂತೆ ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಡೆ ಬರಹಗಳು ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿಕಾರಿಪುರ: ನಿಷೇಧಿತ ಪಿಎಫ್ಐ ಸಂಘಟನೆಯ ಅಂಗ ಸಂಸ್ಥೆ ಸಿಎಫ್ಐ ಸೇರುವಂತೆ ಶಿಕಾರಿಪುರ ತಾಲೂಕಿನ ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಡೆ ಬರಹಗಳು ಕಾಣಿಸಿಕೊಂಡಿದ್ದು, ಈ ಸಂಬಂಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಿರಾಳ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು, ಗೋಡೆಗಳು ಮತ್ತು ಬೋರ್ಡ್‌ಗಳ ಮೇಲೆ ಸಿಎಫ್ಐ'ಗೆ ಸೇರ್ಪಡೆಗೊಳ್ಳಿ ಎಂಬ ಬರಹಗಳು ಕಂಡುಬಂದಿದೆ.
ಪೊಲೀಸ್ ಗುಪ್ತಚರ ವಿಭಾಗದ ಅಧಿಕಾರಿಯೊಬ್ಬರು ಈ ಗೋಡೆ ಬರಹವನ್ನು ಗಮನಿಸಿದ್ದು, ಅವರ ದೂರಿನ ಆಧಾರದ ಮೇಲೆ ಕರ್ನಾಟಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆಯಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣವನ್ನು ದಾಖಲಿಸಲಾಗಿದೆ. ಶಿರಾಳಕೊಪ್ಪದಲ್ಲಿ ಸಾಮರಸ್ಯ ಕದಡುವುದು ಗೋಡೆಬರಹದ ಉದ್ದೇಶ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.
ಭಾನುವಾರ ಈ ಘಟನೆ ಬೆಳಕಿಗೆ ಬಂದಿದ್ದು, ಕಾರ್ಯಾಚರಣೆಗಿಳಿದ ಪೊಲೀಸ್ ಅಧಿಕಾರಿಗಳು, ಹಳೆ ಪೆಟ್ರೋಲ್ ಬಂಕ್ ಬಳಿಯ ಕಾಂಪೌಂಡ್ ಗೋಡೆ, ಭೋವಿ ಕಾಲೋನಿ ರಸ್ತೆಯಲ್ಲಿನ ವಿದ್ಯುತ್ ಕಂಬಗಳು ಹಾಗೂ ಶಿರಾಳಕೊಪ್ಪದ ಇತರ ಪ್ರದೇಶಗಳಲ್ಲಿ ಗೋಡೆ ಬರಹಗಳನ್ನು ಪತ್ತೆ ಮಾಡಿದರು.
ಬಿಲಾಲ್ ಮಸೀದಿ ಮತ್ತು ಫಾರೂಕ್ ಮಸೀದಿ ಬಳಿಯ ಮನೆಗಳ ಗೋಡೆಗಳ ಮೇಲೂ ಈ ಬರಹಗಳು ಕಂಡುಬಂದಿತ್ತು. ಬಳಿಕ ಪೊಲೀಸರು ಗೋಡೆ ಬರಹಗಳನ್ನು ಅಳಿಸುವ ಕೆಲಸ ಮಾಡಿದರು.
ಶಿರಾಳಕೊಪ್ಪದಲ್ಲಿ ಸಿಎಫ್‌ಐಗೆ ಬೆಂಬಲ ಸೂಚಿಸಿ ಬರಹ ಬರೆದಿರುವ ಹಾಗೂ ಬರಹ ಬರೆದವರನ್ನು ಬಂಧಿಸಲು ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸ್ಥಳೀಯ ಶಾಸಕ ಕೆ.ಎಸ್.ಈಶ್ವರಪ್ಪ, ಸಂಸದ ಬಿ.ವೈ.ರಾಘವೇಂದ್ರ ಅವರು ಹೇಳಿದ್ದಾರೆ.
ರಾತ್ರಿಯ ವೇಳೆ ಸಮಾಜ ಘಾತುಕ ಶಕ್ತಿಗಳು ಸಕ್ರಿಯವಾಗುತ್ತವೆ. ಅವರು ಜನರನ್ನು ಹತ್ಯೆ ಮಾಡುತ್ತಾರೆ, ಬಾಂಬ್‌ಗಳನ್ನು ಎಸೆಯುತ್ತಾರೆ ಮತ್ತು ಇಂತಹ ಗೋಡೆಬರಹಗಳನ್ನು ಬರೆಯುತ್ತಾರೆ. ಇಂತಹ ಸಮಾಜಘಾತುಕರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿದೆ ಎಂದು ಈಶ್ವರಪ್ಪ ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


