ಮ್ಯಾನ್ಮಾರ್‌ನಲ್ಲಿ ಬಂಡುಕೋರರ ಒತ್ತೆಯಾಳಾಗಿರುವ ಕರ್ನಾಟಕದ ವ್ಯಕ್ತಿ: ವಿವರ ಕೇಳಿದ ರಾಜ್ಯ ಸರ್ಕಾರ
ಕೆಲವು ನೇಮಕಾತಿ ಏಜೆನ್ಸಿಗಳು ಯುವಕರಿಗೆ ಥೈಲ್ಯಾಂಡ್‌ನಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸುತ್ತಿವೆ. ಯುವಕರನ್ನು ಬಲವಂತವಾಗಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗಿದೆ ಮತ್ತು ಸೈಬರ್ ಅಪರಾಧಿಗಳಾಗಿ ಕೆಲಸ ಮಾಡಲು ಒತ್ತಾಯಿಸಲಾಗಿದೆ.

ಬೆಂಗಳೂರು: ಮ್ಯಾನ್ಮಾರ್‌ನಲ್ಲಿ ಬಂಡುಕೋರರ ಒತ್ತೆಯಾಳಾಗಿರುವ ಅನೇಕ ಭಾರತೀಯರ ಪೈಕಿ ಕರ್ನಾಟಕದ ವ್ಯಕ್ತಿಯೊಬ್ಬರಿರುವ ಕುರಿತಾದ ವರದಿಗಳ ಬೆನ್ನಲ್ಲೇ ಅಗತ್ಯ ವಿವರಗಳನ್ನು ಪಡೆಯಲು ರಾಜ್ಯ ಸರ್ಕಾರದ ಅಧಿಕಾರಿಗಳು ಕೇಂದ್ರದೊಂದಿಗೆ ಸಮನ್ವಯ ಸಾಧಿಸಲಿದ್ದಾರೆ.
ಈ ಬಗ್ಗೆ ವಿವರಗಳನ್ನು ಪಡೆಯಲು ರಾಜ್ಯದ ಮುಖ್ಯ ಕಾರ್ಯದರ್ಶಿ, ಕೇಂದ್ರ ಗೃಹ ಸಚಿವಾಲಯದೊಂದಿಗೆ ಸಮನ್ವಯ ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಮಿಳುನಾಡು ಮತ್ತು ತೆಲಂಗಾಣದ ಅನೇಕರು ಸೇರಿದಂತೆ ಸುಮಾರು 500 ಭಾರತೀಯರು ಮ್ಯಾನ್ಮಾರ್‌ನಲ್ಲಿ ಬಂಡುಕೋರರ ವಶದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಲವು ನೇಮಕಾತಿ ಏಜೆನ್ಸಿಗಳು ಯುವಕರಿಗೆ ಥೈಲ್ಯಾಂಡ್‌ನಲ್ಲಿ ಉದ್ಯೋಗ ನೀಡುವುದಾಗಿ ಹೇಳಿ ವಂಚಿಸುತ್ತಿವೆ. ಯುವಕರನ್ನು ಬಲವಂತವಾಗಿ ಮ್ಯಾನ್ಮಾರ್‌ಗೆ ಕರೆದೊಯ್ಯಲಾಗಿದೆ ಮತ್ತು ಸೈಬರ್ ಅಪರಾಧಿಗಳಾಗಿ ಕೆಲಸ ಮಾಡಲು ಒತ್ತಾಯಿಸಲಾಗಿದೆ.
ಬಂಡುಕೋರರಿಂದ ಒತ್ತೆಯಾಳುಗಳಾಗಿದ್ದವರಲ್ಲಿ ಹೆಚ್ಚಿನವರು ಕೇರಳ ಮತ್ತು ತಮಿಳುನಾಡಿನವರಾಗಿದ್ದರೆ, ಕರ್ನಾಟಕದ ಒಬ್ಬರೂ ಸಹ ಸೆರೆಯಲ್ಲಿದ್ದಾರೆ ಎಂಬ ವರದಿಗಳಿವೆ. ಆದರೆ, ಆ ವ್ಯಕ್ತಿಯ ಗುರುತು ಅಥವಾ ರಾಜ್ಯದಲ್ಲಿ ಆತನ ಸ್ಥಾನದ ಬಗ್ಗೆ ರಾಜ್ಯ ಸರ್ಕಾರದ ಬಳಿ ಯಾವುದೇ ಮಾಹಿತಿಯಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


