ಬಳ್ಳಾರಿ: ಸಂಚಾರಿ ಪೊಲೀಸ್ ಎಂದು ಹೇಳಿಕೊಂಡು ದಂಡ ವಸೂಲಿ ಮಾಡುತ್ತಿದ್ದ ಅರಣ್ಯ ಅಧಿಕಾರಿಗೆ ಸಾರ್ವಜನಿಕರಿಂದ ಥಳಿತ
ಬಳ್ಳಾರಿ ವಿಭಾಗದ ಅರಣ್ಯ ಅಧಿಕಾರಿಯೊಬ್ಬರು ರಾಜ್ಯ ಅರಣ್ಯ ಇಲಾಖೆಗೆ ಮುಜುಗರ ಉಂಟು ಮಾಡುವಂತೆ ಮಾಡಿದ್ದು, ತಾನು ಬಳ್ಳಾರಿ ಸಂಚಾರಿ ಪೋಲೀಸರಂತೆ ಪೋಸು ಕೊಟ್ಟು, ವಾಹನ ಸವಾರರಿಂದ ಹಣ ವಸೂಲಿ ಮಾಡಿದ್ದಕ್ಕೆ...

ಬಳ್ಳಾರಿ: ಬಳ್ಳಾರಿ ವಿಭಾಗದ ಅರಣ್ಯ ಅಧಿಕಾರಿಯೊಬ್ಬರು ರಾಜ್ಯ ಅರಣ್ಯ ಇಲಾಖೆಗೆ ಮುಜುಗರ ಉಂಟು ಮಾಡುವಂತೆ ಮಾಡಿದ್ದು, ತಾನು ಬಳ್ಳಾರಿ ಸಂಚಾರಿ ಪೋಲೀಸರಂತೆ ಪೋಸು ಕೊಟ್ಟು, ವಾಹನ ಸವಾರರಿಂದ ಹಣ ವಸೂಲಿ ಮಾಡಿದ್ದಕ್ಕೆ ಸಾರ್ವಜನಿಕರು ಹಲ್ಲೆ ನಡೆಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಅಧಿಕಾರಿಯ ಬಗ್ಗೆ ಅನುಮಾನಗೊಂಡ ಸಾರ್ವಜನಿಕರು, ಆರೋಪಿ ಉಪ ವಲಯ ಅರಣ್ಯಾಧಿಕಾರಿಯನ್ನು ಹಿಡಿದ ಥಳಿಸಿದ ಘಟನೆ ಸೋಮವಾರ ಬಳ್ಳಾರಿ ನಗರದಲ್ಲಿ ವರದಿಯಾಗಿದೆ.
ಆರೋಪಿ ಅಧಿಕಾರಿ ಭಾನುವಾರ ‘ಡ್ಯೂಟಿ’ಯಲ್ಲಿದ್ದು, ಹಲವು ವಾಹನ ಚಾಲಕರಿಂದ ಹಣ ವಸೂಲಿ ಮಾಡಿದ್ದಾರೆ ಎಂದು ಬಳ್ಳಾರಿಯ ಮೋತಿ ಸರ್ಕಲ್‌ನ ಸ್ಥಳೀಯರು ಮತ್ತು ಉದ್ಯಮಿಗಳು ಮಾಹಿತಿ ನೀಡಿದ್ದಾರೆ.
"ಸೋಮವಾರವೂ ಅವರು ಸಂಚಾರಿ ಪೋಲೀಸ್ ರೀತಿ ಪೋಸ್ ನೀಡುವುದನ್ನು ಮುಂದುವರೆಸಿದ್ದರು ಮತ್ತು ಕಾನೂನು ಉಲ್ಲಂಘಿಸುವ ವಾಹನ ಚಾಲಕರಿಂದ ಹಣ ವಸೂಲಿ ಮಾಡಿದರು. ಸ್ವಲ್ಪ ಸಮಯದ ನಂತರ ಅವರು ಕ್ಯಾಂಟೀನ್‌ಗೆ ಬಂದು ಹಣಕ್ಕಾಗಿ ಬೇಡಿಕೆಯಿಟ್ಟರು. ತಾವು ಈ ಪ್ರದೇಶಕ್ಕೆ ಹೊಸಬರೇ? ಎಂದು ಕ್ಯಾಂಟೀನ್ ಮಾಲೀಕರು ಪ್ರಶ್ನಿಸಿದ್ದಾರೆ. ಇದಕ್ಕೆ ಅವರು ಸರಿಯಾದ ಉತ್ತರವನ್ನು ನೀಡುವುದಿಲ್ಲ. ಅವರು ನಕಲಿ ಐಡಿ ಹೊಂದಿದ್ದರು ಮತ್ತು ಹೋಟೆಲ್‌ನಲ್ಲಿ ಕುಳಿತಿದ್ದ ಜನರಿಗೆ ಗನ್(ಆಟಿಕೆ ಗನ್) ತೋರಿಸಿದರು”ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
ಅವರು ಬಂದೂಕು ತೋರಿಸಿದ ನಂತರ ಸಾರ್ವಜನಿಕರು ಆಕ್ರೋಶಗೊಂಡರು ಮತ್ತು ಕೆಲವರು ಅವರನ್ನು ಹಿಡಿದು ಗನ್ ಕಿತ್ತುಕೊಂಡರು. ಆದರೆ ಅದು ಆಟಿಕೆ ಗನ್ ಎಂದು ತಿಳಿಯಿತು. ನಂತರ ಅವರು ನಕಲಿ ಪೊಲೀಸ್ ಅಧಿಕಾರಿ ಎಂದು ಶಂಕಿಸಿ ಅವರನ್ನು ಥಳಿಸಲು ಪ್ರಾರಂಭಿಸಿದರು. ಆದರೆ ಬಳ್ಳಾರಿ ಜಿಲ್ಲೆಯ ವಿಜಿಲೆನ್ಸ್ ಪೊಲೀಸರ ತಂಡ ಸ್ಥಳಕ್ಕೆ ಆಗಮಿಸಿ ಅವರನ್ನು ರಕ್ಷಿಸಿತು. ಪೊಲೀಸರು ಅರಣ್ಯ ಅಧಿಕಾರಿಯನ್ನು ವಶಕ್ಕೆ ಪಡೆದು ಗಾಂಧಿನಗರ ಠಾಣೆಗೆ ಕರೆದೊಯ್ದಿದ್ದಾರೆ.
ಅರಣ್ಯಾಧಿಕಾರಿ ವಿರುದ್ಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
"ಕ್ಯಾಂಟೀನ್ ಮಾಲೀಕರು ಪೊಲೀಸರಿಗೆ ಯಾವುದೇ ದೂರು ನೀಡಿಲ್ಲ, ಪೊಲೀಸರಂತೆ ಪೋಸ್ ಕೊಟ್ಟು ಲಂಚಕ್ಕೆ ಬೇಡಿಕೆಯಿಟ್ಟ ಅರಣ್ಯಾಧಿಕಾರಿ ವಿರುದ್ಧ ಕೇಸ್ ದಾಖಲಿಸುವ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಆ ಬಗ್ಗೆ ತನಿಖೆ ನಡೆಯುತ್ತಿದೆ ಮತ್ತು ಮುಂದಿನ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು ನಾವು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸುತ್ತೇವೆ ಎಂದು ಬಳ್ಳಾರಿಯ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


