ಕನ್ನಡ ರಾಜ್ಯೋತ್ಸವ ವಿಶೇಷ: ಬಿಎಂಆರ್ ಸಿಎಲ್ ನಿಂದ ಕ್ಯೂಆರ್ ಟಿಕೆಟ್ ಖರೀದಿಸುವ ಸೌಲಭ್ಯ
ಕನ್ನಡ ರಾಜ್ಯೋತ್ಸವಕ್ಕೆ ಬಿಎಂಆರ್ ಸಿಎಲ್ ರಾಜ್ಯದ ಜನತೆಗೆ ಉಡುಗೊರೆ ನೀಡಿದ್ದು, ಸಿಂಗಲ್ ಟ್ರಿಪ್ ಕ್ಯೂ ಆರ್ ಟಿಕೆಟ್ ಗಳನ್ನು ವಿತರಣೆ ಮಾಡಲಿದೆ.

ಬೆಂಗಳೂರು: ಕನ್ನಡ ರಾಜ್ಯೋತ್ಸವಕ್ಕೆ ಬಿಎಂಆರ್ ಸಿಎಲ್ ರಾಜ್ಯದ ಜನತೆಗೆ ಉಡುಗೊರೆ ನೀಡಿದ್ದು, ಸಿಂಗಲ್ ಟ್ರಿಪ್ ಕ್ಯೂ ಆರ್ ಟಿಕೆಟ್ ಗಳನ್ನು ವಿತರಣೆ ಮಾಡಲಿದೆ.
ನಂ.1 ರಿಂದ ಎಲ್ಲಾ ಮೆಟ್ರೊ ಸ್ಟೇಷನ್ ಗಳಲ್ಲಿ ಈ ಸೌಲಭ್ಯ ಜಾರಿಗೆ ಬರಲಿದ್ದು, ಆಂಡ್ರಾಯ್ಡ್ ಫೋನ್ ಗಳ ಮೂಲಕ ಈ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.
ಕ್ಯೂಆರ್ ಕೋಡ್ ಇಲ್ಲದೇ ಇದ್ದಲ್ಲಿ ವಾಟ್ಸ್ ಆಪ್ ನಂ. 810 555 6677 ಮೂಲಕವೂ ಈ ಸೇವೆಗಳನ್ನು ಪಡೆಯಬಹುದಾಗಿದೆ.
ನಮ್ಮ ಮೆಟ್ರೋ ಆಪ್ ಮೂಲಕ ಕ್ಯೂ ಆರ್ ಟಿಕೆಟ್ ಗಳನ್ನು ಪಡೆಯಬಹುದಾಗಿದೆ ಅಥವಾ ವಾಟ್ಸ್ ಆಪ್ ನಂ.810 555 6677 ಗೆ hi ಎಂಬ ಸಂದೇಶ ಕಳಿಸುವ ಮೂಲಕ ಕ್ಯೂಆರ್ ಟಿಕೆಟ್ ಗಳನ್ನು ಖರೀದಿಸುವ ಪ್ರಕ್ರಿಯೆಗೆ ಚಾಲನೆ ನೀಡಬಹುದಾಗಿದೆ.
ವಾಟ್ಸ್ ಆಪ್ ಚಾಟ್‌ಬಾಟ್ ಗಳ ಮೂಲಕ ಮೆಟ್ರೋ ಸ್ಮಾರ್ಟ್ ಕಾರ್ಡ್ ಗಳನ್ನೂ ರೀಚಾರ್ಜ್ ಮಾಡಿಸಬಹುದಾಗಿದೆ ಎಂದು ಮೆಟ್ರೋ ಪ್ರಕಟಣೆಯಲ್ಲಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


