ರಾಜ್ಯ

ಮುಂದಿನ ಮೂರು ತಿಂಗಳು ಭಾರೀ ಕಂಟಕ: ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ? ಅಪಾಯದಿಂದ ತಪ್ಪಿಸಿಕೊಳ್ಳಲು ಪರಿಹಾರವೇನು?

ಕಾರ್ತಿಕ, ಮಾರ್ಗಶಿರ ಮಾಸ, ಜನವರಿವರೆಗೂ ಲೋಕಕ್ಕೆ ಕಂಟಕವಿದೆ ಎಂದು ಶ್ರೀಗಳು ಹೇಳಿದ್ದಾರೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು ಅಲ್ಲೆಲ್ಲ ಅವಘಡ ಆಗುತ್ತವೆ ಎಂದಿದ್ದಾರೆ.

ಮುಂದಿನ ಮೂರು ತಿಂಗಳು ಭಾರೀ ಕಂಟಕ: ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ? ಅಪಾಯದಿಂದ ತಪ್ಪಿಸಿಕೊಳ್ಳಲು ಪರಿಹಾರವೇನು?
ಕೋಡಿಮಠದ ಸ್ವಾಮೀಜಿ
Published On :

ಬೆಂಗಳೂರು: ರಾಜಭೀತಿ, ಯುದ್ಧ ಭೀತಿ ಸೇರಿದಂತೆ ಲೋಕ ಕಂಟಕ, ಪ್ರಾದೇಶಿಕ ಕಂಟಕ, ಭೂಕಂಪದಂತಹ ಕಂಟಕಗಳು ಮನುಕುಲದ ಮೇಲೆ ದುಷ್ಪರಿಣಾಮ ಬೀರಲಿವೆ. ಮುಂದಿನ 3 ತಿಂಗಳು ಜಾಗರೂಕತೆಯಿಂದ ಇರಬೇಕು’ ಎಂದು ಕೋಡಿಮಠದ ಪೀಠಾಧ್ಯಕ್ಷ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದರು.

ತಾಲ್ಲೂಕಿನ ಹಾರನಹಳ್ಳಿ ಕೋಡಿಮಠದಲ್ಲಿ ಲೋಕಾ ಕಲ್ಯಾಣಾರ್ಥ ಹಮ್ಮಿಕೊಂಡಿದ್ದ ಮಹಾರುದ್ರ ಯಾಗ ಮುಗಿಸಿದ ಬಳಿಕ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದರು. ಕಾರ್ತಿಕ, ಮಾರ್ಗಶಿರ ಮಾಸ, ಜನವರಿವರೆಗೂ ಲೋಕಕ್ಕೆ ಕಂಟಕವಿದೆ ಎಂದು ಶ್ರೀಗಳು ಹೇಳಿದ್ದಾರೆ. ಪ್ರಾಕೃತಿಕವಾಗಿ, ಪ್ರಾದೇಶಿಕವಾಗಿ, ಇರಬಹುದು, ಭೂಕಂಟಕ ಇರಬಹುದು, ರಾಜಬೀದಿ ಇರಬಹುದು ಅಲ್ಲೆಲ್ಲ ಅವಘಡ ಆಗುತ್ತವೆ ಎಂದಿದ್ದಾರೆ.

‘ಪ್ರಾಕೃತಿಕ ವಿಕೋಪಗಳ ಭೀತಿ ಜತೆಗೆ ಮನುಷ್ಯರು ಪರಸ್ಪರ ಅಪನಂಬಿಕೆಯಿಂದ ತನ್ನ ಮಾನಸಿಕ ಸ್ಥಿರತೆ ಕಳೆದುಕೊಂಡು ಹುಚ್ಚರಂತೆ ವರ್ತಿಸುವುದು ಹಾಗೂ ದೇಹದ ಅಶಕ್ತತೆ ಯಿಂದ ಬೀದಿಯಲ್ಲಿ ಮೃತಪಡುವ ಕಾಲ ಬರಲಿದೆ. ಈ ಕಂಟಕಗಳಿಂದ ಪಾರಾಗಲು ಜನರು ದೇವರ ಮೊರೆ ಹೋಗಬೇಕು’ ಎಂದು ಹೇಳಿದರು.

ಕೋಡಿಮಠದ ಸ್ವಾಮೀಜಿ ಮತ್ತೊಮ್ಮೆ ಭಯಾನಕ ಭವಿಷ್ಯ ನುಡಿದಿದ್ದಾರೆ. ಪ್ರಾಕೃತಿಕ ವಿಕೋಪಗಳ ಭೀತಿ ಒಂದೆಡೆಯಾದರೆ, ಮತ್ತೊಂದೆಡೆ ಮನುಷ್ಯ ಮನುಷ್ಯನನ್ನು ನಂಬದೇ ತನ್ನ ಮನಸ್ಥಿತಿಯ ಮೇಲೆ ನಿಯಂತ್ರಣ ಕಳೆದುಕೊಂಡು ಹುಚ್ಚನಂತೆ ಆಗುತ್ತಾನೆ. ದೇಹದ ಆಶಕ್ತತೆಯಿಂದ ಹಾದಿ ಬೀದಿಯಲ್ಲಿ ಬಿದ್ದು ಸಾಯುವಂತ ಕಾಲ ಮುಂದಿನ ದಿನಗಳಲ್ಲಿ ಬರಲಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.