ಪರಿಷ್ಕೃತ ಪಠ್ಯಗಳ ಮರು ಪರಿಷ್ಕರಣೆ: 70 ಸಾವಿರ ಬುಕ್ ಲೆಟ್ ಮುದ್ರಣ
ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಈಗ ಮತ್ತೆ ಸುದ್ದಿಯಲ್ಲಿದೆ. ಪರಿಷ್ಕೃತ ಪಠ್ಯಗಳಲ್ಲಿ ಉಂಟಾಗಿದ್ದ ದೋಷಗಳನ್ನು ಸರಿಪಡಿಸಿ ಅಂತಿಮಗೊಳಿಸಲಾಗಿದೆ.

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಅತಿ ಹೆಚ್ಚು ಚರ್ಚೆಗೆ ಒಳಗಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಈಗ ಮತ್ತೆ ಸುದ್ದಿಯಲ್ಲಿದೆ. ಪರಿಷ್ಕೃತ ಪಠ್ಯಗಳಲ್ಲಿ ಉಂಟಾಗಿದ್ದ ದೋಷಗಳನ್ನು ಸರಿಪಡಿಸಿ ಅಂತಿಮಗೊಳಿಸಲಾಗಿದ್ದು ಈ ಬುಕ್ ಲೆಟ್ ನ 70 ಸಾವಿರ ಪ್ರತಿಗಳನ್ನು ಕರ್ನಾಟಕ ಪಠ್ಯ ಪುಸ್ತಕ ಸೊಸೈಟಿ (ಕೆಟಿಬಿಎಸ್) ಮುದ್ರಣ ಮಾಡಿದೆ.
ಈ ಮುದ್ರಿತ ಪ್ರತಿಗಳನ್ನು ರಾಜ್ಯಾದ್ಯಂತ 70 ಸಾವಿರ ಶಾಲೆಗಳಿಗೆ ಒಂದು ವಾರದ ಅವಧಿಯಲ್ಲಿ ವಿತರಣೆ ಮಾಡಲಾಗುತ್ತದೆ ಎಂದು ಕೆಟಿಬಿಎಸ್ ನ ಎಂಡಿ ಮಾದೇಗೌಡ ಎಂ.ಪಿ ತಿಳಿಸಿದ್ದಾರೆ.
ಇದೇ ವೇಳೆ ಶಾಲೆಗಳು ಪುನಾರಂಭಗೊಂಡು ನಾಲ್ಕು ತಿಂಗಳ ಬಳಿಕ, ಶಾಲೆಗಳಿಗೆ ಪರಿಷ್ಕೃತ ಪಠ್ಯಗಳನ್ನು ವಿತರಣೆ ಮಾಡಲಾಗಿದೆ ಎಂದು ಮಾದೇಗೌಡ ಹೇಳಿದ್ದಾರೆ.
ಶಿಕ್ಷಣ ಇಲಾಖೆ 200 ಕೋಟಿ ರೂಪಾಯಿ ವೆಚ್ಚದಲ್ಲಿ ಪಠ್ಯಗಳನ್ನು ಮುದ್ರಿಸಿದ್ದು, ಪರಿಷ್ಕೃತಗೊಂಡ ಪಠ್ಯಗಳಲ್ಲಿನ ದೋಷಗಳನ್ನು ತಿದ್ದುವುದಕ್ಕೆ ಹೆಚ್ಚುವರಿ 12 ಲಕ್ಷ ರೂಪಾಯಿ ವೆಚ್ಚವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


