'ಕಾಂತಾರ' ಚಿತ್ರ ವೀಕ್ಷಿಸಿ ನಟ ರಿಷಬ್ ಶೆಟ್ಟಿಗೆ ಕರೆ ಮಾಡಿ ಶ್ಲಾಘಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್
ಕಾಂತಾರ ಕನ್ನಡ ಚಿತ್ರ ಭಾಷೆ, ಗಡಿಯನ್ನು ಮೀರಿ ರಾಜ್ಯ, ರಾಷ್ಟ್ರ ಮಾತ್ರವೇಕೆ ವಿದೇಶದಲ್ಲಿಯೂ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಅದರ ಹವಾ ಮಾತ್ರ ಕಡಿಮೆಯಾಗಿಲ್ಲ. ಕೇವಲ ಕಲಾವಿದರು, ಸಾಮಾನ್ಯ ವ್ಯಕ್ತಿಗಳು ಮಾತ್ರವಲ್ಲ ರಾಜಕೀಯ ನಾಯಕರು ಕೂಡ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ.

ಬೆಂಗಳೂರು: ಕಾಂತಾರ ಕನ್ನಡ ಚಿತ್ರ ಭಾಷೆ, ಗಡಿಯನ್ನು ಮೀರಿ ರಾಜ್ಯ, ರಾಷ್ಟ್ರ ಮಾತ್ರವೇಕೆ ವಿದೇಶದಲ್ಲಿಯೂ ಸದ್ದು ಮಾಡುತ್ತಿದೆ. ಚಿತ್ರ ಬಿಡುಗಡೆಯಾಗಿ ಒಂದು ತಿಂಗಳು ಕಳೆದರೂ ಅದರ ಹವಾ ಮಾತ್ರ ಕಡಿಮೆಯಾಗಿಲ್ಲ. ಕೇವಲ ಕಲಾವಿದರು, ಸಾಮಾನ್ಯ ವ್ಯಕ್ತಿಗಳು ಮಾತ್ರವಲ್ಲ ರಾಜಕೀಯ ನಾಯಕರು ಕೂಡ ಈ ಚಿತ್ರವನ್ನು ಇಷ್ಟಪಟ್ಟಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ಆರಂಭವಾಗಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಾಂತಾರ ಚಿತ್ರವನ್ನು ಪ್ರಸ್ತಾಪಿಸಿದರು. ಕಾಂತಾರ ಚಿತ್ರ 15-16 ಕೋಟಿ ರೂಪಾಯಿಗಳಲ್ಲಿ ತಯಾರಾದ ಚಿತ್ರ, ಇಂದು 300 ಕೋಟಿಗೂ ಅಧಿಕ ಹಣ ಗಳಿಸಿದೆ. ಹೂಡಿಕೆದಾರರು ಕಾಂತಾರ ಚಿತ್ರವನ್ನು ನೋಡಿ ಕಲಿಯಬೇಕು ಎಂದಿದ್ದರು.
ಅಷ್ಟು ಹೇಳಿದ್ದೇ ತಡ, ಸಮಾರಂಭಕ್ಕೆ ಆಗಮಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಜೆ ವಿರಾಮದ ಸಮಯದಲ್ಲಿ ಬೆಂಗಳೂರಿನಲ್ಲಿ ಕಾಂತಾರ ಚಿತ್ರವನ್ನು ವೀಕ್ಷಿಸಿದ್ದಾರೆ. ಅಷ್ಟೇ ಏಕೆ ನಟ ರಿಷಬ್ ಶೆಟ್ಟಿಗೆ ಕರೆ ಮಾಡಿ ಅವರ ನಟನೆ, ನಿರ್ದೇಶನಕ್ಕೆ ಪ್ರಶಂಸಿಸಿದ್ದಾರೆ.
ಬರಹಗಾರನಾಗಿ, ನಿರ್ದೇಶಕನಾಗಿ, ನಟನಾಗಿ ರಿಷಬ್ ಶೆಟ್ಟಿ ಅದ್ಭುತವಾದ ಚಿತ್ರ ತೆಗೆದಿದ್ದಾರೆ. ತುಳುನಾಡು, ಕರಾವಳಿಯ ಸಂಪದ್ಭರಿತ ಸಂಸ್ಕೃತಿ, ಸಂಪ್ರದಾಯಗಳನ್ನು ಚಿತ್ರ ಸೆರೆಹಿಡಿದಿದೆ ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


