ಮೂಡಲಗಿ ಚರಂಡಿಯಲ್ಲಿ ಭ್ರೂಣ ಪತ್ತೆ ಪ್ರಕರಣ: ಆಸ್ಪತ್ರೆ ಸೀಲ್
ಮೂಡಲಗಿ ಪಟ್ಟಣದ ಚರಂಡಿಯಲ್ಲಿ ಭ್ರೂಣ ಪತ್ತೆಯಾದ ಒಂದು ದಿನದ ನಂತರ ಸಂಬಂಧಪಟ್ಟ ಅಧಿಕಾರಿಗಳು ಶನಿವಾರ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್'ನ್ನು ಸೀಲ್ ಮಾಡಿದ್ದಾರೆ.

ಬೆಳಗಾವಿ: ಮೂಡಲಗಿ ಪಟ್ಟಣದ ಚರಂಡಿಯಲ್ಲಿ ಭ್ರೂಣ ಪತ್ತೆಯಾದ ಒಂದು ದಿನದ ನಂತರ ಸಂಬಂಧಪಟ್ಟ ಅಧಿಕಾರಿಗಳು ಶನಿವಾರ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್'ನ್ನು ಸೀಲ್ ಮಾಡಿದ್ದಾರೆ.
ಬೆಳಗಾವಿ ಡಿಎಚ್ಓ ಮಹೇಶ ಕೋಣಿ, ಮೂಡಲಗಿ ಪೊಲೀಸರ ನೇತೃತ್ವದ ಅಧಿಕಾರಿಗಳ ತಂಡ ಸ್ಕ್ಯಾನಿಂಗ್ ಸೆಂಟರ್, ಆರು ಹೆರಿಗೆ ಆಸ್ಪತ್ರೆಗಳ ಮೇಲೆ ದಾಳಿ ನಡೆಸಿ ವೆಂಕಟೇಶ ಮೆಟರ್ನಿಟಿ ಆಸ್ಪತ್ರೆ ಹಾಗೂ ನವಜೀವನ ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
ಪ್ರಾಥಮಿಕ ತನಿಖೆಯ ನಂತರ, ಡಿಎಚ್‌ಒ ವೆಂಕಟೇಶ್ ಅವರಿಗೆ ಹೆರಿಗೆ ಆಸ್ಪತ್ರೆ ಮತ್ತು ಸ್ಕ್ಯಾನಿಂಗ್ ಸೆಂಟರ್ ಲಿಂಗ ನಿರ್ಣಯ ಪರೀಕ್ಷೆಗಳನ್ನು ನಡೆಸುವ ಮತ್ತು ಭ್ರೂಣಗಳನ್ನು ಗರ್ಭಪಾತ ಮಾಡುತ್ತಿರುವ ಅನುಮಾನಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಸೆಂಟರ್'ನ್ನು ಸೀಲ್ ಮಾಡಿದ್ದಾರೆ.
ಈ ನಡುವೆ ಆಸ್ಪತ್ರೆ ವೈದ್ಯೆ ಡಾ.ವೀಣಾ ಕಣಕರೆಡ್ಡಿ ಅವರು 7 ಭ್ರೂಣಗಳನ್ನು ನಾವೇ ಎಸೆದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಫಾರ್ಮಲಿನ್ ದ್ರಾವಣದಲ್ಲಿ ಭ್ರೂಣಗಳನ್ನು ಸಂರಕ್ಷಣೆ ಮಾಡಿ ಬಾಟಲ್'ನಲ್ಲಿ ಇಡಲಾಗಿತ್ತು. ಅಧಿಕಾರಿಗಳ ದಾಳಿಗೆ ಹೆದರಿ ಹಳೆಯ ಆಸ್ಪತ್ರೆಯಿಂದ ಹೊಸ ಆಸ್ಪತ್ರೆಗೆ ಸ್ಥಳಾಂತರ ಆಗುವಾಗ ಕಳೆದ 4 ದಿನಗಳ ಹಿಂದಷ್ಟೇ ಆಸ್ಪತ್ರೆಯ ಆಯಾ ಬಳಿ ಭ್ರೂಣಗಳನ್ನು ಎಸೆಯಲು ಕೊಟ್ಟಿದ್ದಾರೆ.
ಸ್ಕ್ಯಾನಿಂಗ್ ಸಮಯದಲ್ಲಿ ಅಸಹಜವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಪೋಷಕರು ಅವುಗಳನ್ನು ಗರ್ಭಪಾತ ಮಾಡಿದ್ದರು ಆ ಭ್ರೂಣಗಳನ್ನು 2013 ಮತ್ತು 2016 ರ ನಡುವೆ ಗರ್ಭಪಾತ ಮಾಡಲಾಗಿದೆ. ವಾಡಿಕೆಯ ತಪಾಸಣೆಗಾಗಿ ಆಸ್ಪತ್ರೆಗಳಿಗೆ ಭೇಟಿ ನೀಡುವ ಗರ್ಭಿಣಿಯರಿಗೆ ತೋರಿಸಲು ಅವುಗಳನ್ನು ಕಂಟೈನರ್‌ಗಳಲ್ಲಿ ಮಾದರಿಗಳಾಗಿ ಸಂರಕ್ಷಿಸಿಡಲಾಗಿತ್ತು. ಆದರೆ, ನಮ್ಮ ಕೆಲ ಸಿಬ್ಬಂದಿ ನನ್ನ ಗಮನಕ್ಕೆ ತರದೆ ಚರಂಡಿಗೆ ವಿಲೇವಾರಿ ಮಾಡಿ ಆಸ್ಪತ್ರೆಯಿಂದ ಹೊರ ಹಾಕಿದ್ದಾರೆ’ ಎಂದು ವೈದ್ಯೆ ವೀಣಾ ಕನಕರೆಡ್ಡಿ ತಿಳಿಸಿದ್ದಾರೆ.
ಆದರೆ, ವೈದ್ಯರ ಹೇಳಿಕೆಗೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಯಾವುದೇ ದಾಖಲೆಗಳೂ ಕಂಡು ಬಂದಿಲ್ಲ. ಹೀಗಾಗಿ ವೈದ್ಯರ ಮೇಲೆ ಅನುಮಾನಗಳು ಬಂದಿದ್ದು, ಆಸ್ಪತ್ರೆಯನ್ನು ಸೀಜ್ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


