ಮೈಸೂರು: ಬೆಳಗಿನ ಉಪಹಾರವಾಗಿ ಮೈಸೂರು ಪಾಕ್, ಮಸಾಲೆ ದೋಸೆ ಸವಿದ ಪ್ರಧಾನಿ ಮೋದಿ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದು ಮೈಸೂರಿನ ಅರಮನೆಯಲ್ಲಿ ರಾಜಮನೆತನದವರೊಂದಿಗೆ ಪ್ರಸಿದ್ಧವಾದ ಮೈಸೂರು ಪಾಕ್ ಮತ್ತು ಮೈಸೂರು ಮಸಾಲೆ ದೋಸೆಯ ರುಚಿಯನ್ನು ಸವಿದಿದ್ದಾರೆ.

ಮೈಸೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಂದು ಮೈಸೂರಿನ ಅರಮನೆಯಲ್ಲಿ ರಾಜಮನೆತನದವರೊಂದಿಗೆ ಪ್ರಸಿದ್ಧವಾದ ಮೈಸೂರು ಪಾಕ್ ಮತ್ತು ಮೈಸೂರು ಮಸಾಲೆ ದೋಸೆಯ ರುಚಿಯನ್ನು ಸವಿದಿದ್ದಾರೆ.
ಅಂಬಾ ವಿಲಾಸ ಪ್ಯಾಲೇಸ್ ಆವರಣದಲ್ಲಿ ಯೋಗ ದಿನಾಚರಣೆ ಕಾರ್ಯಕ್ರಮದ ನಂತರ ದಸರಾ ವಸ್ತುಪ್ರದರ್ಶನ ಮೈದಾನದಲ್ಲಿ ಆಯೋಜಿಸಲಾಗಿದ್ದ 'ವಿನೂತನ ಡಿಜಿಟಲ್ ಯೋಗ ಪ್ರದರ್ಶನ' ಉದ್ಘಾಟಿಸಿದ ಪ್ರಧಾನಿ, ರಾಜಮನೆತನದವರ ಆಹ್ವಾನದ ಮೇರೆಗೆ ಅರಮನೆಗೆ ತೆರಳಿ ಬೆಳಗಿನ ಉಪಹಾರ ಸ್ವೀಕರಿಸಿದರು.
ಮೈಸೂರಿನ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ರಾಜಮಾತೆ" ಪ್ರಮೋದಾ ದೇವಿ ಒಡೆಯರ್ ಕೂಡಾ ಯೋಗ ದಿನಾಚರಣೆಯಲ್ಲಿ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದರು. ಬೆಳಗಿನ ಉಪಾಹಾರಕ್ಕೆ ಆಹ್ವಾನಿಸಿ ಪ್ರಧಾನಿಗೆ ಪತ್ರ ಬರೆದಿದ್ದಾಗಿ ಪ್ರಮೋದಾ ದೇವಿ ಒಡೆಯರ್ ತಿಳಿಸಿದರು.
ಮೈಸೂರಿಗೆ ಯೋಗ ದಿನಾಚರಣೆಗೆ ಬಂದಾಗ ಬೆಳಗ್ಗೆನ ಉಪಹಾರಕ್ಕಾಗಿ ತಮ್ಮ ಮನೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೆ. ನಮ್ಮ ಮನೆಯಲ್ಲಿ ಪ್ರಧಾನಿ ಉಪಹಾರ ಸ್ವೀಕರಿಸಿದರಿಂದ ತುಂಬಾ ಸಂತೋಷವಾಗಿದೆ ಎಂದರು.
ಮೈಸೂರಿನವರಾಗಿ ಸಾಮಾನ್ಯವಾಗಿ ದಕ್ಷಿಣ ಪ್ರದೇಶದ ಆಹಾರ ಪದಾರ್ಥಗಳು ಪ್ರಧಾನಿಯವರ ಬೆಳಗಿನ ಉಪಹಾರದ ಮೆನುವಿನಲ್ಲಿತ್ತು. ಮೈಸೂರು ಮೂಲವನ್ನು ಹೊಂದಿರುವ ಮೈಸೂರು ಪಾಕ್, ಮೈಸೂರು ಮಸಾಲೆ ದೋಸೆ ಕೂಡ ಪ್ರಧಾನಿ ಅವರ ಮೆನುವಿನಲ್ಲಿತ್ತು ಎಂದು ರಾಜಮಾತೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


