ಕಮಾಂಡೊ ಸುಬೇದಾರ್ ಮೇಜರ್ ಸಿಂಗ್ ನಾಪತ್ತೆ ಪ್ರಕರಣ: ತಂಡ ರಚಿಸಿ, ಹುಡುಕಾಟ ತೀವ್ರಗೊಳಿಸಿದ ಪೊಲೀಸರು
ಜೂನ್ 11 ರಂದು ಬೆಳಗಾವಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಕಮಾಂಡೋ ಸುಬೇದಾರ್ ಮೇಜರ್ ಸಿಂಗ್ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.

ಬೆಳಗಾವಿ: ಜೂನ್ 11 ರಂದು ಬೆಳಗಾವಿಯಿಂದ ನಿಗೂಢವಾಗಿ ನಾಪತ್ತೆಯಾಗಿರುವ ಕಮಾಂಡೋ ಸುಬೇದಾರ್ ಮೇಜರ್ ಸಿಂಗ್ ಪತ್ತೆಗೆ ಪೊಲೀಸರು ತಂಡ ರಚಿಸಿದ್ದು, ಹುಡುಕಾಟ ತೀವ್ರಗೊಳಿಸಿದ್ದಾರೆ.
ಸುಬೇದಾರ್ ಎಂಎಲ್ಐಆರ್'ಸಿ ಬೆಳಗಾವಿಯ ಕಮಾಂಡೋ ವಿಂಗ್'ಗೆ ಸೇರಿದವರಾಗಿದ್ದು, ಪಂಜಾಬ್'ನ ಗುರುದಾಸ್ ಪುರ ಜಿಲ್ಲೆಯ ಮೂಲದವರಾಗಿದ್ದಾರೆ. ಫೋನ್ ರಿಪೇರಿ ಮಾಡಿಸಲೆಂದು ಸುಬೇದಾರ್ ಅವರು ಜೂನ್.11 ರಂದು ಓಲ್ಡ್ ಸಿಟಿಗೆ ಬಂದಿದ್ದಾರೆ.
ಕೇಳ್ಕರ್ ಬಾಗ್‌ನಲ್ಲಿರುವ ವೈಶಾಲಿ ಕಿಚನ್ ಬಳಿ ಸುಬೇದಾರ್ ಅವರು ತಮ್ಮ ಸೈಕಲ್ ಪಾರ್ಕ್ ಮಾಡಿರುವುದು ಕಂಡು ಬಂದಿದೆ. ಸಾಕಷ್ಟು ಸಮಯವಾದರೂ ಸುಬೇದಾರ್ ಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ಸುಬೇದಾರ್ ಜೊತೆಗೆ ಕೆಲಸ ಮಾಡುತ್ತಿದ್ದ ಇತರೆ ಯೋಧರು ಹುಡುಕಾಡಿದ್ದಾರೆ. ಆದರೆ, ಎಲ್ಲಿಯೂ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ.
ವೈಶಾಲಿ ಕಿಚನ್ ಬಳಿಕ ಸುಬೇದಾರ್ ಅವರ ಸೈಕಲ್ ಪತ್ತೆಯಾಗಿದೆ. ಸುಬೇದಾರ್ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅವರ ಕುಟುಂಬಸ್ಥರು ಚಿಂತಿತರಾಗಿದ್ದಾರೆ. ಇವರ ಬಗ್ಗೆ ಯಾರಿಗೇ ಮಾಹಿತಿ ಸಿಕ್ಕರೂ 9899217518 ಈ ಮೊಬೈಲ್ ಸಂಖ್ಯೆಗೆ ಕರೆ ಮಾಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಉಪ ಪೊಲೀಸ್ ಆಯುಕ್ತ ಪಿವಿ ಸ್ನೇಹಾ ಅವರು ಮಾತನಾಡಿ, ಸುಬೇದಾರ್ ನಾಪತ್ತೆ ಕುರಿತು ತನಿಖೆ ಆರಂಭಿಸಲಾಗಿದೆ. ಆವರ ಬಗ್ಗೆ ಮಾಹಿತಿ ನೀಡಿದವರಿಗೆ ರೂ.50,000 ಬಹುಮಾನ ನೀಡಲಾಗುತ್ತದೆ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


