ರಾಜ್ಯ

ನಟಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು ಆರೋಪ: ಮನ್ಮಿತ್ ರೈ ಹೇಳಿದ್ದೇನು?

ಜಯ ಕರ್ನಾಟಕ ಸಂಘಟನೆಯ ಸ್ಥಾಪಕ, ಒಂದು ಕಾಲದಲ್ಲಿ ಡಾನ್ ಎಂದು ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ಮುತ್ತಪ್ಪ ರೈಯವರ ಆಪ್ತರಾಗಿದ್ದ, ಸಂಘಟನೆ ಜೊತೆ ಸಕ್ರಿಯವಾಗಿದ್ದ ಹಾಗೂ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಸೋದರ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ನಡೆಸಲಾಗಿತ್ತು ಎಂಬ ವದಂತಿ ಹರಿದಾಡುತ್ತಿದೆ.

ನಟಿ ಅನುಷ್ಕಾ ಶೆಟ್ಟಿ ಸೋದರನ ಹತ್ಯೆಗೆ ಸಂಚು ಆರೋಪ: ಮನ್ಮಿತ್ ರೈ ಹೇಳಿದ್ದೇನು?
ನಟಿ ಅನುಷ್ಕಾ ಶೆಟ್ಟಿ, ಸೋದರ ಗುಣರಂಜನ್ ಶೆಟ್ಟಿ ತಾಯಿಯೊಂದಿಗೆ ಸಂಗ್ರಹ ಚಿತ್ರ
Published On :

ಬೆಂಗಳೂರು: ಜಯ ಕರ್ನಾಟಕ ಸಂಘಟನೆಯ ಸ್ಥಾಪಕ, ಒಂದು ಕಾಲದಲ್ಲಿ ಡಾನ್ ಎಂದು ಗುರುತಿಸಿಕೊಂಡಿದ್ದ ಮಂಗಳೂರು ಮೂಲದ ಮುತ್ತಪ್ಪ ರೈಗೆ ಆಪ್ತರಾಗಿದ್ದ, ಸಂಘಟನೆ ಜೊತೆ ಸಕ್ರಿಯವಾಗಿದ್ದ ಹಾಗೂ ಖ್ಯಾತ ನಟಿ ಅನುಷ್ಕಾ ಶೆಟ್ಟಿಯವರ ಸೋದರ ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ನಡೆಸಲಾಗಿತ್ತು ಎಂಬ ವದಂತಿ ಹರಿದಾಡುತ್ತಿದೆ.

ಹಿಂದೆ ಜಯ ಕರ್ನಾಟಕ ಸಂಘಟನೆಯಲ್ಲಿದ್ದು, ಈಗ ದೂರವಾಗಿರುವ ಮುತ್ತಪ್ಪ ರೈ ಸಂಬಂಧಿ ಮನ್ಮಿತ್ ರೈನಿಂದ ಗುಣರಂಜನ್ ಶೆಟ್ಟಿ ಕೊಲೆಗೆ ಸ್ಕೆಚ್ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ ಮನ್ಮಿತ್ ರೈ ವಿದೇಶದಲ್ಲಿರುವ ಬಗ್ಗೆ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಇನ್ನೂ ಗುಣರಂಜನ್ ‌ಕೊಲೆಗೆ ಸ್ಕೆಚ್ ಸಂಬಂಧಿಸಿದಂತೆ ಬಂಟ್ವಾಳದ ಮುತ್ತಪ್ಪ ರೈ ಆಪ್ತ ರಾಕೇಶ್ ಮಲ್ಲಿಯನ್ನ ಮಂಗಳೂರು ಪೊಲೀಸರು ಕರೆಸಿ ವಿಚಾರಣೆ ನಡೆಸಿದ್ದಾರೆ. ರಾಕೇಶ್ ಮಲ್ಲಿ ಹಾಗೂ ಮನ್ಮಿತ್ ಆಪ್ತರಾಗಿದ್ದು, ಇದೇ ವಿಚಾರಕ್ಕೆ ಪೊಲೀಸರು ‌ಕರೆಸಿ ವಿಚಾರಣೆ ಮಾಡಿದ್ದಾರೆ. ರೈ ಬದುಕಿದ್ದಾಗ ಒಟ್ಟಿಗೆ  ಇದ್ದ ರಾಕೇಶ್ ಮಲ್ಲಿ, ಮನ್ಮಿತ್ ಹಾಗೂ ಗುಣರಂಜನ್ ಶೆಟ್ಟಿ ಮುತ್ತಪ್ಪ ರೈ ಸಾವಿನ‌ ನಂತರ ದೂರಾಗಿದ್ದರು.

ಗುಣರಂಜನ್ ಶೆಟ್ಟಿ ಜಯ ಕರ್ನಾಟಕ ಸಂಘಟನೆಯಿಂದ ಹೊರ ಬಂದು ಜಯ ಕರ್ನಾಟಕ ಜನಪರ ವೇದಿಕೆ ಸ್ಥಾಪಿಸಿದರು. ಅಷ್ಟೇ ಅಲ್ಲದೇ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹೋದರನಾಗಿರುವ ಗುಣರಂಜನ್ ಶೆಟ್ಟಿ ಮಂಗಳೂರು ಮತ್ತು ಬೆಂಗಳೂರು ಭಾಗದಲ್ಲಿ ಹೆಸರು ಮಾಡಿದ್ದಾರೆ. ಜೊತೆಗೆ ಮುತ್ತಪ್ಪ ರೈ ಆಪ್ತವಲಯದಲ್ಲಿ ಗುರುಸಿಕೊಂಡಿದ್ರು. ಈ ಕಾರಣಕ್ಕೆ ಗುಣರಂಜನ್ ಶೆಟ್ಟಿ ಕೊಲೆ ಮಾಡಿದ್ರೆ ದೊಡ್ಡ ಮಟ್ಟದ ಹೆಸರು ಮಾಡಬಹುದೆಂದು ಈ ಕೊಲೆಗೆ ಸ್ಕೆಚ್ ಹಾಕಲಾಗಿದೆ ಎಂದು ಹೇಳಲಾಗುತ್ತಿದೆ. 

ಗುಣರಂಜನ್ ಶೆಟ್ಟಿ ಕೊಲೆಗೆ ಸಂಚು ವಿಚಾರವಾಗಿ ಇಂದು ಗೃಹಮಂತ್ರಿಗಳಿಗೂ ಸಂಘಟನೆ ವತಿಯಿಂದ ಮನವಿ ಸಲ್ಲಿಸಿದ್ದು ಆರೋಪಿಗಳನ್ನ ಶೀಘ್ರವಾಗಿ ಪತ್ತೆ ಮಾಡುವಂತೆ ಕೇಳಿಕೊಂಡಿದ್ದಾರೆ.

ಮನ್ಮಿತ್ ರೈ ಸ್ಪಷ್ಟನೆ: ಗುಣರಂಜನ್ ಶೆಟ್ಟಿ ಹತ್ಯೆಗೆ ನಾನು ಸಂಚು ರೂಪಿಸಿದ್ದೆ ಎಂದು ಮಾಧ್ಯಮಗಳಲ್ಲಿ ವದಂತಿ ಕೇಳಿಬರುತ್ತಿದ್ದು, ಈ ಸುದ್ದಿ ಹೇಗೆ ಹುಟ್ಟಿಕೊಂಡಿತು ಎಂದು ನನಗೆ ಗೊತ್ತಿಲ್ಲ. ನನಗೂ ಇದಕ್ಕೂ ಸಂಬಂಧವೇ ಇಲ್ಲ, ನಾನು ಸದ್ಯ ವಿದೇಶದಲ್ಲಿದ್ದು ನನ್ನ ಉದ್ಯಮ ಸಂಬಂಧ ವಿದೇಶಕ್ಕೆ ಬಂದಿದ್ದೇನೆ, ಪೊಲೀಸ್ ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

ನನ್ನ ವಿರುದ್ಧ ಯಾವುದೇ ಪೊಲೀಸ್ ಸ್ಟೇಷನ್ ನಲ್ಲಿ ಇದುವರೆಗೆ ದೂರು ದಾಖಲಾಗಿಲ್ಲ, ಆರೋಪಗಳಿಲ್ಲ, ನನ್ನ ವಿರುದ್ಧ ಹೀಗೆ ಏಕೆ ದೂರುತ್ತಿದ್ದಾರೆ ಗೊತ್ತಾಗುತ್ತಿಲ್ಲ ಎಂದರು. 

ಗುಣರಂಜನ್ ಶೆಟ್ಟಿ ಪ್ರತಿಕ್ರಿಯೆ: ಇನ್ನು ತಮಗೆ ಕೊಲೆ ಬೆದರಿಕೆ ಸಂಚು ಬಂದಿರುವ ಸುದ್ದಿ ಬಗ್ಗೆ ಪ್ರತಿಕ್ರಿಯಿಸಿರುವ ನಟಿ ಅನುಷ್ಕಾ ಶೆಟ್ಟಿ ಸೋದರ ಗುಣರಂಜನ್ ಶೆಟ್ಟಿ, ನನಗೆ ಮಂಗಳೂರಿನಿಂದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಫೋನ್ ಮಾಡಿದರು. ನಿಮಗೆ ಕೊಲೆ ಬೆದರಿಕೆ ಇದೆ, ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ತೆಗೆದುಕೊಳ್ಳುತ್ತಿದೆ, ನೀವು ಹುಷಾರಾಗಿರಿ ಎಂದು ಹೇಳಿದರು ಎಂದರು.

ನನಗೆ ಕೊಲೆ ಬೆದರಿಕೆ ಇದೆ ಎಂಬ ವಿಷಯ ಮಾಧ್ಯಮಗಳಿಂದಲೇ ನನಗೆ ಗೊತ್ತಾಗಿದ್ದು, ದೊಡ್ಡ ಮನುಷ್ಯರು, ಪ್ರಭಾವಿಗಳು ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತನಿಖೆ ನಡೆಯಲಿ, ಸತ್ಯ ಹೊರಗೆ ಬರುತ್ತದೆ ಎಂದರು. 

ಈ ಹಿಂದೆಯೂ ಹಲವು ಬಾರಿ ಮುತ್ತಪ್ಪ ರೈ ಆಪ್ತ ಬಳಗದ ಗಲಾಟೆ ಸದ್ದು ಮಾಡಿತ್ತು. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.