ಹೆಚ್ ಎಂಎಸ್ ಸಂಸ್ಥೆಗೂ ಯುನಾನಿ ಮೆಡಿಕಲ್ ಕಾಲೇಜಿಗೂ ಸಂಬಂಧವಿಲ್ಲ: ತುಮಕೂರಿನ ಮಾಜಿ ಶಾಸಕ ಸ್ಪಷ್ಟನೆ
ನಗರದ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯನ್ನು ಕೇಂದ್ರ ತನಿಖಾ ತಂಡ(NIA)ದವರು ಬಂಧಿಸಿದ್ದಾರೆ ಎಂಬ ವದಂತಿಯಿದೆ. ಯುನಾನಿ ಮೆಡಿಕಲ್ ಕಾಲೇಜು 15 ವರ್ಷಗಳ ಹಿಂದೆ ಹೆಚ್ ಎಂಎಸ್ ವಿದ್ಯಾಸಂಸ್ಥೆಯಿಂದ ಮುಂಬೈಯ ಐಡಳಿತ ಮಂಡಳಿಗೆ ಮಾರಾಟ ಮಾಡಿದ್ದೆವು ಎಂದು ತುಮಕೂರಿನ ಮಾಜಿ ಶಾಸಕ ಸ್ಪಷ್ಟೀಕರಣ ನೀಡಿದ್ದಾರೆ.

ತುಮಕೂರು: ನಗರದ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯನ್ನು ಕೇಂದ್ರ ತನಿಖಾ ತಂಡ(NIA)ದವರು ಬಂಧಿಸಿದ್ದಾರೆ ಎಂಬ ವದಂತಿಯಿದೆ. ಯುನಾನಿ ಮೆಡಿಕಲ್ ಕಾಲೇಜು 15 ವರ್ಷಗಳ ಹಿಂದೆ ಹೆಚ್ ಎಂಎಸ್ ವಿದ್ಯಾಸಂಸ್ಥೆಯಿಂದ ಮುಂಬೈಯ ಐಡಳಿತ ಮಂಡಳಿಗೆ ಮಾರಾಟ ಮಾಡಿದ್ದೆವು ಎಂದು ತುಮಕೂರಿನ ಮಾಜಿ ಶಾಸಕ ಸ್ಪಷ್ಟೀಕರಣ ನೀಡಿದ್ದಾರೆ.
ಆಡಳಿತ ಮಂಡಳಿಯವರು ಯುನಾನಿ ವೈದ್ಯಕೀಯ ಕಾಲೇಜನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೂ ಹೆಚ್ ಎಂಎಸ್ ವಿದ್ಯಾಸಂಸ್ಥೆಗೂ ಯಾವುದೇ ಸಂಬಂಧವಿಲ್ಲ. ಇದು ಹೆಚ್ ಎಂಎಸ್ ವಿದ್ಯಾಸಂಸ್ಥೆಗೆ ಸೇರಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಷ್ಟ್ರೀಯ ತನಿಖಾ ದಳ (ಎನ್ಐಎ) ರಾಜ್ಯದ ಭಟ್ಕಳ, ತುಮಕೂರು ಹಾಗೂ 5 ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್- ಸಿರಿಯಾ (ISIS) ಭಯೋತ್ಪಾದಕ ಸಂಘಟನೆಯನ್ನು ಬೆಂಬಲಿಸುತ್ತಿದ್ದ ಇಬ್ಬರನ್ನು ಭಟ್ಕಳದಲ್ಲಿ ವಶಕ್ಕೆ ಪಡೆದಿದೆ. ಐಎಸ್ಐಎಸ್ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಡಿ 30 ವರ್ಷದ ಅಬ್ದುಲ್ ಮುಕ್ತದೀರ್ ಹಾಗೂ ಆತನ ಸಹೋದರನನ್ನು ಎನ್ಐಎ ವಶಕ್ಕೆ ಪಡೆದಿದೆ.
ಅದರಲ್ಲಿ ತುಮಕೂರಿನ ಯುನಾನಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಯನ್ನು ಐಸಿಸ್ ಜೊತೆ ಸಂಪರ್ಕ ಹೊಂದಿರುವ ಶಂಕೆ ಮೇಲೆ ವಶಕ್ಕೆ ಪಡೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


