ಉಡುಪಿ: ಸಿಇಟಿ ರ್ಯಾಂಕ್ ವಿಜೇತ ಅವಳಿ ಸಹೋದರರು, ನೀಟ್ ನತ್ತ ಚಿತ್ತ!
ಶನಿವಾರ ಪ್ರಕಟವಾದ ಸಿಇಟಿ ಪರೀಕ್ಷೆ ಫಲಿತಾಂಶದಲ್ಲಿ ಮಣಿಪಾಲ್ ನ ಮಾಧವ ಕೃಪ ಇಂಗ್ಲೀಷ್ ಮಾಧ್ಯಮ ಶಾಲೆಯ ಅವಳಿ ಸಹೋದರರಾದ ವ್ರಜೇಶ್ ಮತ್ತು ವ್ರಿಷಣ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ.

ಉಡುಪಿ: ಶನಿವಾರ ಪ್ರಕಟವಾದ ಸಿಇಟಿ ಪರೀಕ್ಷೆ ಫಲಿತಾಂಶದಲ್ಲಿ ಮಣಿಪಾಲ್ ನ ಮಾಧವ ಕೃಪ ಇಂಗ್ಲೀಷ್ ಮಾಧ್ಯಮ ಶಾಲೆಯ ಅವಳಿ ಸಹೋದರರಾದ ವ್ರಜೇಶ್ ಮತ್ತು ವ್ರಿಷಣ್ ಕ್ರಮವಾಗಿ ಎರಡು ಮತ್ತು ನಾಲ್ಕನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಇವರಿಬ್ಬರೂ ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆ ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಅವಳಿ ಸಹೋದರ ಪೈಕಿ ವ್ರಜೇಶ್ ಹಿರಿಯವರಾಗಿದ್ದು, ವ್ರಿಷಣ್ ಕಿರಿಯರಾಗಿದ್ದಾರೆ. ಇವರಿಬ್ಬರೂ ಎಂಬಿಬಿಎಸ್ ಮಾಡಲು ನೀಟ್ ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಮುಂದೆ ಡಾಕ್ಟರ್ ಆಗುವ ಕನಸು ಕಾಣುತ್ತಿರುವುದಾಗಿ ತಿಳಿಸಿದ್ದಾರೆ.
ವ್ರಜೇಶ್ ದ್ವಿತೀಯ ಪಿಯುಸಿಯಲ್ಲಿ (ಸಿಬಿಎಸ್ ಸಿ) ಶೇ. 99 ರಷ್ಟು ಅಂಕ ಗಳಿಸಿದರೆ, ವ್ರಿಷಣ್ ಶೇ. 98.4 ರಷ್ಟು ಅಂಕ ಪಡೆದಿದ್ದಾರೆ. ಈ ಅವಳಿ ಸಹೋದರರ ತಂದೆ ವೀಣಾಧರ್ ಶೆಟ್ಟಿ ಹಣಕಾಸು ವಿಷಯದಲ್ಲಿ ಎಂಬಿಎ ಪೂರ್ಣಗೊಳಿಸಿದ್ದು, ಷೇರು ಮಾರುಕಟ್ಟೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ತಾಯಿ ರೇಖಾ ವೀಣಾಧರ್ ಶೆಟ್ಟಿ ಎಂ.ಟೆಕ್ ವ್ಯಾಸಂಗ ಮಾಡಿದ್ದು, ಇದೀಗ ಗೃಹಿಣಿಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


