ರಾಜ್ಯ

ಐಐಟಿ ಧಾರವಾಡ ಕ್ಯಾಂಪಸ್ ನಲ್ಲಿ ಡ್ರೋನ್ ಪ್ರಯೋಗಾಲಯ ಶೀಘ್ರವೇ ಪ್ರಾರಂಭ

ಐಐಟಿ ಧಾರವಾಡದ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆ ನಡೆಯುತ್ತಿದೆ.

ಐಐಟಿ ಧಾರವಾಡ ಕ್ಯಾಂಪಸ್ ನಲ್ಲಿ ಡ್ರೋನ್ ಪ್ರಯೋಗಾಲಯ ಶೀಘ್ರವೇ ಪ್ರಾರಂಭ
ಡ್ರೋನ್ ಸಾಂದರ್ಭಿಕ ಚಿತ್ರ
Published On :

ಹುಬ್ಬಳ್ಳಿ: ಐಐಟಿ ಧಾರವಾಡದ ಕ್ಯಾಂಪಸ್ ನಲ್ಲಿ ಅತ್ಯಾಧುನಿಕ ಡ್ರೋನ್ ಪ್ರಯೋಗಾಲಯವನ್ನು ಸ್ಥಾಪಿಸುವ ಯೋಜನೆ ನಡೆಯುತ್ತಿದೆ. ಮಾನವರಹಿತ ವೈಮಾನಿಕ ವಾಹನ ತಂತ್ರಜ್ಞಾನ ಅಭಿವೃದ್ಧಿ ಅಧ್ಯಯನಕ್ಕಾಗಿ ಈ ಪ್ರಯೋಗಾಲಯ ಕಾರ್ಯನಿರ್ವಹಣೆ ಮಾಡಲಿದೆ.
 
ಇತ್ತೀಚಿನ ದಿನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಡ್ರೋಣ್ ಅಳವಡಿಸಿಕೊಳ್ಳಲಾಗುತ್ತಿದೆ. ಫೋಟೋಗ್ರಾಫ್ ಗಳನ್ನು ಕ್ಲಿಕ್ಕಿಸುವುದರಿಂದ ಮೊದಲುಗೊಂಡು, ವಿಡೀಯೋ, ಬಹುಮಹಡಿ ಕಟ್ಟಡದಲ್ಲಿ ಬೆಂಕಿ ನಂದಿಸುವವರೆಗೂ ಡ್ರೋನ್ ಗಳನ್ನು ಬಳಕೆ ಮಾಡಲಾಗುತ್ತಿದೆ.  ಧಾರವಾಡ ಜಿಲ್ಲೆಯಲ್ಲಿ ಕೆಲವು ರೈತರು ಕಳೆದ 3 ವರ್ಷಗಳಿಂದ ತಮ್ಮ ಬೆಳೆಗಳಿಗೆ ಕೀಟನಾಶಕಗಳ ಸಿಂಪಡಿಕೆಗೂ ಡ್ರೋನ್ ಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಪಾಕೆಟ್ ಡ್ರೋನ್ ಗಳನ್ನೂ ಬಳಕೆ ಮಾಡಿಕೊಳ್ಳಲಾಗುತ್ತಿದೆ.
 
ಕೆಪಿಟಿಸಿಎಲ್ ಸಂಸ್ಥೆಗೆ ಅನುದಾನ ನೀಡಿದ್ದು, ಐಐಟಿ ಕ್ಯಾಂಪಸ್ ನಲ್ಲಿ ಪ್ರಯೋಗಾಲಯ ಸ್ಥಾಪನೆಗೆ ಈ ಅನುದಾನ ಬಳಕೆಯಾಗುತ್ತಿದೆ. ಐಐಟಿ ಧಾರವಾಡದ ಹಿರಿಯ ಪ್ರಾಧ್ಯಾಪಕರ ಪ್ರಕಾರ, ಡ್ರೋನ್ ತಂತ್ರಜ್ಞಾನ ಅಧ್ಯಯನಕ್ಕೆ ಹಾಗೂ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವುದಕ್ಕೆ ಈ ಪ್ರಯೋಗಾಲಯ ಸಹಕಾರಿಯಾಗಲಿದೆ ಎಂದು ಹೇಳುತ್ತಾರೆ. 

ಡ್ರೋನ್ ತಂತ್ರಜ್ಞಾನವನ್ನು ಕೃಷಿ ಚಟುವಟಿಕೆಗಳಿಗೆ, ಸರಕುಗಳನ್ನು ಮನೆ ಬಾಗಿಲಿಗೆ ತಲುಪಿಸುವುದಕ್ಕಾಗಿಯೂ ಬಳಕೆ ಮಾಡಬಹುದಾಗಿದ್ದು, ಡ್ರೋನ್ ನ್ನು ಇನ್ನೂ ಬಳಕೆದಾರರ ಸ್ನೇಹಿಯನ್ನಾಗಿಸುವುದಕ್ಕೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಪಡಿಸುವುದಕ್ಕಾಗಿ ಸಂಶೋಧನೆ ನಡೆಯಲಿದೆ 

ಡ್ರೋನ್ ಯಾವುದೇ ದಿಕ್ಕಿನಲ್ಲಿಯೂ ಹಾರಾಟ ನಡೆಸಬಲ್ಲದು, ಕಿರಿದಾದ ಮತ್ತು ಕಡಿಮೆ ಪ್ರದೇಶಗಳಲ್ಲಿಯೂ ಡ್ರೋನ್ ಹಾರಾಟ ನಡೆಸುವಂತೆ ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಪ್ರಾಧ್ಯಾಪಕರು ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.