ಹಾಸನ ಮಿಕ್ಸರ್ ಗ್ರೈಂಡರ್ ಸ್ಫೋಟ ಪ್ರಕರಣ: ಪೊಲೀಸರಿಂದ ಓರ್ವನ ಬಂಧನ; ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ ಕೃತ್ಯ?
ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್‌ನಲ್ಲಿ ಮಿಕ್ಸರ್ ಗ್ರೈಂಡರ್ ಸ್ಫೋಟಗೊಂಡು ಡಿಟಿಡಿಸಿ ಕೊರಿಯರ್ ಸೆಂಟರ್ ಮಾಲೀಕ ಶಶಿಕುಮಾರ್ ತೀವ್ರವಾಗಿ ಗಾಯಗೊಂಡ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂದಿಸಿದ್ದಾರೆ

ಬೆಂಗಳೂರು: ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್‌ನಲ್ಲಿ ಮಿಕ್ಸರ್ ಗ್ರೈಂಡರ್ ಸ್ಫೋಟಗೊಂಡು ಡಿಟಿಡಿಸಿ ಕೊರಿಯರ್ ಸೆಂಟರ್ ಮಾಲೀಕ ಶಶಿಕುಮಾರ್ ತೀವ್ರವಾಗಿ ಗಾಯಗೊಂಡ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂದಿಸಿದ್ದಾರೆ.
ಮಹಿಳೆಗೆ ಪಾರ್ಸೆಲ್ ಕಳುಹಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಸೋಮವಾರ ಸಂಜೆ ಅದನ್ನು ತೆರೆದ ನಂತರ ಏಕೆ ಸ್ಫೋಟಿಸಿತು ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಪಾರ್ಸೆಲ್ ಕಳುಹಿಸಿದ್ದವರ ವಿಳಾಸವಿಲ್ಲದ ಕಾರಣ ಮಹಿಳೆ ಅದನ್ನು ಹಿಂತಿರುಗಿಸಿದ್ದಾರೆ.
ಕಳುಹಿಸಿದವರ ಹೆಸರು ಮತ್ತು ವಿಳಾಸವನ್ನು ಬಹಿರಂಗಪಡಿಸಲು ನಿರಾಕರಿಸಿದ ಎಸ್ಪಿ ಹರಿರಾಮ್ ಶಂಕರ್, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದ ನಂತರ ವಿವರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದರು. ಘಟನೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ವಿಧವೆಯಾಗಿರುವ ಮಹಿಳೆ ಒಂದೇ ವ್ಯಕ್ತಿಯಿಂದ ಮೂರು ಸಣ್ಣ ಪಾರ್ಸೆಲ್‌ಗಳು ಬಂದಿದ್ದವು, ಆದರೆ ಅವುಗಳನ್ನು ತೆರೆಯದೆ ಬಿಸಾಡಿದ್ದರು ಎಂದು ಮೂಲಗಳು ತಿಳಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


