ಮತ್ತೆ ಕೋವಿಡ್ ಭೀತಿ: ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಗಳಿಗೆ ಬೇಡಿಕೆ ಹೆಚ್ಚಳ
ಕೋವಿಡ್-19 ರೂಪಾಂತರಿ ಬಿಎಫ್.7 ಹರಡುವಿಕೆಯ ಭೀತಿಯಿಂದ ಕಳೆದ ನಾಲ್ಕೈದು ದಿನಗಳಿಂದ ಜನರು ಬೂಸ್ಟರ್ ಡೋಸ್ ಪಡೆಯುವುದಕ್ಕೆ ಮುಗಿಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟಾಗಿ ಕಂಡುಬರದಿದ್ದರೂ, ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿಅಂಶ ಹೇಳುತ್ತದೆ.

ನವದೆಹಲಿ: ಕೋವಿಡ್-19 ರೂಪಾಂತರಿ ಬಿಎಫ್.7 ಹರಡುವಿಕೆಯ ಭೀತಿಯಿಂದ ಕಳೆದ ನಾಲ್ಕೈದು ದಿನಗಳಿಂದ ಜನರು ಬೂಸ್ಟರ್ ಡೋಸ್ ಪಡೆಯುವುದಕ್ಕೆ ಮುಗಿಬೀಳುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಅಷ್ಟಾಗಿ ಕಂಡುಬರದಿದ್ದರೂ, ಸರ್ಕಾರಿ ಕೋವಿಡ್ ಲಸಿಕೆ ಕೇಂದ್ರಗಳಲ್ಲಿ ಬೂಸ್ಟರ್ ಡೋಸ್ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಎಂದು ಅಂಕಿಅಂಶ ಹೇಳುತ್ತದೆ.
ಅಧಿಕೃತ ಮಾಹಿತಿಯ ಪ್ರಕಾರ, ಮೊನ್ನೆ ಡಿಸೆಂಬರ್ 24 ರಂದು, ಕಳೆದ 30 ದಿನಗಳಲ್ಲಿ ಮೊದಲ ಬಾರಿಗೆ ಒಂದು ದಿನದಲ್ಲಿ ಒಟ್ಟಾರೆ ವ್ಯಾಕ್ಸಿನೇಷನ್ 2,000 ಲಸಿಕೆಗಳನ್ನು ದಾಟಿದೆ. ಅಂದು ಬೂಸ್ಟರ್ ಡೋಸ್ ಲಸಿಕೆ ಪಡೆದವರ ಒಟ್ಟು ಸಂಖ್ಯೆ 2,139 ಆಗಿತ್ತು. ಅವುಗಳಲ್ಲಿ, ಮುನ್ನೆಚ್ಚರಿಕೆ ಡೋಸ್ 1,681 ಆಗಿದೆ.
ಸರಾಸರಿಯಾಗಿ, ದೈನಂದಿನ ಬೂಸ್ಟರ್ ಡೋಸ್ ಪಡೆದವರ ಅಂಕಿಅಂಶಗಳು 700 ಮತ್ತು 900 ರ ನಡುವೆ ಇದೆ. Covid-19 ಮತ್ತೆ ಹರಡುವ ಭೀತಿ ಎದುರಾದ ನಂತರ ಈ ಪ್ರಮಾಣ ಹೆಚ್ಚಳವಾಗಿದೆ. ಸರ್ಕಾರಿ ಲಸಿಕೆ ಕೇಂದ್ರಗಳಲ್ಲಿ ಈ ಏರಿಕೆ ಕಂಡುಬಂದಿದೆ ಎಂದು ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡು-ಮೂರು ದಿನಗಳಿಂದ ಲಸಿಕೆ ತೆಗೆದುಕೊಳ್ಳುವವರ ಸಂಖ್ಯೆ ಕ್ರಮೇಣ ಹೆಚ್ಚಳವಾಗಿದೆ ಎಂದು ಅಧಿಕೃತ ಮಾಹಿತಿಯು ತೋರಿಸಿದೆ, ಡಿಸೆಂಬರ್ 22 ರಂದು 1,516 ಡೋಸ್‌ಗಳನ್ನು ನೀಡಲಾಯಿತು. ಡಿಸೆಂಬರ್ 23 ರಂದು ಈ ಸಂಖ್ಯೆ 1,482 ಆಗಿತ್ತು. ಅವುಗಳಲ್ಲಿ ಕ್ರಮವಾಗಿ 1,238 ಮತ್ತು 1,212 ಬೂಸ್ಟರ್ ಲಸಿಕೆಗಳು ಡಿಸೆಂಬರ್ 22 ಮತ್ತು 23 ರಂದು ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


