ಬಾಗಲಕೋಟೆ: ತಂದೆ ಕೊಂದು ದೇಹವನ್ನು 'ಪೀಸ್ ಪೀಸ್' ಮಾಡಿ ಬೋರ್ವೆಲ್ಗೆ ಹಾಕಿದ ಮಗ; ಬೆಚ್ಚಿ ಬಿದ್ದ ಕರ್ನಾಟಕ!
ಮುಂಬೈ ಯುವತಿ ಶ್ರದ್ಧಾಳ ಭೀಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಕರ್ನಾಟಕದಲ್ಲಿ ಇಂತಹದ್ದೇ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.

ಬಾಗಲಕೋಟೆ: ಮುಂಬೈ ಯುವತಿ ಶ್ರದ್ಧಾಳ ಭೀಕರ ಕೊಲೆ ಪ್ರಕರಣ ಮಾಸುವ ಮುನ್ನವೇ ಕರ್ನಾಟಕದಲ್ಲಿ ಇಂತಹದ್ದೇ ಮತ್ತೊಂದು ಭಯಾನಕ ಪ್ರಕರಣ ಬೆಳಕಿಗೆ ಬಂದಿದೆ.
ಪರಶುರಾಮ ಕುಳಲಿ (54) ಎಂಬವರು ನಿತ್ಯ ಕುಡಿದು ಬಂದು ಮನೆಯಲ್ಲಿ ಮಗನಿಗೆ ಬೈಯುವುದು, ಹೊಡೆಯುವುದು ಮಾಡುತ್ತಿದ್ದನು. ಇದರಿಂದ ರೋಸಿ ಹೋಗಿದ್ದ ಮಗ ವಿಠ್ಠಲ ಕುಳಲಿ (20) ತಂದೆಯನ್ನೇ ರೋಡ್ನಿಂದ ಹಲ್ಲೆ ನಡೆಸಿ ಭೀಕರವಾಗಿ ಕೊಂದಿದ್ದಾನೆ.
ನನ್ನ ಗಂಡ ಒಂದು ವಾರದಿಂದ ಕಾಣಿಸ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನ ಇದೆ. ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಮಗನನ್ನ ವಶಕ್ಕೆ ಪಡೆದು ತನಿಖೆ ಶುರು ಮಾಡುತ್ತಿದ್ದಂತೆ ಘೋರ ರಹಸ್ಯ ಬಯಲಾಗಿದೆ.
ತಂದೆಯನ್ನು ಕೊಂದ ನಂತರ ಮೃತದೇಹವನ್ನು ಯಾರಿಗೂ ಗೊತ್ತಾಗದಂತೆ ಕೊಳವೆ ಬಾವಿಗೆ ಹಾಕಲು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ತಮ್ಮ ಹೊಲಕ್ಕೆ ಕೊಂಡೊಯ್ದಿದ್ದಾನೆ. ತಂದೆಯ ಮೃತದೇಹವನ್ನು ಕೊಳವೆ ಬಾವಿಗೆ ಹಾಕುವಾಗ ದೇಹ ಅದರೊಳಗೆ ಹೋಗದಿದ್ದಾಗ ಮಗ ವಿಠಲ, ದೇಹವನ್ನು 30 ತುಂಡುಗಳನ್ನಾಗಿ ಮಾಡಿ ಬೋರ್ವೆಲ್ಗೆ ಹಾಕಿ ಮನೆಗೆ ವಾಪಸ್ ಆಗಿದ್ದಾನೆ.
ಸ್ಥಳದಲ್ಲಿ ಮೃತದೇಹ ಪತ್ತೆ ಕಾರ್ಯಾಚರಣೆ ಮಂಗಳವಾರ ಬೆಳಗ್ಗೆಯಿಂದ ನಡೆಯುತ್ತಿದ್ದು, ಶವದ ತುಂಡುಗಳು ಪತ್ತೆಯಾಗುತ್ತಿವೆ. . ಜೆಸಿಬಿಯಿಂದ ಕೊಳವೆಬಾವಿ ಸುತ್ತ ಅಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಒಂದೆರಡು ತುಂಡುಗಳು ಪತ್ತೆಯಾಗಿವೆ. ಮಗನನ್ನು ಪೊಲೀಸರು ಬಂಧಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


