ರಾಜ್ಯ

ಚಿಕ್ಕಬಳ್ಳಾಪುರ: ಜಗಳದ ನಡುವೆ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ; ಅನಾಥವಾದ 4 ವರ್ಷದ ಮಗು!

ದಂಪತಿಯ ಜಗಳ ವಿಕೋಪಕ್ಕೆ ತಿರುಗಿ ಗಂಡ ತನ್ನ ಪತ್ನಿಯನ್ನೇ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ: ಜಗಳದ ನಡುವೆ ಪತ್ನಿಯನ್ನು ಲಾರಿ ಕೆಳಗೆ ತಳ್ಳಿದ ಗಂಡ; ಅನಾಥವಾದ 4 ವರ್ಷದ ಮಗು!
ಪ್ರತ್ಯಕ್ಷ ದೃಶ್ಯ
Published On :

ಚಿಕ್ಕಬಳ್ಳಾಪುರ: ದಂಪತಿಯ ಜಗಳ ವಿಕೋಪಕ್ಕೆ ತಿರುಗಿ ಗಂಡ ತನ್ನ ಪತ್ನಿಯನ್ನೇ ಲಾರಿ ಕೆಳಗೆ ತಳ್ಳಿ ಕೊಲೆ ಮಾಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯಲ್ಲಿ ನಡೆದಿದೆ. 

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ಮೂಲದ 40 ವರ್ಷದ ಸುಮೈರಾ ಸುಲ್ತಾನ್ ಹಾಗೂ ಮುನಿಕೃಷ್ಣ ಇಬ್ಬರು ತಮ್ಮ ತಮ್ಮ ಸಂಸಾರವನ್ನು ಬಿಟ್ಟು ಬೇರೆಯಾಗಿ ಮದುವೆಯಾಗಿ ಬಾಳು ನಡೆಸುತ್ತಿದ್ದರು. ದಂಪತಿಗೆ 4 ವರ್ಷದ ಬಾಬಾಜಾನ್ ಎನ್ನುವ ಮಗುವಿದೆ.

ಇಂದು ನಗರದ ಗ್ರಂಥಾಲಯ ಮುಂದೆ ನಡು ರಸ್ತೆಯಲ್ಲಿ ದಂಪತಿ ಜಗಳ ಮಾಡಿಕೊಂಡಿದ್ದರು. ಇನ್ನು ರಸ್ತೆಯಲ್ಲಿ ಲಾರಿಯೊಂದು ಬರುತ್ತಿರುವುದನ್ನು ನೋಡಿದ ಮುನಿಕೃಷ್ಣ ಸುಮೈರಾ ಸುಲ್ತಾನ್‌ಳನ್ನು ಲಾರಿ ಕೆಳಗೆ ತಳ್ಳಿದ್ದಾನೆ. ಇದರಿಂದ ಸುಮೈರಾ ಸುಲ್ತಾನ್‌ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾಳೆ.

ಸುದ್ದಿ ತಿಳಿದ ಕೂಡಲೇ ಪೊಲೀಸರು ಘಟನಾ ಸ್ಥಳಕ್ಕೆ ದೌಡಾಯಿಸಿದ್ದು ಆರೋಪಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ.  ಮುನಿಕೃಷ್ಣ ಮತ್ತು ಸುಮೈರಾ 8 ವರ್ಷಗಳ ಹಿಂದೆ ತಮ್ಮ ತಮ್ಮ ಸಂಸಾರ ಬಿಟ್ಟು ಚಿಂತಾಮಣಿ ನಗರದದಲ್ಲಿ ಕೂಲಿ ನಾಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು ಎಂದು ತಿಳಿದುಬಂದಿದೆ. 

ಪ್ರಕರಣ ಸಂಬಂಧ ಪೊಲೀಸರು ಲಾರಿಯನ್ನು ವಶಕ್ಕೆ ಪಡೆದು ಕೊಲೆ ಪ್ರಕರಣ ದಾಖಲಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.