ರಾಜ್ಯ

ಬೆಂಗಳೂರು: ಹಾವು ಕಚ್ಚಿ ಉರಗ ತಜ್ಞ ಸ್ನೇಕ್ ಲೋಕೇಶ್ ನಿಧನ

ಹಾವು ಹಿಡಿಯುವ ಕೆಲಸದಲ್ಲಿ ಪರಿಣಿತರಾಗಿದ್ದಉರಗ ತಜ್ಞರೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನೆಲಮಂಗಲದ ದಾಬಸ್ ಪೇಟೆ ಬಳಿ ನಡೆದಿದೆ.

ಬೆಂಗಳೂರು: ಹಾವು ಕಚ್ಚಿ ಉರಗ ತಜ್ಞ ಸ್ನೇಕ್ ಲೋಕೇಶ್ ನಿಧನ
ಲೋಕೇಶ್ ಎಂ ಬಿ ಅಲಿಯಾಸ್ ಸ್ನೇಕ್ ಲೋಕಿ
Published On :

ಬೆಂಗಳೂರು: ಹಾವು ಹಿಡಿಯುವ ಕೆಲಸದಲ್ಲಿ ಪರಿಣಿತರಾಗಿದ್ದಉರಗ ತಜ್ಞರೊಬ್ಬರು ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ನೆಲಮಂಗಲದ ದಾಬಸ್ ಪೇಟೆ ಬಳಿ ನಡೆದಿದೆ.

49 ವರ್ಷದ  ಲೋಕೇಶ್ ಎಂ ಬಿ ಅಲಿಯಾಸ್ ಸ್ನೇಕ್ ಲೋಕಿ ಸಾವನ್ನಪ್ಪಿದ್ದಾರೆ. ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದ ಸ್ನೇಕ್ ಲೋಕಿ 'ಪರಮಾತ್ಮ' ಎಂಬ ಉಪಾಹಾರ ಗೃಹವನ್ನು ಸಹ ನಡೆಸುತ್ತಿದ್ದರು.

ಸೋಮವಾರ ಸಂಜೆ ರೈತರೊಬ್ಬರ ಮನೆಗೆ ಹಾವು ನುಗ್ಗಿತ್ತು, ಅದನ್ನು ಹಿಡಿಯಲು ಸ್ನೇಕ್ ಲೋಕಿ ತೆರಳಿದ್ದರು, ನಾಗರ ಹಾವನ್ನು ಹಿಡಿಯುವಾಗ ಅದು ಎರಡು ಬಾರಿ ಲೋಕೇಶ್ ಅವರ ತೋರು ಬೆರಳು ಮತ್ತು ಹೆಬ್ಬೆರಳಿಗೆ ಕಚ್ಚಿತ್ತು. ನಂತರ ಅದನ್ನು ಸಮೀಪದ ಕಾಡಿಗೆ ಬಿಟ್ಟಿದ್ದರು.

ಘಟನೆ ನಡೆದ ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತು. ಹಾವನ್ನು ಕಾಡಿಗೆ ಬಿಟ್ಟು ಆಸ್ಪತ್ರೆಗೆ ತೆರಳುವ ವೇಳೆಗೆ ದೇಹಕ್ಕೆ ವಿಷ ಹರಡಿತ್ತು, ಅವರನ್ನು ಯಶವಂತಪುರದಲ್ಲಿರುವ ದೊಡ್ಡ ಆಸ್ಪತ್ರೆಗೆ ದಾಖಲಿಸಿದ್ದರೂ ಪ್ರಯೋಜನವಾಗಲಿಲ್ಲ, ಸೋಮವಾರ ರಾತ್ರಿ ನಿಧನರಾದರು ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.