ಶಾಲೆಗೆ ತಡವಾಗಿ ಬರುವ ಶಿಕ್ಷಕರ ವಿರುದ್ಧ ಕ್ರಮ: ಸಚಿವ ಬಿ.ಸಿ ನಾಗೇಶ್
ಶಾಲಾ ಅವಧಿಯಲ್ಲಿ ಅನಧಿಕೃತವಾಗಿ ಗೈರು ಹಾಜರಾಗುವ, ತಡವಾಗಿ ತರಗತಿಗಳಿಗೆ ಬರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಮಿತಿ ಸಚಿವ ಬಿ.ಸಿ.ನಾಗೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಬೆಂಗಳೂರು: ಶಾಲಾ ಅವಧಿಯಲ್ಲಿ ಅನಧಿಕೃತವಾಗಿ ಗೈರು ಹಾಜರಾಗುವ, ತಡವಾಗಿ ತರಗತಿಗಳಿಗೆ ಬರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಮಿತಿ ಸಚಿವ ಬಿ.ಸಿ.ನಾಗೇಶ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಶಾಲೆಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗುವಂತೆ ರಾಜ್ಯದ ಶಿಕ್ಷಕರಿಗೆ ಸೂಚಿಸಿದ್ದಾರೆ ವಿನಾಕಾರಣ ತಡವಾದರೆ ಮಕ್ಕಳಿಗೆ ಶಾಲೆಯ ಹೊರಗಡೆ ಕಾಯಿಸಿದರೆ ಈ ಒಂದು ವಿಚಾರ ಕುರಿತು ಮಾಹಿತಿ ವರದಿಗಳು ಬಂದರೆ ಕೂಡಲೇ ಶಿಸ್ತು ಕ್ರಮದ ಎಚ್ಚರಿಕೆ ನೀಡಿದ್ದಾರೆ.
ರಾಜ್ಯದ ಶಿಕ್ಷಕರ ಕಾರ್ಯ ವೈಖರಿ ಕುರಿತು ಶಿಕ್ಷಣ ಸಚಿವರು ಮೆಚ್ಚುಗೆ ಯನ್ನು ವ್ಯಕ್ತಪಡಿಸಿದ್ದಾರೆ ಈ ನಡುವೆ ಶಾಲೆಗಳಿಗೆ ತಡವಾಗಿ ಬರುವ ಶಿಕ್ಷಕರಿಗೆ ಇದೇ ವೇಳೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ. ಈ ಹಿಂದೆ ಅನಿರೀಕ್ಷಿತವಾಗಿ ಶಾಲೆಯೊಂದಕ್ಕೆ ಭೇಟಿ ನೀಡಿದ ಸಚಿವ ಬಿ ಸಿ ನಾಗೇಶ್ ಈ ಒಂದು ಸೂಚನೆ ಯನ್ನು ರಾಜ್ಯದ ಶಿಕ್ಷಕರಿಗೆ ನೀಡಿದ್ದಾರೆ.
ನಾಗಮಂಗಲ ತಾಲ್ಲೂಕು ನೆಲ್ಲಿಗೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಈಚೆಗೆ ಭೇಟಿ ಕೊಟ್ಟಾಗ ಯಾವ ಶಿಕ್ಷಕರೂ ಶಾಲೆಗೆ ಬಂದಿರಲಿಲ್ಲ. ಮಕ್ಕಳು ಶಾಲಾ ಆವರಣದಲ್ಲೇ ಕುಳಿತಿದ್ದರು. ಸುಮಾರು 10.30 ಆದರೂ ಮಕ್ಕಳು ಅಲ್ಲಿಯವರೆಗೂ ಶಾಲೆಯಿಂದ ಹೊರಗೆ ಕಾಯುತ್ತಿದ್ದರು. ಇಂತಹ ಘಟನೆಗಳು ಶಿಕ್ಷಕರಿಗೆ ಶೋಭೆ ತರುವುದಿಲ್ಲ.
ರಾಜ್ಯದ ಯಾವ ಶಾಲೆಗಳಲ್ಲೂ ಇಂತಹ ಘಟನೆಗಳು ಮರುಕಳಿಸಬಾರದು. ಮಕ್ಕಳ ಬೋಧನೆ, ಸುರಕ್ಷತೆಗೆ ಅಡ್ಡಿಯಾಗುವ ಶಿಕ್ಷಕರ ನಡೆ ಕ್ಷಮಿಸಲು ಸಾಧ್ಯವಿಲ್ಲ. ಶಿಸ್ತುಕ್ರಮ ಜರುಗಿಸಬೇಕು ಎಂದು ತಾಕೀತು ಮಾಡಿದ್ದಾರೆ. ಶಿಕ್ಷಣದಿಂದ ವಂಚಿತರಾಗುವುದಲ್ಲದೆ ಮಕ್ಕಳ ಸುರಕ್ಷತೆಗೂ ಧಕ್ಕೆಯಾಗಿದೆ. ಹೀಗಾಗಿ ಈ ನಿರ್ದೇಶನ ನೀಡಲಾಗುತ್ತಿದೆ ಎಂದು ನಾಗೇಶ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


