ತ್ರಿವರ್ಣ ಧ್ವಜ ತಲೆಕೆಳಗಾಗಿಟ್ಟುಕೊಂಡು ಎಫ್‌ಬಿ ಲೈವ್ ಮಾಡಿದ ಬಿಜೆಪಿ ನಾಯಕ, ದೂರು ದಾಖಲು
ಕಳೆದ ವಾರ ಹರ್ ಘರ್ ತಿರಂಗಾ ಅಭಿಯಾನದ ವೇಳೆ ಫೇಸ್‌ಬುಕ್ ಲೈವ್ ವಿಡಿಯೋದಲ್ಲಿ ರಾಷ್ಟ್ರಧ್ವಜ ಸಂಹಿತೆಗೆ ಅವಮಾನ ಮಾಡಿದ ಆರೋಪದ ಮೇಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ, ಬಿಜೆಪಿ ನಾಯಕ ಅನಿಲ್ ಚಳಗೇರಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಬೆಂಗಳೂರು: ಕಳೆದ ವಾರ ಹರ್ ಘರ್ ತಿರಂಗಾ ಅಭಿಯಾನದ ವೇಳೆ ಫೇಸ್‌ಬುಕ್ ಲೈವ್ ವಿಡಿಯೋದಲ್ಲಿ ರಾಷ್ಟ್ರಧ್ವಜ ಸಂಹಿತೆಗೆ ಅವಮಾನ ಮಾಡಿದ ಆರೋಪದ ಮೇಲೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ, ಬಿಜೆಪಿ ನಾಯಕ ಅನಿಲ್ ಚಳಗೇರಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮೇಲೆ ಹಸಿರು ಪಟ್ಟಿ ಮತ್ತು ಕೆಳಗೆ ಕೇಸರಿ ಪಟ್ಟಿ ಬರುವಂತೆ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾಕಿಕೊಂಡು ಅದರ ಮುಂದೆ ನಿಂತ ಬಿಜೆಪಿ ನಾಯಕ, ತಮ್ಮ ಬೆಂಬಲಿಗರೊಬ್ಬರಿಗೆ ವಿಡಿಯೋ ಮಾಡಲು ಹೇಳಿದ್ದಾರೆ. ರಾಷ್ಟ್ರಧ್ವಜವು ತಲೆಕೆಳಗಾಗಿದೆ ಎಂಬುದು ಅವರಿಗೆ ತಿಳಿಯುವ ಹೊತ್ತಿಗಾಗಲೇ, ವಿಡಿಯೋದ ಸ್ಕ್ರೀನ್‌ಶಾಟ್‌ಗಳು ವೈರಲ್ ಆಗಿದ್ದವು. ಈ ಬಗ್ಗೆ ಕೆಂಗೇರಿ ಠಾಣೆಯಲ್ಲಿ ದೂರು ದಾಖಲಾಯಿತು.
ಚಳಗೇರಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್ ಮಾಡಲಾಗಿದೆ. ದೂರುದಾರರಲ್ಲಿ ಒಬ್ಬರಾದ ಕೆಎಚ್‌ಬಿ ನಾಗರಿಕರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಎಸ್ ಸುದರ್ಶನ್, 'ಘಟನೆ ಆಗಸ್ಟ್ 9 ರಂದು ನಡೆದಿದ್ದು, ಆಗಸ್ಟ್ 10 ರಂದು ಕೆಂಗೇರಿ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ತಿಳಿಸಿದ್ದಾರೆ.
'ಮಾನವಶಕ್ತಿ ಕೊರತೆ, ಸ್ವಾತಂತ್ರ್ಯ ದಿನಾಚರಣೆಗೆ ಭದ್ರತಾ ವ್ಯವಸ್ಥೆ ನೋಡಿಕೊಳ್ಳುವುದು ಮತ್ತು ನಾಲ್ಕು ದಿನಗಳಿಂದ ನಾನು ಅನಾರೋಗ್ಯಕ್ಕೆ ಒಳಗಾಗಿದ್ದರಿಂದ ಎಫ್‌ಐಆರ್ ಬಾಕಿ ಉಳಿದಿದೆ. ಇನ್ನೆರಡು ದಿನದಲ್ಲಿ ನೋಂದಣಿಯಾಗಲಿದೆ’ ಎಂದು ಸುದರ್ಶನ್ ತಿಳಿಸಿದರು.
ದೂರುದಾರರಿಂದ ಹೆಚ್ಚಿನ ಸಾಕ್ಷ್ಯಗಳು ಲಭ್ಯವಾಗಿಲ್ಲದ ಕಾರಣ ಎಫ್‌ಐಆರ್ ಬಾಕಿ ಇದೆ ಎಂದು ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.
ಪ್ರಧಾನಿ ಮೋದಿಯವರ ಬೆಂಗಳೂರು ಭೇಟಿಯ ಸಂದರ್ಭದಲ್ಲಿ ಅನಿಲ್ ಚಳಗೇರಿ ಅವರು ಸಕ್ರಿಯರಾಗಿದ್ದರು ಮತ್ತು ಕೊಮ್ಮಘಟ್ಟದಲ್ಲಿ ಸಿದ್ಧತೆಗಳನ್ನು ಗಮನಿಸುತ್ತಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


