ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ: ಕಾಂಗ್ರೆಸ್ ಟೀಕೆ
'ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ!. ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ ಅಥವಾ ವಲಸಿಗ ಬಸವರಾಜ ಬೊಮ್ಮಾಯಿ ವಿರುದ್ದದ ಅಸಹನೆಯೇ' ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.

ಬೆಂಗಳೂರು: 'ಬಿಜೆಪಿಯ ಬಾಡಿಗೆ ಭಾಷಣಕೋರನೊಬ್ಬ ಬಿಜೆಪಿ ಸರ್ಕಾರದ ವಿರುದ್ಧವೇ ತಿರುಗಿಬಿದ್ದಿರುವುದು ಜಗತ್ತಿನ 8ನೇ ಅದ್ಬುತ ಸಂಭವಿಸಿದಂತೆಯೇ ಸರಿ!. ಇಂತಹ ಅದ್ಬುತ ಸಂಭವಿಸಲು ಸರ್ಕಾರದ ವೈಫಲ್ಯಗಳು ಮಾತ್ರ ಕಾರಣವೇ ಅಥವಾ ಬಿಜೆಪಿvsಬಿಜೆಪಿ ಜಟಾಪಟಿಯ ಮುಂದುವರೆದ ಭಾಗವೇ? ಅಥವಾ ವಲಸಿಗ ಬಸವರಾಜ ಬೊಮ್ಮಾಯಿ ವಿರುದ್ದದ ಅಸಹನೆಯೇ' ಎಂದು ರಾಜ್ಯ ಕಾಂಗ್ರೆಸ್ ಪ್ರಶ್ನಿಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, 'ಕಡತಗಳಿಗೆ ಸಹಿ ಹಾಕಲು ಪುರಸೊತ್ತಿಲ್ಲದ ಸಿಎಂಗೆ ಸಿನೆಮಾಗಳ ಬಗ್ಗೆ ಎಲ್ಲಿಲ್ಲದ ಆಸಕ್ತಿ ಎಂದಿದ್ದಾನೆ ಬಿಜೆಪಿಯ ಬಾಡಿಗೆ ಭಾಷಣಕೋರ!. ಬಸವರಾಜ ಬೊಮ್ಮಾಯಿ ಅವರೇ, ತಮ್ಮ ನಿಷ್ಕ್ರೀಯತೆಯ ಬಗ್ಗೆ ನಿಮ್ಮವರಿಂದಲೇ ಟೀಕೆಗಳು ಬಂದಿದ್ದರೂ ತಾವು ಗಟ್ಟಿ ಧ್ವನಿಯಲ್ಲಿ ಮಾತನಾಡದಿರುವುದೇಕೆ? ತಪ್ಪಿತಸ್ಥನ ಭಾವನೆಯೋ? ಅವರ ವಿರುದ್ಧ ಮಾತಾಡಲು ಭಯವೋ?' ಎಂದು ಆರೋಪಿಸಿದೆ.
'ಮುಳುಗುತ್ತಿರುವ ಬಿಜೆಪಿ ಎಂಬ ಸಾವಿರ ರಂಧ್ರಗಳ ದೋಣಿಯನ್ನು ಮೇಲೆತ್ತಲು ಕೇಂದ್ರ ಸಚಿವರು ಬರುತ್ತಿದ್ದಾರಂತೆ!. ರಾಜ್ಯ ಬಿಜೆಪಿಗೆ, ಸಿಎಂಗೆ ಕೇಂದ್ರ ಸಚಿವರ ಭೇಟಿಯ ಮಾಹಿತಿಯೇ ಇಲ್ಲವೆಂದರೆ ಆಡಿಸಿದಂತೆ ಆಡುವ "ಬೊಂಬೆ ಬೊಮ್ಮಾಯಿ" ಮಾತ್ರ ಎನ್ನುವುದು ಸಾಬೀತಾಗಿದೆ!. ಅಂದಹಾಗೆ ಅಮಿತ್ ಶಾ ಅವರೇ ಇನ್ನೂ ನಿಮ್ಮ ಅಧ್ಯಕ್ಷರೇ? ಎಂದು ಟೀಕಿಸಿದೆ.
'ಈ ಸರ್ಕಾರದ ಅಕ್ರಮಗಳನ್ನು, ವೈಫಲ್ಯಗಳನ್ನು ಬಿಜೆಪಿ ಕಾರ್ಯಕರ್ತರು, ಬೆಂಬಲಿಗರೇ ಬಿಚ್ಚಿಡುತ್ತಿದ್ದಾರೆ. ಬಸವರಾಜ ಬೊಮ್ಮಾಯಿ ಅವರೇ, ನೀವೆಷ್ಟೇ ಸಂಘಪರಿವಾರಿ ವೇಷ ತೊಟ್ಟರೂ, ಅವರಿಗೆ ನೀವು ಪರಕೀಯರೆ! "ಕೇಶವನ ಕೃಪೆಯಿಂದ ಶೀಘ್ರಮೇವ ತೃತೀಯ ಸಿಎಂ ಪ್ರಾಪ್ತಿರಸ್ತು" ಎಂದು ಕೇಶವ ಕೃಪದಲ್ಲಿ ಹಾರೈಸಲಾಗುತ್ತಿದೆಯಂತೆ ನಿಜವೇ? ಎಂದು ಬೊಮ್ಮಾಯಿ ಅವರ ಕಾಲೆಳೆದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


