ರಾಜ್ಯ

ಅಪ್ಪು ಅವರ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ: ಪುನೀತ್ ರಾಜ್ ಕುಮಾರ್ ವಿಡಿಯೊ ಹಂಚಿಕೊಂಡ ಸಚಿವ ಅಶ್ವತ್ಥ ನಾರಾಯಣ್

ಅಪ್ಪು ಅವರ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್ ಅವರು ಶನಿವಾರ ಹೇಳಿದ್ದಾರೆ.

ಅಪ್ಪು ಅವರ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ: ಪುನೀತ್ ರಾಜ್ ಕುಮಾರ್ ವಿಡಿಯೊ ಹಂಚಿಕೊಂಡ ಸಚಿವ ಅಶ್ವತ್ಥ ನಾರಾಯಣ್
ಅಶ್ವತ್ಥ್ ನಾರಾಯಣ್
Published On :

ಬೆಂಗಳೂರು: ಅಪ್ಪು ಅವರ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥ ನಾರಾಯಣ್ ಅವರು ಶನಿವಾರ ಹೇಳಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪುನೀತ್ ರಾಜ್ ಕುಮಾರ್ ಅವರ ವಿಡಿಯೋವೊಂದನ್ನು ಹಂಚಿಕೊಂಡಿರುವ ಅವರು, 'ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿರುವ ದೀಪ ಸಂಜೀವಿನಿ ಹಣತೆಗಳನ್ನು ಈ ದೀಪಾವಳಿಯಂದು ಬಳಸಲು ಕೋರುವಂತೆ ಪುನೀತ್‌ ಅವರು ಅಭಿಯಾನವೊಂದರಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ.

'ಮಹಿಳೆಯರ ಸ್ವಾವಲಂಬಿ ಹೆಜ್ಜೆಗಳನ್ನು ಬೆಂಬಲಿಸುವ ಉದ್ದೇಶದಿಂದ ನಮ್ಮೊಂದಿಗೆ ಸಹಕರಿಸಿದ ಪ್ರೀತಿಯ ಅಪ್ಪು ಅವರ ಆ ವ್ಯಕ್ತಿತ್ವದ ಬೆಳಕು ಎಲ್ಲೆಡೆಗೆ ಪಸರಿಸಲಿ' ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.