ಕಲಬುರಗಿಯಲ್ಲಿ ಮತ್ತೆ ಎರಡು ಬಾರಿ ಲಘು ಭೂಕಂಪನ; 24 ಗಂಟೆಗಳಲ್ಲಿ ಇದು ಮೂರನೇಯದು
ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮತ್ತೆ ಲಘು ಭೂಕಂಪದ ಅನುಭವವಾಗಿದೆ. ಶನಿವಾರ ತಾಲ್ಲೂಕಿನ ಹಲಚೇರಾ ಹಾಗೂ ಗಡಿಕೇಶ್ವರ ಗ್ರಾಮದಲ್ಲಿ ನಸುಕಿನ ಜಾವ 5.40 ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನದ ಅನುಭವವಾಗಿದೆ.

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನಲ್ಲಿ ಮತ್ತೆ ಲಘು ಭೂಕಂಪದ ಅನುಭವವಾಗಿದೆ. ಶನಿವಾರ ತಾಲ್ಲೂಕಿನ ಹಲಚೇರಾ ಹಾಗೂ ಗಡಿಕೇಶ್ವರ ಗ್ರಾಮದಲ್ಲಿ ನಸುಕಿನ ಜಾವ 5.40 ರ ಸಮಯದಲ್ಲಿ ಎರಡು ಬಾರಿ ಲಘು ಭೂಕಂಪನದ ಅನುಭವವಾಗಿದೆ.
ಕಂಪನಕ್ಕೆ ಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದವು. ಇದರಿಂದ ಎಚ್ಚರಗೊಂಡ ಜನ ಆತಂಕದಿಂದ ಮನೆಯಿಂದ ಹೊರಗೆ ಓಡಿ ಬಂದರು ಮತ್ತು ಮನೆಯಿಂದ ಹೊರಬಂದ ಗ್ರಾಮಸ್ಥರು ಮಳೆಯಲ್ಲಿಯೇ ಕಾಲ ಕಳೆದಿದ್ದಾರೆ.
ಶುಕ್ರವಾರವು ಜಿಲ್ಲೆಯಲ್ಲಿ 2.6 ತೀವ್ರತೆ ಕಂಪನವಾಗಿದ್ದು, ಕಾಳಗಿ ತಾಲೂಕಿನ ಹಲಚೇರಾ ಗ್ರಾಮ ಕಂಪನದ ಕೇಂದ್ರ ಬಿಂದುವಾಗಿತ್ತು. ಇಂದು ಕೂಡಾ ಲಘು ಭೂ ಕಂಪನವಾಗಿದೆ. ಕೆಲವೇ ಹೊತ್ತಲ್ಲಿ ಭೂಕಂಪನದ ತೀವ್ರತೆ ಬಗ್ಗೆ ಮಾಹಿತಿ ದೊರಕಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಜಿಲ್ಲೆಯಲ್ಲಿ ಆಗಾಗ ಲಘು ಭೂಕಂಪನ ಸಂಭವಿಸುತ್ತಿದೆ. ಕಾಳಗಿ ತಾಲೂಕಿನ ಹಲಚೇರಾ, ತೇಗಲತಿಪ್ಪಿ, ಹೊಸಳ್ಳಿ ಗ್ರಾಮದಲ್ಲಿ ಕೂಡಾ ಲಘು ಭೂಕಂಪನ ಅನುಭವವಾಗಿದೆ ಎಂದರು.
ಕಳೆದ 24 ಗಂಟೆಗಳಲ್ಲಿ ಭೂಮಿ ಮೂರು ಬಾರಿ ಕಂಪಿಸಿದ್ದು, ಜನ ಭಯಭೀತರಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


