ರಾಜ್ಯ

ಅ.7ರಿಂದ ನಾಡಹಬ್ಬ ದಸರಾ ಆಚರಣೆ: ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ 

ಅಕ್ಟೋಬರ್ 7ರಂದು ಬೆಳಗ್ಗೆ ಉದ್ಘಾಟನೆಯಾದರೆ 15ರಂದು ವಿಜಯದಶಮಿಗೆ ಮುಕ್ತಾಯವಾಗಲಿದ್ದು ಕೋವಿಡ್-19 ಸೋಂಕಿನ ಮಧ್ಯೆ ಎಚ್ಚರಿಕೆಯಿಂದ ಆಚರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಹಬ್ಬ ಆಚರಣೆಗೆ ಮೈಸೂರು ಮತ್ತು ರಾಜ್ಯದ ಬೇರೆ ಕಡೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಅ.7ರಿಂದ ನಾಡಹಬ್ಬ ದಸರಾ ಆಚರಣೆ: ಮೈಸೂರು ಮತ್ತು ರಾಜ್ಯದ ಇತರ ಭಾಗಗಳಿಗೆ ಸರ್ಕಾರದ ಮಾರ್ಗಸೂಚಿ ಪ್ರಕಟ 
ಮೈಸೂರು ಅರಮನೆಯ ಝಗಮಗಿಸುವ ದೀಪದ ಅಲಂಕಾಲ
Published On :

ಬೆಂಗಳೂರು: ನಾಡಹಬ್ಬ ದಸರಾ ಆರಂಭಕ್ಕೆ ಇನ್ನು ಎರಡೇ ದಿನ ಬಾಕಿ. ಸರ್ಕಾರದ ಮಟ್ಟದಲ್ಲಿ ಮೈಸೂರಿನಲ್ಲಿ ನಾಡಹಬ್ಬ ದಸರಾ ಆಚರಣೆ ನಡೆಯಲಿದೆ. ಅಕ್ಟೋಬರ್ 7ರಂದು  ಬೆಳಗ್ಗೆ ಉದ್ಘಾಟನೆಯಾದರೆ 15ರಂದು ವಿಜಯದಶಮಿಗೆ ಮುಕ್ತಾಯವಾಗಲಿದ್ದು ಕೋವಿಡ್-19 ಸೋಂಕಿನ ಮಧ್ಯೆ ಎಚ್ಚರಿಕೆಯಿಂದ ಆಚರಣೆ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ದಸರಾ ಹಬ್ಬ ಆಚರಣೆಗೆ ಮೈಸೂರು ಮತ್ತು ರಾಜ್ಯದ ಬೇರೆ ಕಡೆಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ.

ಮೈಸೂರು ದಸರಾ ಆಚರಣೆಗೆ ಏನಿದೆ ಮಾರ್ಗಸೂಚಿಯಲ್ಲಿ?: ಅಕ್ಟೋಬರ್ 7ರಂದು ಸಂಜೆ ಚಾಮುಂಡಿ ಬೆಟ್ಟದಲ್ಲಿ ದಸರಾ ಹಬ್ಬಕ್ಕೆ ಚಾಲನೆ, ಮೈಸೂರು ದಸರಾ ಉದ್ಘಾಟನೆಗೆ 100 ಜನರಿಗೆ ಅವಕಾಶ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 400 ಜನರ ಮಿತಿ, ದಸರಾದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ 1 ಡೋಸ್​ ಲಸಿಕೆ ಪಡೆದಿರಬೇಕು, ಹೊರಗಿನಿಂದ ಬರುವವರಿಗೆ RTPCR ಟೆಸ್ಟ್ ಕಡ್ಡಾಯ.

ಅರಮನೆ ಆವರಣದಲ್ಲಿ ದಸರಾ ನಡೆಯಬೇಕಾಗಿದ್ದು, ಜನರು ಮಾಸ್ಕ್, ಸ್ಯಾನಿಟೈಸರ್ ಕಡ್ಡಾಯವಾಗಿ ಬಳಸಬೇಕು, ವರ್ಚುವಲ್ ಮೂಲಕ ಜಂಬೂ ಸವಾರಿಗೆ ವೀಕ್ಷಣೆ, ಕಾರ್ಯಕ್ರಮದಲ್ಲಿ 400ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ, ಅಕ್ಟೋಬರ್ 15ರಂದು ನಡೆಯುವ ಜಂಬೂ/ಪಂಜಿನ ಕವಾಯತಿಗೆ 500 ಜನರಿಗೆ ಮಾತ್ರ ಅವಕಾಶವಿದೆ. ದೈಹಿಕ ಅಂತರ ಇಲ್ಲದ ಕಾರ್ಯಕ್ರಮಗಳಿಗೆ ನಿಷೇಧ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಸೂಚನೆ ಪಾಲಿಸಬೇಕು ಇತ್ಯಾದಿ ನಿಯಮಗಳು ಸರ್ಕಾರದ ಮಾರ್ಗಸೂಚಿಯಲ್ಲಿವೆ.

ಈ ಬಾರಿಯೂ ಸರಳ ದಸರಾ ಆಚರಣೆಗೆ ಅವಕಾಶವಿದ್ದು, ರಾಜ್ಯದ ಬೇರೆ ಕಡೆಗಳಲ್ಲಿ 400ಕ್ಕಿಂತ ಹೆಚ್ಚು ಜನರು ಒಮ್ಮೆಗೇ ಸೇರುವಂತಿಲ್ಲ. ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಲಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.