ಜಿಮ್ ತರಬೇತುದಾರರಿಗೆ ಮಣಿಪಾಲ ಆಸ್ಪತ್ರೆಯಿಂದ ಸಿಪಿಆರ್ ಕಾರ್ಯಾಗಾರ
ಯುವಕರಲ್ಲಿ ಹೃದಯಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆ ಜಿಮ್ ತರಬೇತುದಾರರಿಗೆ ಸಿಪಿಆರ್ ಕಾರ್ಯಗಾರವನ್ನು ಆಯೋಜನೆ ಮಾಡಿದೆ.

ಬೆಂಗಳೂರು: ಯುವಕರಲ್ಲಿ ಹೃದಯಸ್ತಂಭನದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಮಣಿಪಾಲ ಆಸ್ಪತ್ರೆ ಜಿಮ್ ತರಬೇತುದಾರರಿಗೆ ಸಿಪಿಆರ್ ಕಾರ್ಯಗಾರವನ್ನು ಆಯೋಜನೆ ಮಾಡಿದೆ.
ಹೃದಯ ಮತ್ತು ಶ್ವಾಸಕೋಶ ಪ್ರಚೋದಕ (ಸಿಪಿಆರ್) ತುರ್ತು ಪರಿಸ್ಥಿತಿಗಳಲ್ಲಿ, ಹೃದಯ ಸಮಸ್ಯೆಯನ್ನು ಎದುರಿಸುತ್ತಿರುವವರಿಗೆ ಹೃದಯ ಬಡಿತ ನಿಂತಲ್ಲಿ ಇದು ಜೀವ ಉಳಿಸುವ ಪ್ರಥಮ ಚಿಕಿತ್ಸೆಯಾಗಿದೆ.
"ಹೃದಯಸ್ತಂಭನ ಉಂಟಾದಾಗ ಆ ವ್ಯಕ್ತಿಯ ಜೀವ ಉಳಿಸುವುದು ಸಾಧ್ಯವಾಗುದು ಪಕ್ಕದಲ್ಲಿರುವವರಿಗೆ ಮಾತ್ರ, ಆದ್ದರಿಂದ ಸಾಧ್ಯವಾದಷ್ಟೂ ಮಂದಿಗೆ ಈ ಮೂಲಭೂತ ಲೈಫ್ ಸಪೋರ್ಟ್ ತರಬೇತಿ ನೀಡಬೇಕು ಎನ್ನುತ್ತಾರೆ ವರ್ತೂರಿನ ಮಣಿಪಾಲ್ ಆಸ್ಪತ್ರೆಯ ಹೃದ್ರೋಗ ತಜ್ಞವೈದ್ಯ ಡಾ. ನವೀನ್ ಚಂದ್ರ.
ಡಾ.ನವೀನ್ ಚಂದ್ರ ಅವರು ಡಾ. ರಾಮ್ ಕುಮಾರ್ ಜಯಪ್ರಕಾಶ್, ಕನ್ಸಲ್ಟೆಂಟ್, ಕ್ರಿಟಿಕಲ್ ಕೇರ್ ಇವರೊಂದಿಗೆ ತರಬೇತಿ ಕಾರ್ಯಗಾರವನ್ನು ನಡೆಸಲಿದ್ದಾರೆ.
ತೀವ್ರ ವರ್ಕ್ ಔಟ್ ನಂತದಲ್ಲಿ ಪುನೀತ್ ರಾಜ್ ಕುಮಾರ್ ಗೆ ಹೃದಯಸ್ತಂಭನವಾಗಿತ್ತು ಎಂದು ಹೇಳಲಾಗುತ್ತಿತ್ತು. ಈ ಘಟನೆಯ ಬಳಿಕ ಜಿಮ್ ಟ್ರೈನರ್ ಗಳಿಗೆ ಸಿಪಿಆರ್ ಜ್ಞಾನದ ಅಗತ್ಯವಿರಬೇಕು ಹಾಗೂ ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್ ಬಳಕೆ ತಿಳಿದಿರಬೇಕೆಂಬ ಜಾಗೃತಿ ಮೂಡಲಾರಂಭಿಸಿದೆ.
ಪಶ್ಚಿಮ ದೇಶಗಳಲ್ಲಿ ಬಹುತೇಕ ಮಂದಿಗೆ ಸಿಪಿಆರ್ ಹೇಗೆ ನೀಡಬೇಕೆಂಬ ಬಗ್ಗೆ ಅರಿವಿದ್ದು ಹಲವಾರು ಮಂದಿ ಜೀವ ಉಳಿಸುತ್ತಾರೆ ಎಂದು ಡಾ.ನವೀನ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


