ಬಿಟ್ ಕಾಯಿನ್ ಹಗರಣ: ಆರೋಪಿ ಶ್ರೀಕಿ ಮಾದಕ ವ್ಯಸನ, ಖಿನ್ನತೆಯಿಂದ ಬಳಲುತ್ತಿರುವ ಶಂಕೆ
ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ವಶಕ್ಕೆ ಪಡೆದ ನಂತರ ಆತ ಇದ್ದ ಹೋಟೆಲ್ ಕೊಠಡಿಯನ್ನು ಪೊಲೀಸರು ಜಾಲಾಡಿದ್ದಾರೆ. ಈ ವೇಳೆ ಖಿನ್ನತೆ ನಿವಾರಕ ಮಾತ್ರೆಗಳು ದೊರೆತಿವೆ.

ಬೆಂಗಳೂರು: ಬಿಟ್ ಕಾಯಿನ್ ಹಗರಣ ಆರೋಪಿ ಶ್ರೀಕಿ ವಶಕ್ಕೆ ಪಡೆದ ನಂತರ ಆತ ಇದ್ದ ಹೋಟೆಲ್ ಕೊಠಡಿಯನ್ನು ಪೊಲೀಸರು ಜಾಲಾಡಿದ್ದಾರೆ. ಈ ವೇಳೆ ಖಿನ್ನತೆ ನಿವಾರಕ ಮಾತ್ರೆಗಳು ದೊರೆತಿವೆ ಎಂದು ಹೇಳಲಾಗಿದೆ.
ಖಿನ್ನತೆ ಶಮನಕ್ಕೆ ತೆಗೆದುಕೊಳ್ಳುವ ಆಲ್ಟ್ರಾಜೋಲಮ್ ಟ್ಯಾಬ್ಲೆಟ್ಸ್ ಪತ್ತೆಯಾಗಿವೆ. ಈ ಬಗ್ಗೆ ವಿಚಾರಿಸಿದಾಗ ತನಗೆ ಖಿನ್ನತೆ ಸಮಸ್ಯೆ ಇದೆ. ಅದರ ಶಮನಕ್ಕಾಗಿ ಮಾತ್ರೆ ತಗೆದುಕೊಳ್ಳುತ್ತಿದ್ದೇನೆ ಎಂದು ಶ್ರೀಕಿ ಹೇಳಿದ್ದಾನೆ ಎನ್ನಲಾಗಿದೆ. ಈತ ಮಾದಕವಸ್ತು ವ್ಯಸನಿಯೇ ಎಂಬುದರ ಕುರಿತೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
ರಾಜಕೀಯ ರಂಗದವರೂ ಭಾಗಿಯಾಗಿರುವ ಶಂಕೆ ಇರುವ ಕಾರಣ ಪ್ರಕರಣ ರಾಜ್ಯಾದ್ಯಂತ ಸುದ್ದಿಗೆ ಗ್ರಾಸವಾಗಿದೆ. ಇತ್ತೀಚಿಗಷ್ಟೆ ಭೀಮಾ ಜುವೆಲರಿ ಮಾಲೀಕರ ಪುತ್ರ ವಿಷ್ಣುಭಟ್ ಹೊತೆ ಬಿಟ್ ಕಾಯಿನ್ ಪ್ರಕರಣದ ಆರೋಪಿ ಶ್ರೀಕಿ ಬಂಧನವಾಗಿತ್ತು. ಈ ನಂತರ ಈತ ಬಳಸುತ್ತಿದ್ದ ಲ್ಯಾಪ್ ಟಾಪ್, ಪೋನ್ ಗಳನ್ನು ಪೊಲೀಸರು ವಶಕ್ಕೆ ಪಡೆದು ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಸ್ಟ್ರಾಂಗ್ ಪಾಸ್ ವರ್ಡ್ ಹಾಕಿರುವ ಮೊಬೈಲ್ ಪೋನ್ ಅನ್ನು ಶ್ರೀಕಿಯಿಂದ ಓಪನ್ ಮಾಡಿಸಿ ವಿಚಾರಣೆ ಮುಂದುವರಿಸಿದ್ದಾರೆ. ಆತನ ಬಳಿಯಿದ್ದ ಸಿಗರೇಟ್ ಪ್ಯಾಕ್ ಗಳನ್ನು ವಶಕ್ಕೆ ಪಡೆಯಲಾಗಿತ್ತು.
Related Article
ಖಿನ್ನತೆ: ದುರ್ಬಲತೆಯೇ, ಮಾನಸಿಕ ಅಸ್ಥಿರತೆಯೇ ಅಥವಾ ಖಾಯಿಲೆಯೇ? (ಕುಶಲವೇ ಕ್ಷೇಮವೇ)
ಗೆಳೆಯನೊಂದಿಗೆ ಲೇಟ್ ನೈಟ್ ಪಾರ್ಟಿಗೆ ಬೈದ ತಾಯಿ, ಲಾಕ್‌ಡೌನ್‌ನಿಂದ ಖಿನ್ನತೆಗೊಳಗಾದ ಮಾಡೆಲ್ ಆತ್ಮಹತ್ಯೆಗೆ ಶರಣು!
ಪಾಕ್ ಪರ ಘೋಷಣೆ ಕೂಗಿದ ಗುರುಗ್ರಾಮ ವ್ಯಕ್ತಿ ವಿರುದ್ಧ ಕೇಸ್; ಖಿನ್ನತೆ ಇದಕ್ಕೆ ಕಾರಣ ಎಂದ ಪತ್ನಿ
ಬೆಂಗಳೂರು: ಕೊರೋನಾ ನಂತರ ಚೇತರಿಕೆ, ಖಿನ್ನತೆಯಿಂದ ಯುವಕ ಆತ್ಮಹತ್ಯೆ
ಪ್ರಸವಪೂರ್ವ, ನಂತರದ ಆತಂಕ, ಖಿನ್ನತೆಯನ್ನು ತಡೆಗಟ್ಟುವುದು ಹೇಗೆ?
ಕ್ರಿಕೆಟ್ ನಿಂದ ನಿವೃತ್ತಿ ನಂತರ ಮಾನಸಿಕ ಖಿನ್ನತೆಗೊಳಗಾಗಿದ್ದ ಆಸ್ಟ್ರೇಲಿಯಾದ ಮಾಜಿ ಬೌಲರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


