ರಾಜ್ಯ

ಸಿಎಂ ಹೇಳಿಕೆ ಬೆನ್ನಲ್ಲೇ ನಗರದಲ್ಲಿ ಝೀರೋ ಟ್ರಾಫಿಕ್ ಸಂಚಾರ ವ್ಯವಸ್ಥೆ ರದ್ದುಗೊಳಿಸಿ ಬೆಂಗಳೂರು ಪೊಲೀಸರ ಆದೇಶ 

ಸಿಎಂ ಬಸವರಾಜ ಬೊಮ್ಮಾಯಿ ಅವರ ಮತ್ತೊಂದು ಮಾದರಿ ನಿರ್ದೇಶವನ್ನು ಜಾರಿಗೆ ತರಲು ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ.

ಸಿಎಂ ಹೇಳಿಕೆ ಬೆನ್ನಲ್ಲೇ ನಗರದಲ್ಲಿ ಝೀರೋ ಟ್ರಾಫಿಕ್ ಸಂಚಾರ ವ್ಯವಸ್ಥೆ ರದ್ದುಗೊಳಿಸಿ ಬೆಂಗಳೂರು ಪೊಲೀಸರ ಆದೇಶ 
ಸಿಎಂ ಬಸವರಾಜ್ ಬೊಮ್ಮಾಯಿ
Published On :

ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರ ಮತ್ತೊಂದು ಮಾದರಿ ನಿರ್ದೇಶವನ್ನು ಜಾರಿಗೆ ತರಲು ಬೆಂಗಳೂರು ಪೊಲೀಸರು ಆದೇಶ ಹೊರಡಿಸಿದ್ದಾರೆ. 

ಸಾರ್ವಜನಿಕ ಸ್ಥಳಗಳಲ್ಲಿ ಪೊಲೀಸ್ ಗೌರವ ವಂದನೆಗೆ ಬ್ರೇಕ್ ಹಾಕಿ ಮಾದರಿಯಾಗಿದ್ದ ಸಿಎಂ ಬಸವರಾಜ ಬೊಮ್ಮಾಯಿ,  ಸಿಎಂ ಆದಿಯಾಗಿ ಸಚಿವರು, ರಾಜಕೀಯ ನಾಯಕರು ರಸ್ತೆಯಲ್ಲಿ ಹೋಗುವಾಗ ಇರುತ್ತಿದ್ದ ಝೀರೋ ಟ್ರಾಫಿಕ್ ವ್ಯವಸ್ಥೆಗೆ ಬ್ರೇಕ್ ಹಾಕಿದ್ದರು. 

"ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ನಗರದಲ್ಲಿ ಇದರಿಂದ ತೊಂದರೆ ಉಂಟಾಗುವುದರಿಂದ ತಮಗೆ ಬೆಂಗಳೂರು ನಗರದಲ್ಲಿ ಆ ಸೌಲಭ್ಯ ಬೇಡ" ಎಂದು ಮುಖ್ಯಮಂತ್ರಿ ಹೇಳಿದ್ದ ಬೆನ್ನಲ್ಲೇ ಈ ಆದೇಶ ಜಾರಿಗೆ ತರಲು ಪೊಲೀಸರು ಕ್ರಮ ಕೈಗೊಂಡಿದ್ದಾರೆ. 

ಸಿಎಂ ಹೇಳಿಕೆ ಬೆನ್ನಲ್ಲೆ ಜಂಟಿ ಆಯುಕ್ತ (ಸಂಚಾರ ವಿಭಾಗ) ಈ ಸಂಬಂಧ ಆದೇಶವನ್ನು ಹೊರಡಿಸಿದ್ದಾರೆ. ಇದಕ್ಕೂ ಮುನ್ನ ಶುಕ್ರವಾರ ಡಿಜಿ, ಐಜಿ ವಿಐಪಿ ವಾಹನಗಳಿಗೆ ಸಾರ್ವಜನಿಕ ಪ್ರದೇಶಗಳಲ್ಲಿ ಗೌರವ ವಂದನೆಗೆ ಬ್ರೇಕ್ ಹಾಕಿ ಆದೇಶ ಹೊರಡಿಸಿದ್ದರು. 

ಉತ್ತರ ವಿಭಾಗ (ಟ್ರಾಫಿಕ್) ನ ಹಿರಿಯ ಪೊಲೀಸ್ ಅಧಿಕಾರಿ ಸಂಚಾರ ನಿಯಂತ್ರಕ ರೂಮ್ ಗೆ ಹೊಸ ಆದೇಶದ ಬಗ್ಗೆ ಮಾಹಿತಿ ನೀಡಿದ್ದು, ಈಗಿನಿಂದ ಸಿಎಂ ಬೆಂಗಾವಲು ವಾಹನ ಇನ್ನು ಮುಂದೆ ಜಾರಿಯಲ್ಲಿರುವುದಿಲ್ಲ ಎಂದು ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.