ಬೆಂಗಳೂರಿನಿಂದ ಅನತಿ ದೂರದಲ್ಲಿದ್ದರೂ ಕಾಂಕ್ರೀಟ್ ರಸ್ತೆ ಕಾಣದ ಚೂಡಹಳ್ಳಿ ಗ್ರಾಮ!
ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಅನೇಕಲ್ ತಾಲೂಕಿನ ಚೂಡಹಳ್ಳಿ ಗ್ರಾಮದ ನಿವಾಸಿಗಳು ಸರಿಯಾದ ರಸ್ತೆಯಿಲ್ಲದೆ, ಬಸ್ ಸೌಕರ್ಯವಿಲ್ಲದೆ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಅನತಿ ದೂರದಲ್ಲಿರುವ ಅನೇಕಲ್ ತಾಲೂಕಿನ ಚೂಡಹಳ್ಳಿ ಗ್ರಾಮದ ನಿವಾಸಿಗಳು ಸರಿಯಾದ ರಸ್ತೆಯಿಲ್ಲದೆ, ಬಸ್ ಸೌಕರ್ಯವಿಲ್ಲದೆ ದಿನನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.
ಬೆಂಗಳೂರಿನಿಂದ ಕೇವಲ 40 ಕಿಲೋ ಮೀಟರ್ ದೂರದಲ್ಲಿರುವ ಈ ಗ್ರಾಮದಲ್ಲಿ ಸುಮಾರು 18-20 ವರ್ಷಗಳಿಂದ ರಸ್ತೆ ಡಾಂಬರೀಕರಣವಾಗಿಲ್ಲ, ಇದರಿಂದ ಬಸ್ ಸಂಚಾರವಿಲ್ಲದೆ, ಕೆಲಸಕ್ಕಾಗಿ ಪ್ರತಿನಿತ್ಯ ನಗರಕ್ಕೆ ಬರುವ ಜನರು ಹೆಣಗಾಡುವಂತಾಗಿದೆ. ಶಾಲಾ- ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೂ ಬಹಳ ತೊಂದರೆಯಾಗಿದೆ.

ಅದರಲ್ಲೂ, ದ್ವಿಚಕ್ರ ವಾಹನ ಸವಾರರು, ಸರಕು- ಸಾಗಣೆ ಪೂರೈಕೆದಾರರು, ವ್ಯಾಪಾರಿಗಳ ಗೋಳು ಕೇಳುವಂತಿಲ್ಲ, ಗುಂಡಿ ಬಿದ್ದ ಮಣ್ಣಿನ ರಸ್ತೆಯಲ್ಲಿ ನಿತ್ಯ ಪ್ರಯಾಣಿಸಬೇಕಾದ್ದರಿಂದ ಅನೇಕ ಮಂದಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಪಘಾತಗಳು ಆಗ್ಗಿಂದಾಗೆ ಆಗುತ್ತಲೇ ಇರುತ್ತವೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಈ ವಲಯದಲ್ಲಿ ಆನೆ, ಕರಡಿ ಮತ್ತಿತರ ವನ್ಯಜೀವಿಗಳ ಹಾವಳಿ ಕೂಡಾ ಹೆಚ್ಚಾಗಿದ್ದು, ಹಾಡುಹಾಗಲಲ್ಲೇ ಕಾಣಿಸಿಕೊಳ್ಳುವ ಮೂಲಕ ಜನರಲ್ಲಿ ಭೀತಿ ಮೂಡಿಸಿವೆ. ಈ ಎಲ್ಲಾ ಸಮಸ್ಯೆಗಳ ಬಗ್ಗೆ ಇಂಡ್ಲವಾಡಿ ಗ್ರಾಮ ಪಂಚಾಯಿತಿಗೆ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ಹಾಲಿ ಕೇಂದ್ರ ಸಚಿವರಾಗಿರುವ ಎ. ನಾರಾಯಣಸ್ವಾಮಿ ಅವರು ಈ ಕ್ಷೇತ್ರದಿಂದ ಮೂರು ಬಾರಿ ಗೆದಿದ್ದರು. ಶಿವಣ್ಣ ಹಾಲಿ ಶಾಸಕರಾಗಿದ್ದು, ಡಿ. ಕೆ. ಸುರೇಶ್ ಸಂಸದರಾಗಿದ್ದಾರೆ. ಆದರೆ, ಈ ನಾಯಕರಿಗೆ ಚೂಡಹಳ್ಳಿ ಗ್ರಾಮದ ಜನರ ಸಮಸ್ಯೆ ಮಾತ್ರ ಇವರೆಗೆ ಕಣ್ಣಿಗೆ ಬಿದ್ದಿಲ್ಲ. ಕೂಡಲೇ ರಸ್ತೆಗೆ ಡಾಂಬರೀಕರಣ ಹಾಕುವ ನಿಟ್ಟಿನಲ್ಲಿ ನಾಯಕರು ಹಾಗೂ ಸರ್ಕಾರ ಮುಂದಾಗಬೇಕು ಎಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


