ರಾಜ್ಯ

ಮಂಗಳೂರು: ಹಾಡಹಗಲೇ ದರೋಡೆಗೆ ಯತ್ನ: ಮಹಿಳೆಯಿಂದ ದಿಟ್ಟ ಪ್ರತಿರೋಧ, ವಿಡಿಯೋ ವೈರಲ್

ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೈಯ್ಯಲ್ಲಿದ್ದ ಬ್ಯಾಗ್ ಕಸಿದು ದರೋಡೆಗೆ ಯತ್ನಿಸಿರುವ ಘಟನೆ ನಗರದ ಬೆಂದೂರ್‌ವೆಲ್ ಸಮೀಪದ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಮಂಗಳೂರು: ಹಾಡಹಗಲೇ ದರೋಡೆಗೆ ಯತ್ನ: ಮಹಿಳೆಯಿಂದ ದಿಟ್ಟ ಪ್ರತಿರೋಧ, ವಿಡಿಯೋ ವೈರಲ್
ಸಿಸಿಟಿವಿ ದೃಶ್ಯ
Published On :

ಮಂಗಳೂರು: ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಹಿಳೆಯ ಕೈಯ್ಯಲ್ಲಿದ್ದ ಬ್ಯಾಗ್ ಕಸಿದು ದರೋಡೆಗೆ ಯತ್ನಿಸಿರುವ ಘಟನೆ ನಗರದ ಬೆಂದೂರ್‌ವೆಲ್ ಸಮೀಪದ ಸೆಂಟ್ ಆಗ್ನೇಸ್ ಕಾಲೇಜು ಮುಂಭಾಗ ಭಾನುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ನಡೆದಿದೆ.

ಒಂಟಿ ಮಹಿಳೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಈ ವೇಳೆ ಕಾರಿನಿಂದಿಳಿದ ವ್ಯಕ್ತಿಯೊಬ್ಬ ಹಿಂದಿನಿಂದ ಬಂದು ಬ್ಯಾಗ್ ಕಸಿದುಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ನೆಲಕ್ಕೆ ಬಿದ್ದರೂ, ಬ್ಯಾಗ್ ಕಸಿಯಲು ಬಿಡದೇ ಪ್ರತಿರೋಧ ಒಡ್ಡಿದ್ದಾರೆ.

ಈ ವೇಳೆ ಸಾರ್ವಜನಿಕರು ಆರೋಪಿಯನ್ನು ಹಿಡಿಯಲು ಯತ್ನಿಸಿದ್ದಾರೆ. ಆದರೆ, ದುಷ್ಕರ್ಮಿ ಕಾರು ಹತ್ತಿ ಪರಾರಿಯಾಗಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಮಹಿಳೆಯ ಸಾಹಸಕ್ಕೆ ನೆಟ್ಟಿಗರು ಜೈ ಅನ್ನುತ್ತಿದ್ದಾರೆ. 

ಆದರೆ ಇದು ನಿಜವಾದ ದರೋಡೆ ಯತ್ನವಲ್ಲ. ಬದಲಿಗೆ ಮಂಗಳೂರು ಪೊಲೀಸರೇ ನಡೆಸಿದ್ದ ಅಣುಕು ಕಾರ್ಯಾಚರಣೆ. ಈ ಬಗ್ಗೆ ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಅವರು, ಕಾರ್ಯಾಚರಣೆ ಯಶಸ್ವಿಯಾಗಿದೆ. ಕಾರ್ಯಾಚರಣೆ ವೇಳೆ ಶೋಭಲತಾ ಎಂಬುವರು ಪಾದಚಾರಿ ಮಹಿಳೆಯಾಗಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.