ರಾಜ್ಯ

ಮನೆಗಾಗಿ ಪದೇ ಪದೇ ಸರ್ಕಾರದ ಬಳಿ ಅಂಗಲಾಚುವುದಿಲ್ಲ: ಬಸವರಾಜ ಹೊರಟ್ಟಿ ಆಕ್ರೋಶ

ಮನೆ ಕೊಡುವಂತೆ ನಾನು ರಾಜ್ಯ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮನೆಗಾಗಿ ಪದೇ ಪದೇ ಸರ್ಕಾರದ ಬಳಿ ಅಂಗಲಾಚುವುದಿಲ್ಲ: ಬಸವರಾಜ ಹೊರಟ್ಟಿ ಆಕ್ರೋಶ
ಬಸವರಾಜ ಹೊರಟ್ಟಿ
Published On :

ಹುಬ್ಬಳ್ಳಿ: ಮನೆ ಕೊಡುವಂತೆ ನಾನು ರಾಜ್ಯ ಸರ್ಕಾರದ ಬಳಿ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಟ್ಟರೆ ಬಿಡಲಿ. ನಾನು ಇನ್ನು ಮುಂದೆ ಮನೆ ಕೇಳುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾನ ಮಾಡಿದ ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಅವರು, 'ಇಂದು ಮತ್ತೆ ಸರ್ಕಾರಕ್ಕೆ ಪತ್ರ ಬರೆಯುವೆ. ಇದು ನನ್ನ ಕೊನೇಯ ಪತ್ರ. ಮನೆ ನೀಡುವ ವಿಚಾರವಾಗಿ ಸರ್ಕಾರ ವಿಳಂಬ ಮಾಡುತ್ತಿರುವುದರ ವಿರುದ್ಧ ಬೇಸರವಾಗಿದೆ ಎಂದು  ಹೇಳಿದರು.

ಅಂತೆಯೇ ಮೌಲ್ಯಧಾರಿತ ರಾಜಕಾರಣ ಕುಸಿಯುತ್ತಿದೆ. ಗೆದ್ದ ಅಭ್ಯರ್ಥಿಗಳು ಸ್ವಾರ್ಥ ಬಿಟ್ಟು ಅಭಿವೃದ್ಧಿಯತ್ತ ಗಮನ ಹರಿಸಬೇಕು. ಜನಪರವಾದ ಕೆಲಸ ಎಲ್ಲಿಯವರೆಗೆ ಮಾಡುವುದಿಲ್ಲವೋ ಅಲ್ಲಿಯವರೆಗೂ ಇದು ಹೀಗೆ ನಡೆಯುತ್ತೆ. ಆಯ್ಕೆಯಾದವರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ನಮ್ಮದು ಪ್ರಜಾಪ್ರಭುತ್ವ ದೇಶ, ಎಲ್ಲರೂ ಜನಪರ ಕೆಲಸ ಮಾಡಬೇಕು ಎಂದು ಹೊರಟ್ಟಿ ಕರೆ ನೀಡಿದರು.

ಇದೇ ವೇಳೆ ಶಾಲೆಗಳ ಆರಂಭದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, 1 ರಿಂದ 6 ನೇ ತರಗತಿಯ ಶಾಲೆಗಳನ್ನು ಆರಂಭ ಮಾಡಬೇಕು. ಶಾಲೆ ಆರಂಭ ಮಾಡುವ ಅವಶ್ಯಕತೆ ಇದೆ. ನಾನು ಈ ಹಿಂದೆಯೇ ಶಾಲೆ ಆರಂಭ ಮಾಡಬೇಕು ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದೆ ಎಂದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.