ಸಚಿವ ಈಶ್ವರಪ್ಪ ಹೆಸರು ಹೇಳಿಕೊಂಡು ಉದ್ಯಮಿಗಳಿಗೆ ವಂಚನೆ, ಇಬ್ಬರ ಬಂಧನ
ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವವರಿಗೆ 100 ಕೋಟಿ ರೂಪಾಯಿ ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್‌ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು.

ಶಿವಮೊಗ್ಗ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಅವರ ಆಪ್ತ ಕಾರ್ಯದರ್ಶಿಗಳು ಎಂದು ಹೇಳಿಕೊಂಡು ಇಬ್ಬರು ಉದ್ಯಮಿಗಳಿಗೆ ಒಟ್ಟು 36 ಲಕ್ಷ ರು. ವಂಚಿಸಿರುವ ಆರೋಪದ ಮೇಲೆ ಐವರ ವಿರುದ್ಧ ಇಲ್ಲಿನ ಸಿಇಎನ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಮಂಗಳೂರಿನ ಮೊಹಮದ್ ರೆಹಮಾನ್, ಶಿವಮೊಗ್ಗದ ವಿಠಲ್ ರಾವ್, ಮಂಜುನಾಥ್, ಖಾಜಿವಲೀಸ್, ಹಾಸನ ಜಿಲ್ಲೆ ಅರಸಿಕೆರೆಯ ಮೊಹಮದ್ ಮುಫಾಸಿರ್ ವಂಚಿಸಿರುವ ಆರೋಪಿಗಳು. ಪೊಲೀಸರು ವಿಠಲ್ ರಾವ್, ಮತ್ತು ಖಾಜಿವಲೀಸ್ ಇಬ್ಬರನ್ನು ಬಂಧಿಸಿದ್ದು ಮೂವರು ತಲೆ ಮರೆಸಿಕೊಂಡಿದ್ದಾರೆ.
ಮೈಸೂರಿನ ಸಿವಿಲ್ ಇಂಜಿನಿಯರ್ ರಾಜೇಶ್ ಎಂಬುವವರಿಗೆ 100 ಕೋಟಿ ರೂಪಾಯಿ ಲೋನ್ ಕೊಡಿಸುವುದಾಗಿ ನಂಬಿಸಲಾಗಿದೆ. ವಿಲ್ಲಾ ಪ್ರಾಜೆಕ್ಟ್‌ಗಾಗಿ ಈ ಲೋನ್ ಕೊಡಿಸುವುದಾಗಿ ತಿಳಿಸಲಾಗಿತ್ತು.
ಸಾಗರದ ಲಕ್ಷ್ಮಣ, ಮೈಸೂರಿನ ರಾಜೇಶ್ ಎಂಬುವವರಿಂದ ಪ್ರತ್ಯೇಕ ದೂರು ಸಲ್ಲಿಕೆಯಾಗಿತ್ತು. ಸಾಗರ ತಾಲೂಕಿನ ಬಾರೂರು ಗ್ರಾಮದ ಮುತ್ತಲ ಬೈಲಿನ ಲಕ್ಷ್ಮಣ್ ಎಂಬುವರು ಲೋಕೋಪಯೋಗಿ ಇಲಾಖೆ ಕಾರ್ಯಕ್ರಮಗಳ ಗುತ್ತಿಗೆದಾರರಾಗಿದ್ದಾರೆ .
ವಿಲ್ಲಾ ಪ್ರಾಜೆಕ್ಟ್‌ಗಾಗಿ ಸಚಿವರ ಮೂಲಕ 100 ಕೋಟಿ ರು. ಸರ್ಕಾರದ ನೆರವು ಕೊಡಿಸುವುದಾಗಿ ನಂಬಿಸಿ 2020ರ ಫೆಬ್ರುವರಿಯಲ್ಲಿ 10 ಲಕ್ಷ ಮುಂಗಡ ಪಡೆದಿದ್ದರು. ನಂತರ ಕೈಗೆ ಸಿಗದೆ ಅಲೆದಾಡಿಸುತ್ತಿದ್ದರು. ವಂಚನೆಗೆ ಒಳಗಾಗಿರುವುದು ಖಚಿತವಾದ ನಂತರ ಹಣ ಹಿಂದಿರುಗಿಸಲು ಕೇಳಿದರೆ ಜೀವ ಬೆದರಿಕೆ ಹಾಕಿದ್ದರು’ ಎಂದು ಮೈಸೂರಿನ ಹೆಬ್ಬಾಳದ ಎಂಜಿನಿಯರ್ ಸಿ.ರಾಜೇಶ್ ಪ್ರಕರಣ ದಾಖಲಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸಲು ಕೆ.ಎಸ್. ಈಶ್ವರಪ್ಪ ಅವರ ಮೂಲಕ ಟೆಂಡರ್ ಕೊಡಿಸುವುದಾಗಿ ನಂಬಿಸಿ ಜುಲೈ 2019ರಲ್ಲಿ 26.25 ಲಕ್ಷ ರು. ಪಡೆದು ವಂಚಿಸಿದ್ದಾರೆ’ ಎಂದು ಸಾಗರ ತಾಲ್ಲೂಕಿನ ಬರೂರು–ಮುತ್ತಲ್‌ಬೈಲಿನ ಗುತ್ತಿಗೆದಾರ ಬಿ.ಲಕ್ಷ್ಮಣ್ ಮತ್ತೊಂದು ದೂರು ದಾಖಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


