ರಾಜ್ಯ

ಮೈಸೂರು ದಸರಾ: ಆನೆಗಳಿಗೆ ಭಾರ ಹೊರುವ ತಾಲೀಮು; ಮಾವುತರು, ಕಾವಾಡಿಗರಿಗೆ ಉಪಾಹಾರ ಕೂಟ;  ಸಚಿವರು, ಶಾಸಕರು ಭಾಗಿ

ದಸರಾ ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಅಭಿಮನ್ಯು ಮತ್ತು ಇತರ ಆತರ ಆನೆಗಳಿಗೆ ಶುಕ್ರವಾರ ಭಾರ ಹೊರುವ ತಾಲೀಮು ಮೈಸೂರು ಅರಮನೆ ಆರವರಣದಲ್ಲಿ ಆರಂಭವಾಗಿದೆ.

ಮೈಸೂರು ದಸರಾ: ಆನೆಗಳಿಗೆ ಭಾರ ಹೊರುವ ತಾಲೀಮು; ಮಾವುತರು, ಕಾವಾಡಿಗರಿಗೆ ಉಪಾಹಾರ ಕೂಟ;  ಸಚಿವರು, ಶಾಸಕರು ಭಾಗಿ
ಇಂದು ಬೆಳಗ್ಗೆ ಕಾವಾಡಿಗರು, ಮಾವುತರಿಗೆ ತಿಂಡಿ ಬಡಿಸಿ ತಾವು ಸೇವಿಸಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಶಾಸಕರು ಮತ್ತು ಜಿಲ್ಲಾಧಿಕಾರಿಗಳು
Published On :

ಮೈಸೂರು: ದಸರಾ ಉತ್ಸವದಲ್ಲಿ ಚಾಮುಂಡಿ ದೇವಿಯ ವಿಗ್ರಹವನ್ನು ಹೊರುವ ಅಭಿಮನ್ಯು ಮತ್ತು ಇತರ ಆತರ ಆನೆಗಳಿಗೆ ಶುಕ್ರವಾರ ಭಾರ ಹೊರುವ ತಾಲೀಮು ಮೈಸೂರು ಅರಮನೆ ಆರವರಣದಲ್ಲಿ ಆರಂಭವಾಗಿದೆ.

ಈ ಸಂದರ್ಭದಲ್ಲಿ ಇಂದು ಬೆಳಗ್ಗೆ ಅರಮನೆಯಲ್ಲಿ ಮಾವುತರಿಗೆ ಮತ್ತು ಕಾವಾಡಿಗರಿಗೆ ಉಪಾಹಾರವನ್ನು ಒದಗಿಸಲಾಯಿತು. ಮೈಸೂರು ಜಿಲ್ಲಾಡಳಿತ, ಕೆ ಆರ್ ಕ್ಷೇತ್ರದ ಶಾಸಕ ಎಸ್ ಎ ರಾಮದಾಸ್ ಉಪಾಹಾರ ಆತಿಥ್ಯವನ್ನು ಏರ್ಪಡಿಸಿದ್ದರು.

ಎಲ್ಲರಿಗೂ ಕೈಯಾರೆ ಉಪಾಹಾರಗಳನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಶಾಸಕರು, ಜಿಲ್ಲಾಧಿಕಾರಿಗಳಾದ ಬಗಾದಿ ಗೌತಮ್ ತಿನಬಡಿಸಿದರು. ನಂತರ ಮಾವುತರು, ಕಾವಾಡಿಗರೊಂದಿಗೆ ಕುಳಿತು ಸಚಿವರು,  ಶಾಸಕರು ಸಹ ಉಪಾಹಾರ ಸೇವಿಸಿದರು. ಆನೆಗಳ ಪಾಲನೆ, ಪೋಷಣೆ ಮಾಡುತ್ತಿರುವ ಕಾವಾಡಿಗರು ಹಾಗೂ ಮಾವುತರ ಕಾರ್ಯವನ್ನು ಪ್ರಶಂಸಿಸಿ ಅವರ ಯೋಗಕ್ಷೇಮ ವಿಚಾರಿಸಿದರು. 

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕೌಂಟ್ ಡೌನ್ ಆರಂಭವಾಗಿದ್ದು ಇಂದಿನಿಂದ ನಾಲ್ಕೈದು ದಿನಗಳ ಕಾಲ ತೀವ್ರ ತಾಲೀಮು ಮೈಸೂರು ಅರಮನೆ ಆವರಣದಲ್ಲಿ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.