ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಮಹೇಶ್ ಜೋಶಿ ಆಯ್ಕೆ ಬಹುತೇಕ ಖಚಿತ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.
ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮತ್ತು ಜಿಲ್ಲಾಧ್ಯಕ್ಷರ ಚುನಾವಣೆ ಭಾನುವಾರ ನಡೆಯಿತು. ಅಧ್ಯಕ್ಷೀಯ ಚುನಾವಣೆಗೆ ಸಂಬಂಧಿಸಿದಂತೆ ಸೋಮವಾರ ಮತ ಎಣಿಕೆಯ ವಿವರ ಲಭ್ಯವಾಗಿದ್ದು, ಈ ಪ್ರಕಾರ ಡಾ. ಮಹೇಶ್ ಜೋಶಿ ಅಧ್ಯಕ್ಷರಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ಡಾ. ಮಹೇಶ್ ಜೋಶಿ ಅವರು 68,525 ಮತ ಪಡೆದಿದ್ದಾರೆ. ಪ್ರಮುಖ ಪ್ರತಿಸ್ಪರ್ಧಿ ಎನ್ನಲಾಗಿದ್ದ ಶೇಖರಗೌಡ ಮಾಲಿಪಾಟೀಲ ಅವರು 22,357 ಮತ ಪಡೆದಿದ್ದಾರೆ. ಡಾ. ಮಹೇಶ್ ಜೋಶಿ ತಮ್ಮ ಪ್ರತಿಸ್ಪರ್ಧಿಯನ್ನು ದಾಖಲೆಯ ಅಂತರ ಅಂದರೆ 46,168 ಮತಗಳ ಅಂತರದಲ್ಲಿ ಮುಂದಿದ್ದಾರೆ. ಇನ್ನೂ ಅಂಚೆ ಮತಗಳ ಎಣಿಕೆ ಕಾರ್ಯ ಬಾಕಿ ಇದೆ. ವಿವಿಧ ಜಿಲ್ಲೆಗಳಿಂದ ಅಂಚೆ ಮತ ಬರಬೇಕಿದ್ದು, ಮಂಗಳವಾರ ಬಾಕಿ ಮತಗಳ ಎಣಿಕೆ ಕಾರ್ಯ ನಡೆಯುತ್ತದೆ. ಬುಧವಾರ (ನ.24)ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗಾಗಿ ನೇಮಿಸಲಾದ ಚುನಾವಣಾಧಿಕಾರಿ ಫಲಿತಾಂಶದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.
ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಅಧ್ಯಕ್ಷ ಸ್ಥಾನಕ್ಕೆ ಡಾ.ಮಹೇಶ್ ಜೋಶಿ, ಶೇಖರಗೌಡ ಮಾಲೀಪಾಟೀಲ ಸಹಿತ ಒಟ್ಟು 21 ಮಂದಿ ಆಕಾಂಕ್ಷಿಗಳು ಇದ್ದರು. ಇದರಲ್ಲಿ ಇತರೆ ಸ್ಪರ್ಧಿಗಳಾಗಿರುವ ವ.ಚ. ಚನ್ನೇಗೌಡ ಅವರು 16,755, ಸಿ.ಕೆ. ರಾಮೇಗೌಡ 14,110, ಮಾಯಣ್ಣ 8791, ಸರಸ್ವತಿ ಶಿವಪ್ಪ 6,471, ರಾಜಶೇಖರ ಮುಲಾಲಿ 5,209 ಮತ ಪಡೆದಿದ್ದಾರೆ. ಉಳಿದವರೆಲ್ಲರೂ ಇದಕ್ಕಿಂತ ಕಡಿಮೆ ಮತಗಳನ್ನು ಪಡೆದಿದ್ದಾರೆ.
ಜೋಶಿ ಅವರು ದೂರದರ್ಶನದಲ್ಲಿ ದೆಹಲಿ ಮತ್ತು ದಕ್ಷಿಣ ಭಾರತದ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಡೋಜ, ರಾಷ್ಟ್ರಪತಿಗಳ ಗೃಹರಕ್ಷಕ ದಳ, ಗೌರವಾನ್ವಿತ ಸೇವೆಗಾಗಿ ನಾಗರಿಕ ರಕ್ಷಣಾ ಪದಕ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪರಿಷತ್ತಿನ ಅಧ್ಯಕ್ಷರ ಅವಧಿ ಐದು ವರ್ಷಗಳಾಗಿದ್ದು, ಈ ನಡುವೆ ಸರಣಿ ಟ್ವೀಟ್ ಮಾಡಿರುವ ಜೋಶಿ ಅವರು, ತಮ್ಮ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾನು ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಮಾನ್ಯರ ಪರಿಷತ್ತು ಮಾಡಲು ಬಯಸುತ್ತೇನೆ" ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


