ವಶಕ್ಕೆ ಪಡೆಯಲಾಗಿದ್ದ ಬಿಟ್ ಕಾಯಿನ್ ಸುರಕ್ಷಿತವಾಗಿವೆ: ಪ್ರಿಯಾಂಕಾ ಖರ್ಗೆ ಆರೋಪಕ್ಕೆ ಪೊಲೀಸ್ ಆಯುಕ್ತರ ಕಚೇರಿ ಸ್ಪಷ್ಟನೆ
ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರಗಳು ನಡೆಯುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಆರೋಪಗಳಲ್ಲಿ 0.08 ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂಬ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿ ಗುರುವಾರ ಸ್ಪಷ್ಟನೆ ನೀಡಿದೆ.

ಬೆಂಗಳೂರು: ಬಿಟ್ ಕಾಯಿನ್ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಭಾರೀ ವಾಕ್ಸಮರಗಳು ನಡೆಯುತ್ತಿದ್ದು, ಆರೋಪ-ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಆರೋಪಗಳಲ್ಲಿ 0.08 ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂಬ ಎಂಬ ಆರೋಪವೂ ಕೇಳಿ ಬಂದಿದ್ದು, ಈ ಕುರಿತು ನಗರ ಪೊಲೀಸ್ ಆಯುಕ್ತರ ಕಚೇರಿ ಗುರುವಾರ ಸ್ಪಷ್ಟನೆ ನೀಡಿದೆ.
ಹಗರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇದು ಎರಡನೇ ಬಾರಿ ಸ್ಪಷ್ಟನೆ ನೀಡಿದ್ದು, ವಶಕ್ಕೆ ಪಡೆಯಲಾಗಿದ್ದ ಬಿಟ್ ಕಾಯಿನ್ ಗಳು ಸುರಕ್ಷಿತವಾಗಿವೆ ಎಂದು ಹೇಳಿದೆ.
ಬಿಟ್ ಕಾಯಿನ್ ಪ್ರಕರಣ ಸಂಬಂಧ ಆರೋಪಿ ರಾಬಿನ್ ಖಂಡೇಲ್ ವಾಲಾ ವ್ಯಾಲೆಟ್ ನಿಂದ ಸರ್ಕಾರದ ಪಂಚರ ಸಮಕ್ಷಮದಲ್ಲಿ ಪೊಲೀಸ್ ವ್ಯಾಲೆಟ್ ಗೆ ಬಿಟ್ ಕಾಯಿನ್ ವರ್ಗಾಯಿಸಲಾಗಿಯಿತು. ಒಟ್ಟು 2,50,438 ಮೌಲ್ಯದ ಬಿಟ್ ಕಾಯಿನ್ ಪೊಲೀಸ್ ಖಾತೆಗೆ ವರ್ಗಾವಣೆ ಮಾಡಲಾಗಿದೆ ಈ ಬಗ್ಗೆ ಪಂಚನಾಮೆ ಕೂಡ ಆಗಿದ್ದು, ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಕೂಡ ಲಗತ್ತಿಸಲಾಗಿದೆ ಎಂದು ಮಾಹಿತಿ ನೀಡಿದೆ.
ಯುನೋಕಾಯಿನ್ ಎಂಬುದು ಕ್ರಿಫ್ಟೋ ಕರೆನ್ಸಿಯಲ್ಲ, ಅದೊಂದು ಒಂದು ಬಿಟ್ ಕಾಯಿನ್ ಎಕ್ಸ್‌ಚೇಂಜ್ ಕಂಪನಿ. ಭಾರತದಲ್ಲಿ ಬಿಟ್ ಕಾಯಿನ್ ಎಕ್ಸ್ ಚೇಂಜ್ ವ್ಯವಹಾರ ನಡೆಯುವ ಕೆಲವೇ ಸಂಸ್ಥೆಗಳಲ್ಲಿ ಯೂನೋ ಬಿಟ್ ಕಾಯಿನ್ ಕಂಪನಿ ಕೂಡ ಒಂದಾಗಿದ್ದು, ಅದೂ ಬೆಂಗಳೂರಿನಿಂದಲೇ ವಹಿವಾಟು ನಡೆಸುತ್ತಿದೆ ಈ ಪ್ರಕರಣದಲ್ಲಿ ಆ ಕಂಪನಿ ಸಂತ್ರಸ್ತ ಕಂಪನಿಯಾಗಿದೆಯೇ ಹೊರತು ಆರೋಪಿಯಲ್ಲ. ತನಿಖೆಗೆ ತಾಂತ್ರಿಕ ನೆರವನ್ನು ಯೂವನೋ ಕಂಪನಿ ನೀಡಿದೆ ಎಂದು ಸ್ಪಷ್ಟಡಿಸಿದೆ.
ಬಿಟ್ ಕಾಯಿನ್ ಹಗರಣ ಸಂಬಂಧ ಖಂಡೇವಾಲಾ ವ್ಯಾಲೆಟ್ ನಿಂದ ಜಪ್ತಿಯಾದ ಬಿಟ್ ಕಾಯಿನ್ ನಾಪತ್ತೆಯಾಗಿದೆ ಎಂದು ಪ್ರಿಯಾಂಕ ಖರ್ಗೆ ಈ ಹಿಂದೆ ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


