ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ: ಕೃಷಿ ಸಚಿವ ಬಿ.ಸಿ.ಪಾಟೀಲ್
ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾನುವಾರ ರೈತರನ್ನು ಕೊಂಡಾಡಿದ್ದಾರೆ.

ಬೆಂಗಳೂರು: ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಭಾನುವಾರ ರೈತರನ್ನು ಕೊಂಡಾಡಿದ್ದಾರೆ.
ರೈತರಿಗೊಂದು ದಿನ ಕಾರ್ಯಕ್ರಮದ ಸಂದರ್ಭ ಸಚಿವ ಬಿ.ಸಿ.ಪಾಟೀಲ್ ಅವರು ರೈತರೊಂದಿಗೆ ಕಾಲ ಕಳೆಯುತ್ತಿದ್ದು, ಇದೇ ವೇಳೆ ತಮ್ಮ ಜನ್ಮದಿನವನ್ನೂ ಆಚರಿಸಿಕೊಂಡಿದ್ದಾರೆ.
ರೈತರೊಂದಿಗೊಂದು ದಿನ' ಕಾರ್ಯಕ್ರಮದ ನಿಮಿತ್ತ ಹಿರೇಕೆರೂರಿಗೆ ಭೇಟಿ ನೀಡಿದ ಬಿ.ಸಿ.ಪಾಟೀಲ್ ಅವರನ್ನು ಕ್ಷೇತ್ರದ ಜನರು ಸಂತಸದಿಂದ ಸ್ವಾಗತಿಸಿದರು.
ಬಳಿಕ ಹಿರೆಕೆರೂರಿನ ಸ್ವಗೃಹದಲ್ಲಿ, ಕುಟುಂಬ ಸದಸ್ಯರೊಂದಿಗೆ ಕೇಕ್ ಕತ್ತರಿಸಿ, ಸಿಹಿ ತಿನ್ನಿಸುವ ಮೂಲಕ ಬಿಸಿ ಪಾಟೀಲ್ ಅವರು ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಂಡರು.
ನಂತರ ರೈತರನ್ನು ಕೊಂಡಾಡಿದ ಅವರು, ದೇಶದಲ್ಲಿ ಅನ್ನ ಕೊಡಲು ಸಾಧ್ಯವೆಂದರೆ ಅದು ರೈತರಿಂದ ಮಾತ್ರ ಸಾಧ್ಯ. ಯಾವುದೇ ಸಿರಿವಂತರಿಂದಲೂ ಅನ್ನ ನೀಡಲು ಸಾಧ್ಯವಿಲ್ಲ. ಅನ್ನ ನೀಡಲು ಅನ್ನದಾತನೇ ಬೇಕು. ಅನ್ನದಾತನೇ ನಮ್ಮದೈವ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


