ದೊಡ್ಮನೆ ಕುಡಿ ಅಪ್ಪುವಿನ ಅಕಾಲಿಕ ಮರಣದ ನೋವು: ಪುನೀತ್ ಕುಟುಂಬದ ವೈದ್ಯರಿಗೆ ಭದ್ರತೆ
ಇತ್ತೀಚೆಗೆ ಅಗಲಿರುವ ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ಕುಟುಂಬದ ವೈದ್ಯ ಡಾ.ರಮಣ್ ರಾವ್ ಗೆ ಸರ್ಕಾರ ಪೊಲೀಸ್ ಭದ್ರತೆ ನಿಯೋಜಿಸಿದೆ.

ಬೆಂಗಳೂರು: ಇತ್ತೀಚೆಗೆ ಅಗಲಿರುವ ಕನ್ನಡ ಚಿತ್ರರಂಗ ಸ್ಯಾಂಡಲ್ ವುಡ್ ನಟ ಪುನೀತ್ ರಾಜಕುಮಾರ್ ಕುಟುಂಬದ ವೈದ್ಯ ಡಾ.ರಮಣ್ ರಾವ್ ಗೆ ಸರ್ಕಾರ ಪೊಲೀಸ್ ಭದ್ರತೆ ನಿಯೋಜಿಸಿದೆ.
ಪುನೀತ್ ರಾಜಕುಮಾರ್ ಕಳೆದ ಅ. 29ರಂದು ತಮ್ನ 46ನೇ ವಯಸ್ಸಿಗೆ ಜಗತ್ತಿಗೆ ವಿದಾಯ ಹೇಳಿದ್ದಾರೆ. ಹೀಗಿರುವಾಗ ಅವರ ಸಾವಿನಿಂದಾಗಿ ಬೇಸರಗೊಂಡಿರುವ ಅಭಿಮಾನಿಗಳು ಪುನೀತ್ ಕುಟುಂಬ ವೈದ್ಯ ರಮಣ್ ರಾವ್ ಮೇಲೆ ಅಭಿಮಾನಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಹೀಗಾಗಿ ಅವರಿಗೆ ಪೊಲೀಸ್ ರಕ್ಷಣೆಯನ್ನೂ ನೀಡಲಾಗಿದೆ.
ತಮಗೆ ರಕ್ಷಣೆ ನೀಡುವಂತೆ ರಮಣ್ ರಾವ್ ಪೊಲೀಸ್ ರಕ್ಷಣೆ ಕೋರಿದ್ದರಿಂದ ಅವರ ಮನೆಗೆ ಬಿಗಿ ಭದ್ರತೆ ನಿಯೋಜಿಸಲಾಗಿದೆ. ರಮಣ್ ರಾವ್ ನಿವಾಸದ ಹೊರಗೆ ಕೆಎಸ್ ಆರ್ ಪಿ ತುಕಡಿಯನ್ನು ನಿಯೋಜಿಸಲಾಗಿದೆ ಮತ್ತು ಪೊಲೀಸರು ನಾಲ್ವರೂ ಗಸ್ತು ತಿರುಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಪುನೀತ್ ರಾಜಕುಮಾರ್ ಅವರ ಕುಟುಂಬ ವೈದ್ಯ ರಮಣ್ ರಾವ್ ಅವರನ್ನು ಭೇಟಿಯಾದಾಗ ವೈದ್ಯರು ಆಸ್ಪತ್ರೆಗೆ ದಾಖಿಲಿಸುವಂತೆ ಸೂಚಿಸಿದ್ದರು. ಇದೀಗ ಪುನೀತ್ ಅಭಿಮಾನಿಗಳ ಕಾರ್ಯವೈಖರಿ ಮತ್ತು ಅಸಮಾಧಾನದಿಂದ ಕರ್ನಾಟಕದ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಅಸೋಸಿಯೇಷನ್ ಆತಂಕಕ್ಕೆ ಒಳಗಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


