ರಾಜ್ಯ

ರೂಪದರ್ಶಿಯರ ಸಾವು: ಪೊಲೀಸರಿಂದ ಹೊಟೇಲ್ ಮತ್ತು ಮಾರ್ಗ ಪರಿಶೀಲನೆ

ಅಪಘಾತ ನಡೆದ ಪ್ರದೇಶದಲ್ಲಿ ರಸ್ತೆ ಗುಂಡಿಗಳು ಸೇರಿದಂತೆ ಯಾವುದೇ ತೊಂದರೆ ಇರಲಿಲ್ಲ ಎಂದು ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ರೂಪದರ್ಶಿಯರ ಸಾವು: ಪೊಲೀಸರಿಂದ ಹೊಟೇಲ್ ಮತ್ತು ಮಾರ್ಗ ಪರಿಶೀಲನೆ
ಮಿಸ್ ಸೌತ್ ಇಂಡಿಯಾ ಆನ್ಸಿ, ಮಾಜಿ ಮಿಸ್ ಕೇರಳ ರನ್ನರ್ ಅಪ್ ಅಂಜನಾ
Published On :

ಕೊಚ್ಚಿ: ರಸ್ತೆ ಅಪಘಾತದಲ್ಲಿ ಮೃತಪಟ್ಟ ಇಬ್ಬರು ರೂಪದರ್ಶಿಯರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರು ತಂಗಿದ್ದ ಹೊಟೇಲ್ ಮತ್ತು ಅವರು ಪ್ರಯಾಣಿಸುತ್ತಿದ್ದ ಮಾರ್ಗದ ಪರಿಶೀಲನೆ ನಡೆಸಿದ್ದಾರೆ. 

ಸೋಮವಾರ ಬ್ಬರು ರೂಪದರ್ಶಿಯರು ಪ್ರಯಾಣಿಸುತ್ತಿದ್ದ ಕಾರು ಕೊಚ್ಚಿಯ ವೈಟಿಲ್ಲ ಎಂಬಲ್ಲಿ ಮರವೊಂದಕ್ಕೆ ಗುದ್ದಿ ಅಪಘಾತಕ್ಕೀಡಾಗಿತ್ತು. ಮುಂಜಾನೆ 1.30ರ ಸುಮಾರಿಗೆ ಸಂಭವಿಸಿದ್ದ ಈ ಅಪಘಾತದ ಕುರಿತಾಗಿ ಹಲವು ಊಹಾಪೋಹಗಳು ಹುಟ್ಟಿಕೊಂಡಿದ್ದವು. 

ಹೊಟೆಲೊಂದರಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಆ ರೂಪದರ್ಶಿಗಳು ತ್ರಿಸೂರಿಗೆ ವಾಪಸಾಗುತ್ತಿದ್ದರು. ಅಪಘಾತ ನಡೆದ ಸ್ಥಳದಲ್ಲಿ ಸಿಸಿ ಟಿವಿ ಕಾರ್ಯಚರಿಸುತ್ತಿಲ್ಲವಾದ್ದರಿಂದ ಸುತ್ತಮುತ್ತಲಿನ ಅಂಗಡಿ ಮತ್ತಿತರ ಖಾಸಗಿಯವರ ಸಿಸಿ ಟಿವಿಗಳ ವಿಡಿಯೋಗಲನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. 

ಅಪಘಾತ ನಡೆದ ಪ್ರದೇಶದಲ್ಲಿ ರಸ್ತೆ ಗುಂಡಿಗಳು ಸೇರಿದಂತೆ ಯಾವುದೇ ತೊಂದರೆ ಇರಲಿಲ್ಲ ಎಂದು ಕೇರಳ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಅಪಘಾತಕ್ಕೆ ವೇಗ ಚಾಲನೆಯೇ ಕಾರಣ ಇರಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Related Article

ಚೆನ್ನೈ: ಮೂರು ದಿನದ ಹಿಂದೆ ಮದುವೆಯಾಗಿದ್ದ ನವದಂಪತಿ ಅಪಘಾತದಲ್ಲಿ ದುರ್ಮರಣ

ತುಮಕೂರು: ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತ ಇಬ್ಬರ ಸಾವು; ಬೈಕ್ ಮೇಲೆ ಬಸ್ ಹರಿದು ಸವಾರ ಬಲಿ!

ಬೆಂಗಳೂರು: ರಸ್ತೆಗುಂಡಿ ತಪ್ಪಿಸಲು ಹೋಗಿ ಅಪಘಾತ; 48 ಗಂಟೆಗಳಲ್ಲಿ ಮತ್ತೊಂದು ಸಾವು

ನೇಪಾಳದಲ್ಲಿ ಭೀಕರ ರಸ್ತೆ ಅಪಘಾತ: ಬಸ್ ಉರುಳಿ ಬಿದ್ದು 32 ಮಂದಿ ಸಾವು

ಮೈಸೂರು: ಕಾರಿನ ಟೈರ್​ ಬ್ಲಾಸ್ಟ್​ ಆಗಿ ಅಪಘಾತ, ತಾಯಿ, ಮಗ ಸಾವು

ಪ್ರವಾದಿ ಬಗ್ಗೆ ವ್ಯಂಗ್ಯ ರೇಖಾಚಿತ್ರ ರಚಿಸಿದ್ದ ಸ್ವೀಡನ್‌ ಕಲಾವಿದ ಅಪಘಾತದಲ್ಲಿ ಸಾವು

ಆನೇಕಲ್: ಎರಡು ಕಾರುಗಳ ನಡುವೆ ಭೀಕರ ಅಪಘಾತ; ಇಬ್ಬರ ದುರ್ಮರಣ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.