ನಾಡಿನ ಸಮಸ್ತ ಜನತೆಗೆ ನರಕ ಚತುರ್ಥಿಯ ಶುಭ ಕೋರಿದ ರಾಜಕೀಯ ನಾಯಕರು, ಗಣ್ಯರು
”ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಸುಸಂದರ್ಭದಲ್ಲಿ ನರಕ ಚತುರ್ದಶಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ನರಕ ಚತುರ್ದಶಿ ಹಬ್ಬವು ಜನರ ಎಲ್ಲ ದುರಿತಗಳನ್ನು ಪರಿಹರಿಸಿ ಮಂಗಳವನ್ನು ಉಂಟುಮಾಡಲಿ. ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ಕೋರಿದ್ದಾರೆ.

ಬೆಂಗಳೂರು: ವಿವಿಧ ರಾಜಕೀಯ ಮುಖಂಡರು ನಾಡಿನ ಜನತೆಗೆ ನರಕ ಚತುರ್ಥಿಯ ಶುಭ ಕೋರಿದ್ದಾರೆ.
”ನಾಡಿನ ಸಮಸ್ತ ಜನತೆಗೆ ದೀಪಾವಳಿಯ ಸುಸಂದರ್ಭದಲ್ಲಿ ನರಕ ಚತುರ್ದಶಿ ಹಬ್ಬದ ಹೃತ್ಪೂರ್ವಕ ಶುಭಾಶಯಗಳು. ದುಷ್ಟಶಿಕ್ಷಣ ಹಾಗೂ ಶಿಷ್ಟರಕ್ಷಣದ ಸಂಕೇತವಾಗಿರುವ ನರಕ ಚತುರ್ದಶಿ ಹಬ್ಬವು ಜನರ ಎಲ್ಲ ದುರಿತಗಳನ್ನು ಪರಿಹರಿಸಿ ಮಂಗಳವನ್ನು ಉಂಟುಮಾಡಲಿ. ಕೋವಿಡ್ ನಿಯಮಗಳ ಪಾಲನೆಯ ಜೊತೆಗೆ ಸುರಕ್ಷಿತವಾಗಿ ಹಬ್ಬವನ್ನು ಆಚರಿಸೋಣ” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶುಭಾಶಯ ಕೋರಿದ್ದಾರೆ.
ನಾಡಿನ ಜನತೆಗೆ ನರಕ ಚತುರ್ದಶಿ ದೀಪಾವಳಿ ಹಬ್ಬದ ಭಕ್ತಿಪೂರ್ವಕ ಶುಭಕಾಮನೆಗಳು. ಈ ಸಂಭ್ರಮದ ಬೆಳಕಿನ ಹಬ್ಬವು ನೋವುಗಳ ಕತ್ತಲೆಯನ್ನು ದೂರಸರಿಸಿ ನಲಿವಿನ ಬೆಳಕನ್ನು ಪಸರಿಸಲಿ, ಎಲ್ಲರಿಗೂ ಉತ್ತಮ ಆರೋಗ್ಯ, ಸಮೃದ್ಧಿಗಳನ್ನು ಹೊತ್ತು ತರಲಿ ಎಂದು ಹಾರೈಸುತ್ತೇನೆ. ಕೋವಿಡ್ ಸಾಂಕ್ರಾಮಿಕ ಹರಡದಂತೆ ಮುನ್ನೆಚ್ಚರಿಕೆ ವಹಿಸಿ ಹಬ್ಬವನ್ನಾಚರಿಸೋಣ’ ಎಂದು ಬಿ ಎಸ್ ಯಡಿಯೂರಪ್ಪ ಕೂ ಮಾಡಿದ್ದಾರೆ.
Rural development ministry
‘ಈ ಹಬ್ಬದ ಸಮಯದಲ್ಲಿ ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸಿ. ಮಾಸ್ಕ್ ಧರಿಸುವುದನ್ನು ಖಚಿತಪಡಿಸಿಕೊಳ್ಳಿ ಮತ್ತು ನಿಮ್ಮ ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚಿಕೊಳ್ಳಿ’ ಎಂದು ಗ್ರಾಮೀಣಾಭಿವೃದ್ಧಿ ಸಚಿವಾಲಯ ಹೇಳಿದೆ.
BY Vijayendra
‘ರಾಜ್ಯದ ಜನತೆಗೆ ನರಕಚತುರ್ದಶಿ ಹಾಗೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು. ಬೆಳಕಿನ ಹಬ್ಬವಾದ ಸಂಭ್ರಮದ ದೀಪಾವಳಿಯು ರಾಜ್ಯದ ಪ್ರತಿ ಕುಟುಂಬಗಳನ್ನು ಜ್ಞಾನ, ಸತ್ ಚಿಂತನೆಗಳಿಂದ ಬೆಳಗಿಸಲಿ. ಬದುಕಿನ ಎಲ್ಲಾ ಸಂಕಷ್ಟ, ಅಂಧಕಾರ, ರೋಗಗಳು ನಿವಾರಣೆಯಾಗಿ ಸಂತಸ, ಸಂಭ್ರಮ ನೆಲೆಗೊಳ್ಳಲಿ ಎಂದು ಭಗವಂತನಲ್ಲಿ ಪ್ರಾರ್ಥಿಸೋಣ’ ಎಂದು ಬಿ ವೈ ವಿಜಯೇಂದ್ರ ಕೂ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


