ಪುನೀತ್ ಮನೆಗೆ ತಮಿಳು ನಟ ಪ್ರಭು ಗಣೇಶನ್ ಭೇಟಿ; ಕುಟುಂಬಸ್ಥರಿಗೆ ಸಾಂತ್ವನ
ಅಪ್ಪು ನಮ್ಮನ್ನ ಬಿಟ್ಟು ಹೋಗಿದ್ದು ಬಹಳ ನೋವು ತಂದಿದೆ. ತಂದೆ ಶಿವಾಜಿ, ರಾಜ್ಕುಮಾರ್ ಅವರು ಆತ್ಮೀಯ ಸ್ನೇಹಿತರಾಗಿದ್ದರು. ನಾನು, ಅಪ್ಪು, ಶಿವಣ್ಣ, ರಾಘಣ್ಣ ಸಹೋದರರ ರೀತಿ ಇದ್ದೇವು. ನಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದರು

ಬೆಂಗಳೂರು: ಪುನೀತ್ ರಾಜ್ಕುಮಾರ್ ನಮ್ಮನ್ನು ಅಗಲಿ ನಾಲ್ಕು ದಿನಗಳು ಕಳೆದಿದೆ. ಅಪ್ಪು ಅಗಲಿಕೆಯ ನೋವು ನಾಡಿನ ಸಮಸ್ತ ಕಾಡುತ್ತಿದೆ. ಅಭಿಮಾನಿಗಳಷ್ಟೇ ಅಲ್ಲ, ಪುನೀತ್ ಕುಟುಂಬಕ್ಕೂ ಇದು ನಂಬಲಸಾಧ್ಯವಾಗಿದ್ದು, ಇಂದು ಪುನೀತ್ ನಿವಾಸಕ್ಕೆ ತಮಿಳು ನಟ ಪ್ರಭು ಗಣೇಶನ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಂತ್ವಾನ ಹೇಳಿದ್ದಾರೆ.
ಅಪ್ಪು ಕುಟುಂಬವನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಭು ಗಣೇಶನ್ ಅವರು, ಅಪ್ಪು ನಮ್ಮನ್ನ ಬಿಟ್ಟು ಹೋಗಿದ್ದು ಬಹಳ ನೋವು ತಂದಿದೆ. ತಂದೆ ಶಿವಾಜಿ, ರಾಜ್ಕುಮಾರ್ ಅವರು ಆತ್ಮೀಯ ಸ್ನೇಹಿತರಾಗಿದ್ದರು.
ನಾನು, ಅಪ್ಪು, ಶಿವಣ್ಣ, ರಾಘಣ್ಣ ಸಹೋದರರ ರೀತಿ ಇದ್ದೇವು. ನಮ್ಮ ಕುಟುಂಬಕ್ಕೆ ಬಹಳ ಆತ್ಮೀಯರಾಗಿದ್ದರು. ದೃಶ್ಯ ಚಿತ್ರೀಕರಣದ ಸಮಯದಲ್ಲೂ ಅವರನ್ನು ಭೇಟಿಯಾಗಿದ್ದೆವು. ಯಾವಾಗ ಬೆಂಗಳೂರಿನಲ್ಲಿ ಇದ್ದರು ಬಂದು ಭೇಟಿ ಮಾಡುತ್ತಿದ್ದರು. ಪುನೀತ್ ವಾತ್ಸಲ್ಯದ ರಾಯಭಾರಿಯಾಗಿದ್ದರು. ಅವರ ಅಗಲಿಕೆ ಕನ್ನಡ ಚಿತ್ರರಂಗ ಮಾತ್ರವಲ್ಲ, ತಮಿಳು ಅಷ್ಟೇ ಅಲ್ಲ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದು ಕಣ್ಣೀರಿಟ್ಟರು.
ನನಗೆ ಆರೋಗ್ಯ ಸರಿ ಇಲ್ಲದ ಸಂದರ್ಭದಲ್ಲಿ ಶೂಟಿಂಗ್ ರದ್ದು ಮಾಡಿ 6 ಗಂಟೆಗಳ ಕಾಲ ನನ್ನ ಜೊತೆಗೆ ಕುಳಿತ್ತಿದ್ದರು. ಆ ಘಟನೆಯನ್ನು ನಾನು ಎಂದಿಗೂ ಮರೆಯಲು ಸಾಧ್ಯವಿಲ್ಲ. ದೇವರು ಅಪ್ಪುನನ್ನು ಕರೆದುಕೊಂಡು ಕೊಂಡು ನಿರ್ದಯಿಯಾಗಿ ನಡೆದುಕೊಂಡಿದ್ದಾನೆ. ಇದನ್ನು ನನ್ನಿಂದ ತಡೆದುಕೊಳ್ಳಲು ಆಗುತ್ತಿಲ್ಲ ಎಂದರೇ, ಇನ್ನು ಕುಟುಂಬಸ್ಥರು ಹೇಗೆ ತೆಗೆದುಕೊಳ್ತಾರೆ..? ಅವರಿಗೆ ಸಾಂತ್ವನ ಹೇಳಿದರೇ, ನನ್ನ ಕುಟುಂಬಕ್ಕೆ ನಾನೇ ಸಾಂತ್ವನ ಹೇಳಿದಂತೆ ಎಂದು ಭಾವುಕರಾಗ ನುಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


