ಆಕ್ಸಿಜನ್ ಟ್ಯಾಂಕರ್ ಒಳಗೊಂಡ ಹಡಗು ಕುವೈತ್‌ನಿಂದ ಮಂಗಳೂರು ಬಂದರಿಗೆ ಆಗಮನ
ನವ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ) ಗೆ 147,430 ಟನ್ ಲಿಕ್ವಿಡ್ ಆಕ್ಸಿಜನ್ ಸಹಿತ 252.8 ಟನ್ ಸಾಮಗ್ರಿಗಳು ಕುವೈತ್ ನಿಂದ ಆಗಮಿಸಿದೆ.

ಮಂಗಳೂರು: ನವ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ) ಗೆ 147,430 ಟನ್ ಲಿಕ್ವಿಡ್ ಆಕ್ಸಿಜನ್ ಸಹಿತ 252.8 ಟನ್ ಸಾಮಗ್ರಿಗಳು ಕುವೈತ್ ನಿಂದ ಆಗಮಿಸಿದೆ.
ಕುವೈತ್ ನ ಇಂಡಿಯನ್ ಕಮ್ಯೂನಿಟಿ ಸಪೋರ್ಟ್ ಗ್ರೂಪ್ ಭಾರತಕ್ಕೆ ಈ ನೆರವನ್ನು ಒದಗಿಸಿದೆ. ಇದರಲ್ಲಿ 11 ಲಿಕ್ವಿಡ್ ಆಕ್ಸಿಜನ್ ಟ್ಯಾಂಕರ್‌ಗಳು, ಲಿಕ್ವಿಡ್ ಆಕ್ಸಿಜನ್ ಹೊಂದಿರುವ ಎರಡು ಅರೆ ಟ್ರೇಲರ್‌ಗಳನ್ನು ಮತ್ತು 1,200 ಆಮ್ಲಜನಕ ಸಿಲಿಂಡರ್‌ಗಳು ಸೇರಿದೆ.
ಭಾರತೀಯ ರೆಡ್‌ಕ್ರಾಸ್ ಸೊಸೈಟಿ ಸದಸ್ಯರು ಇಲ್ಲಿನ ಬಂದರಿನಲ್ಲಿ ಉಪಕರಣಗಳನ್ನು ಪಡೆದುಕೊಂಡಿದ್ದಾರೆ.
ಎಡಿಜಿಪಿ ಪ್ರತಾಪ್ ರೆಡ್ಡಿ, ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿ ಕುಮಾರ್, ಕೋಸ್ಟ್ ಗಾರ್ಡ್ (ಕರ್ನಾಟಕ) ಕಮಾಂಡರ್ ಎಸ್ ಬಿ ವೆಂಕಟೇಶ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


