ಆನೆ ಕಾರಿಡಾರ್ ಅಭಿವೃದ್ಧಿಗೆ ಗೋಮಾಳದ ಜಾಗ: ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆನೆ ಕಾರಿಡಾರ್ ವಿಸ್ತರಿಸಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಇತಿಶ್ರೀ ಹಾಡುವ ಸಲುವಾಗಿ ಆನೇಕಲ್ ಮತ್ತು ಜಿಗಣಿ ಬಳಿಯಿರುವ ಗೋಮಾಳ ಜಾಗವನ್ನು ಬೆಂಗಳೂರು ನಗರ ಆಯುಕ್ತ ಜೆ.ಮಂಜುನಾಥ್ ಅವರು ಪರಿಶೀಲನೆ ನಡೆಸಿದರು.

ಬೆಂಗಳೂರು: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯ ಆನೆ ಕಾರಿಡಾರ್ ವಿಸ್ತರಿಸಿ ಮಾನವ–ವನ್ಯಜೀವಿ ಸಂಘರ್ಷಕ್ಕೆ ಇತಿಶ್ರೀ ಹಾಡುವ ಸಲುವಾಗಿ ಆನೇಕಲ್ ಮತ್ತು ಜಿಗಣಿ ಬಳಿಯಿರುವ ಗೋಮಾಳ ಜಾಗವನ್ನು ಬೆಂಗಳೂರು ನಗರ ಆಯುಕ್ತ ಜೆ.ಮಂಜುನಾಥ್ ಅವರು ಪರಿಶೀಲನೆ ನಡೆಸಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಆನೆ ಕಾರಿಡಾರ್'ನ್ನು ಮತ್ತಷ್ಟು ಬಲಪಡಿಸುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿಕೊಂಡರು. ಅಲ್ಲದೆ, ವಾಸಸ್ಥಳಗಳ ಗುರುತಿಸುವಂತೆಯೂ ಸೂಚಿಸಿದರು.
ಕಂದಾಯ ಭೂಮಿ, ಗೋಮಾಳ ಭೂಮಿ, ಅತಿಕ್ರಮಣ ಮತ್ತು ವಾಸಸ್ಥಾನಗಳಿವೆ, ಇವುಗಳನ್ನು ಗುರ್ತಿಸಲಾಗುತ್ತಿದೆ. ಬಳಿಕ ಈ ಕುರಿತು ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ನೀಡಿ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮಂಜುನಾಥ್ ಅವರು ಹೇಳಿದ್ದಾರೆ.
ಕೆಲವೆಡೆ ಸರ್ಕಾರವೇ ಜನರಕ್ಕ ಭೂಮಿಯನ್ನು ನೀಡಿದೆ. ಸರ್ಕಾರ ಭೂಮಿ ನೀಡಿದ್ದರೂ ಕೆಲವು ಭೂಮಿ ಇನ್ನೂ ಬಳಕೆಯಾಗದೆ ಖಾಲಿ ಉಳಿದಿದೆ. ಇವುಗಳನ್ನೂ ಗುರ್ತಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


