ಕೊಡಗಿನಲ್ಲಿ ನಾಲ್ವರು ಕಳ್ಳ ಬೇಟೆಗಾರರ ಬಂಧನ
ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಬಂಧಿಸಿ ಅವರಿಂದ ಬೇಟೆಯಾಡಿದ್ದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಎರಡು ಪ್ರತ್ಯೇಕ ಘಟನೆಗಳಲ್ಲಿ ನಾಲ್ವರು ಬಂಧಿಸಿ ಅವರಿಂದ ಬೇಟೆಯಾಡಿದ್ದ ಪ್ರಾಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೊದಲ ಘಟನೆಯಲ್ಲಿ ಇಬ್ಬರು ಬೇಟೆಗಾರರು ಸೋಮವಾರ ಪೇಟೆ ತಾಲ್ಲೂಕಿನ ಜೇನುಕಲ್ಲು ರಕ್ಷಿತಾರಣ್ಯಕ್ಕೆ ನುಗ್ಗಿ ಪ್ರಾಣಿಗಳ ಬೇಟೆಯಾಡಿದ್ದಾರೆ. ನಿರ್ದಿಷ್ಟ ಮಾಹಿತಿಯನ್ನಾಧರಿಸಿ ಅರಣ್ಯ ಇಲಾಖೆ ಸಿಬ್ಬಂದಿ ಹೊಸ ಗ್ರಾಮದ ಕಾವೇರಪ್ಪ ಅಲಿಯಾಸ್ ತಮೂ ಎಂಬಾತನ ಮನೆ ಮೇಲೆ ದಾಳಿ ನಡೆಸಿ ಎರಡು ಜಾತಿ ಜಿಂಕೆಗಳ ಐದು ಕೆ.ಜಿ ಮಾಂಸವನ್ನು ವಶಪಡಿಸಿಕೊಂಡಿದ್ದಾರೆ.
ಅಲ್ಲದೆ, ಬಂಧಿತನಿಂದ ಬಂದೂಕು ಮತ್ತು ಮೂರು ಜೀವಂತ ಗುಂಡುಗಳನ್ನೂ ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಕಾವೇರಪ್ಪನ ಜೊತೆಗಿದ್ದ ಮತ್ತೊಬ್ಬ ಬೇಟೆಗಾರ ಸುರೇಶ್ ನನ್ನೂ ಬಂಧಿಸಲಾಗಿದೆ. ಆರೋಪಿಗಳಿಬ್ಬರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಜಿಂಕೆ ಮಾಂಸವನ್ನು ಕೆಲ ಗ್ರಾಮಸ್ಥರೊಂದಿಗೆ ಹಂಚಿಕೊಂಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ.
ಮತ್ತೊಂದು ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದಿಂದ ವರದಿಯಾಗಿದ್ದು, ಬೇಟೆಗಾರರು ಅರಣ್ಯ ನುಗ್ಗಿ ಪ್ರಾಣಿಗಳತ್ತ ಗುಂಡು ಹಾರಿಸಿದಾಗ, ಗುಂಡೇಟಿನ ಶಬ್ಧ ಕೇಳಿದ ಅರಣ್ಯ ಇಲಾಖೆ ಸಿಬ್ಬಂದಿ ಜಾಗೃತರಾಗಿ ಇತರ ತಂಡಗಳನ್ನು ಎಚ್ಚರಿಸಿದ್ದಾರೆ. ಕಾರ್ ನಲ್ಲಿ ಬಿರುನಾಣಿ ಗ್ರಾಮದ ಮೂಲಕ ಅರಣ್ಯ ಗಡಿಯಲ್ಲಿ ಇಳಿದು ಕಾಡಿಗೆ ನುಗ್ಗಿದ್ದ ಆರು ಬೇಟೆಗಾರರ ಪೈಕಿ ಪ್ರೀತಮ್ ಮತ್ತು ರಾಬಿನ್ ತಿಮ್ಮಯ್ಯ ಎಂಬುವವರನ್ನು ಅರಣ್ಯ ಸಿಬ್ಬಂದಿ ಬಂದಿಸಿದ್ದಾರೆ. ಇತರ ನಾಲ್ವರು ಕತ್ತಲಲ್ಲಿ ಪರಾರಿಯಾಗಿದ್ದಾರೆ. ಬಂಧಿತರಿಂದ ಜಿಂಕೆ ಮರಿ ಮೃತದೇಹ ಮತ್ತು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


