ಅಯೋಧ್ಯೆಯ ರಾಮ ಮಂದಿರಕ್ಕಾಗಿ ಕುಂಭಾಶಿಯಲ್ಲಿ ಬ್ರಹ್ಮರಥ ನಿರ್ಮಾಣ ಕಾರ್ಯ ಪ್ರಾರಂಭ
ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣವು ಅಕ್ಷಯ ತೃತೀಯದ ಶುಭ ದಿನದಂದು ಕುಂದಾಪುರದ ಸಮೀಪದ ಕುಂಭಾಶಿಯಲ್ಲಿ ಪ್ರಾರಂಭವಾಗಿದೆ.

ಕುಂದಾಪುರ: ಅಯೋಧ್ಯೆಯ ಶ್ರೀ ರಾಮ ಮಂದಿರಕ್ಕೆ ಬ್ರಹ್ಮರಥ (ತೇರು) ನಿರ್ಮಾಣವು ಅಕ್ಷಯ ತೃತೀಯದ ಶುಭ ದಿನದಂದು ಕುಂದಾಪುರದ ಸಮೀಪದ ಕುಂಭಾಶಿಯಲ್ಲಿ ಪ್ರಾರಂಭವಾಗಿದೆ.
ಸುಮಾರು 4 ಕೋಟಿ ರೂ. ವೆಚ್ಚದ ಈ ಬ್ರಹ್ಮರಥ ಪೂರ್ಣಗೊಂಡ ನಂತರ ಕಿಷ್ಕಿಂದೆಯ ಹನುಮ ಜನ್ಮಭೂಮಿ ಕ್ಷೇತ್ರದ ಪರವಾಗಿ ರಾಮ ಮಂದಿರಕ್ಕೆ ಸೇರಲಿದೆ.
ಪ್ರಸಿದ್ದ ಶಿಲ್ಪಿಗಳಾದ ಕೋಟೇಶ್ವರ ವಿಶ್ವಕರ್ಮ ಕರಕುಶಲ ಶಿಲ್ಪಕಲಾ ಕೇಂದ್ರದ ಲಕ್ಷ್ನಿನಾರಾಯಣ ಆಚಾರ್ಯ ಮತ್ತು ರಾಜಗೋಪಾಲಾಚಾರ್ಯರು 50 ನುರಿತ ಕುಶಲಕರ್ಮಿಗಳ ತಂಡದ ಸಹಾಯದಿಂದ ಬ್ರಹ್ಮರಥದ ನಿರ್ಮಾಣ ಮಾಡಲಿದ್ದಾರೆ. ಈ ರಥ ಕುಕ್ಕೆ ಸುಬ್ರಹ್ಮಣ್ಯದಲ್ಲಿನ ರಥದ ಮಾದರಿಯಲ್ಲಿರಲಿದೆ.
84 ಅಡಿ ಎತ್ತರ ಮತ್ತು 26 ಅಡಿ ಅಗಲದ ರಥದಲ್ಲಿ 10 ಅಡಿ ಎತ್ತರದ ಚಕ್ರಗಳಿವೆ. ರಥದ ಮಂಟಪ ಐದು ಅಡಿಗಳಿದ್ದರೆ, ಕಲಶ ಸಹ ಅಷ್ಟೇ ಎತ್ತರವನ್ನು ಹೊಂದಿರಲಿದೆ. ರಥದ ತೂಕ 50 ಟನ್ ಆಗಿರಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


