ಉದ್ಯಮಿ ಮೇಲಿನ ಹಲ್ಲೆ ಪ್ರಕರಣ: ಪೊಲೀಸರು ಎಫ್ಐಆರ್ ದಾಖಲು
40 ವರ್ಷದ ಉದ್ಯಮಿ ಮೇಲೆ ನಡೆಸಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.

ಬೆಂಗಳೂರು: 40 ವರ್ಷದ ಉದ್ಯಮಿ ಮೇಲೆ ನಡೆಸಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲಸೂರು ಗೇಟ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆಂದು ತಿಳಿದುಬಂದಿದೆ.
ಕೆಲ ದಿನಗಳ ಹಿಂದಷ್ಟೇ ಪೊಲೀಸರ ವಿರುದ್ದ ಉದ್ಯಮಿಯೊಬ್ಬರು ಆರೋಪಿಸಿದ್ದರು. ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ. ನನಗೆ ನ್ಯಾಯ ಒದಗಿಸಿಕೊಡಬೇಕೆಂದು ಕೋರಿ ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್ ಅವರಿಗೆ ಉದ್ಯಮಿ ಇಬ್ರಾಹಿಂ ಷರೀಫ್ ಎಂಬುವವರು ಪತ್ರ ಬರೆದು ಮನವಿ ಮಾಡಿಕೊಂಡಿದ್ದರು.
ತನ್ನ ಹಿರಿಯ ಸಹೋದರನೊಂದಿಗೆ ವ್ಯವಹಾರ ವಹಿವಾಟು ನಡೆಸಿದ ಫೈಜಲ್, 7.50 ಲಕ್ಷ ರೂ. ಹಿಂತಿರುಗಿಸಬೇಕಾಗಿತ್ತು. ಸುಮಾರು ಒಂದು ವರ್ಷದಿಂದ ಪದೇ ಪದೇ ಕೇಳುತ್ತಿದ್ದರೂ, ಹಣ ಹಿಂತಿರುಗಿಸಿಲ್ಲ, ಕೇಳಲೂ ಹೋದರೆ ತನ್ನಗೆ ಹಾಗೂ ಸಹೋದರಿಗೆ ಫೈಜಲ್ ಬೆದರಿಕೆ ಹಾಕುತ್ತಿದ್ದ.
ಮೇ 15 ರಂದು ಬೆಳಗ್ಗೆ 2 ಗಂಟೆ ಸುಮಾರಿನಲ್ಲಿ ಫೋನ್ ಕರೆ ಮಾಡಿದ್ದ ಫೈಜಲ್, ಹಣವನ್ನು ವಾಪಸ್ ನೀಡಲು ಬಂದಿದ್ದು, ಮನೆಯಿಂದ ಹೊರಗೆ ಬರುವಂತೆ ಒತ್ತಾಯಿಸಿದ.ನಂತರ ಮನೆಯಿಂದ ಹೊರಗೆ ಬಂದಾಗ ಫೈಜಲ್ ಹಾಗೂ ಆತನ ಸಹೋದರ ಪಾವದ್, ಮತ್ತೋರ್ವ ವ್ಯಕ್ತಿ ಬಂದಿದ್ದರು. ಪದೇ ಪದೇ ಹಣ ಕೇಳಿದರೆ, ಭೀಕರ ಪರಿಣಾಮ ಎದುರಿಸಬೇಕಾದೀತು ಎಂಬ ಬೆದರಿಕೆ ಹಾಕಿದರು. ಹೊಯ್ಸಳಕ್ಕೆ ಕರೆ ಮಾಡಿದ್ದರಿಂದ ಅಲ್ಲಿಂದ ಅವರು ನಿರ್ಗಮಿಸಿದ್ದರು. ತದ ನಂತರ ಮೂವರು ವಾಪಸ್ ಬಂದು ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಎಡಕಣ್ಣಿನ ಹತ್ತಿರ ತೀವ್ರವಾಗಿ ಗಾಯವಾಗಿರುವುದಾಗಿ ಷರೀಫ್ ಹೇಳಇಕೊಂಡಿದ್ದರು.
ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದು ಮೇ 16 ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಾಯಿತು. ಸಕಾರಾತ್ಮಕವಾಗಿ ವರ್ತಿಸಿದ ಇನ್ಸ್ ಪೆಕ್ಟರ್, ಎಫ್ ಐಆರ್ ದಾಖಲಿಸುವಂತೆ ಸಹಾಯಕರಿಗೆ ಹೇಳಿದರು ನಂತರ ಅಲ್ಲಿಂದ ನಿರ್ಗಮಿಸಿದ್ದೆವು.
ಈ ಮಧ್ಯೆ, ಫೈಜಲ್ ಹಲಸೂರು ಗೇಟ್ ಉಪ ವಿಭಾಗೀಯದ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಗೆ ಫೈಜಲ್ ಆಗಮಿಸಿದ್ದನ್ನು ನಾವು ನೋಡಿದ್ದೇವು. ಫೈಜಲ್ ಕಚೇರಿಯಿಂದ ತೆರಳಿದ ನಂತರ ಎಸಿಪಿ ನಜ್ಮಾ ಫಾರೂಖಿ ನಮಗೆ ಕರೆ ಮಾಡಿ, ಬೈಯಲು ಶುರು ಮಾಡಿದರು. ಎಫ್ ಐಆರ್ ದಾಖಲಿಸದಂತೆ ಸಿಬ್ಬಂದಿಗೆ ಆಕೆ ಸೂಚನೆ ನೀಡಿದ್ದಾರೆ. ಪೊಲೀಸರು ನನ್ನ ಪ್ರಕರಣವನ್ನು ಅರಿವಿಲ್ಲದ ವರದಿಯಾಗಿ ತೆಗೆದುಕೊಂಡಿದ್ದಾರೆ ಎಂದು ಷರೀಫ್ ಆರೋಪಿದ್ದರು.
ಈ ಎಲ್ಲಾ ಬೆಳವಣಿಗೆ ಬಳಿಕ ಇದೀಗ ಪೊಲೀಸರು ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


