ಕನ್ನಡದಲ್ಲಿ ವಿಜ್ಞಾನ ಪ್ರಚಾರದ ಉದ್ದೇಶದಿಂದ ಡಾ. ಟಿ.ಆರ್ ಅನಂತರಾಮು ವಿಜ್ಞಾನ ಪ್ರತಿಷ್ಠಾನ ಸ್ಥಾಪನೆ
ನಾಡಿನಾದ್ಯಂತ ಕನ್ನಡದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರ ಹೆಸರಿನಲ್ಲಿ, ‘ಡಾ. ಟಿ.ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ.

ಬೆಂಗಳೂರು: ನಾಡಿನಾದ್ಯಂತ ಕನ್ನಡದಲ್ಲಿ ವಿಜ್ಞಾನವನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ವಿಜ್ಞಾನ ಲೇಖಕ ಟಿ. ಆರ್. ಅನಂತರಾಮು ಅವರ ಹೆಸರಿನಲ್ಲಿ, ‘ಡಾ. ಟಿ.ಆರ್. ಅನಂತರಾಮು ವಿಜ್ಞಾನ ಪ್ರತಿಷ್ಠಾನವನ್ನು ಸ್ಥಾಪಿಸಲಾಗಿದೆ.
ವಿಶೇಷವಾಗಿ ಹೊಸ ತಲೆಮಾರಿನ ಲೇಖಕರನ್ನು ಉತ್ತೇಜಿಸುವುದು, ಮಾಧ್ಯಮಗಳಿಗೆ ವಿಜ್ಞಾನ ಸಂಗತಿಗಳನ್ನು ವರದಿ ಮಾಡುವುದನ್ನು ಕುರಿತು ವಿಶೇಷ ಕಾರ್ಯಾಗಾರಗಳನ್ನು ನಡೆಸುವುದು ಪ್ರತಿಷ್ಠಾನದ ಮುಖ್ಯ ಉದ್ದೇಶಗಳಲ್ಲೊಂದಾಗಿದೆ.
ವಿದ್ಯಾರ್ಥಿಗಳಲ್ಲಿ, ವಿಜ್ಞಾನ ಮತ್ತು ಗಣಿತದ ಬಗ್ಗೆ ಆಸಕ್ತಿ ಮೂಡಿಸಲೆಂದು ‘ಸೂತ್ರ ಎಂಬ ಹೊಸಬಗೆಯ ಮಾಸಪತ್ರಿಕೆಯನ್ನು ಪ್ರತಿಷ್ಠಾನ ಹೊರತರಲಿದೆ. ವಿಜ್ಞಾನ ಮತ್ತು ಗಣಿತವನ್ನುಆಕರ್ಷಕ ರೀತಿಯಲ್ಲಿ ವಿದ್ಯಾರ್ಥಿಗಳಿಗೆ ಬೋಧಿಸುತ್ತಿರುವ ತರುಣ ಅಧ್ಯಾಪಕರನ್ನು ಗುರುತಿಸಿ, ಪ್ರತಿವರ್ಷವೂ ಓರ್ವ ಮಹಿಳೆಯೂ ಸೇರಿದಂತೆ ಮೂರು ಮಂದಿಗೆ ಪ್ರಶಸ್ತಿಗಳನ್ನು ನೀಡಲು ಪ್ರತಿಷ್ಠಾನ ಯೋಜನೆ ಹೊಂದಿದೆ.
ಗ್ರಾಮೀಣ ಪ್ರದೇಶದಲ್ಲಿ ಆರ್ಥಿಕ ಮುಗ್ಗಟ್ಟಿನಲ್ಲಿರುವ ವಿದ್ಯಾರ್ಥಿನಿಯರಿಗೆ ವಿಜ್ಞಾನದಲ್ಲಿ ಹೆಚ್ಚಿನ ಶಿಕ್ಷಣ ಪಡೆಯಲು ಪ್ರತಿಷ್ಠಾನವು ನೆರವಾಗಲಿದೆ. ಇದರ ಜೊತೆಗೆ ಪ್ರತಿವರ್ಷವೂ ಕನ್ನಡದಲ್ಲಿ, ವಿದ್ಯಾರ್ಥಿಗಳಿಗೆ ವಿಜ್ಞಾನ ಪ್ರಬಂಧ ಸ್ಪರ್ಧೆ, ಆಶುಭಾಷಣ ಸ್ಪರ್ಧೆ ಮುಂತಾದುವನ್ನು ಏರ್ಪಡಿಸುವುದರ ಜೊತೆಗೆ ತಜ್ಞರಿಂದ ಯುಗಾದಿ ವಿಶೇಷ ವಿಜ್ಞಾನ ಉಪನ್ಯಾಸಗಳನ್ನು ಏರ್ಪಡಿಸುವುದೂ ಪ್ರತಿಷ್ಠಾನದ ಯೋಜಿತ ಕಾರ್ಯಕ್ರಮಗಳಲ್ಲಿ ಕೆಲವು.. ಈ ಕುರಿತು ಹೆಚ್ಚಿನ ವಿವರವನ್ನು ಈ ಜಾಲತಾಣದಲ್ಲಿ ನೋಡಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


