ರಾಜ್ಯ

'ನನ್ನ ಮೇಲೆ ಆರೋಪ ಮಾಡಿದವರು ತೊಂದರೆ ಅನುಭವಿಸಿ ಸಾಯುತ್ತಾರೆ': ಲಸಿಕೆ ದುರ್ಬಳಕೆ ಆರೋಪಕ್ಕೆ ಶಾಸಕ ರಘು ಪ್ರತಿಕ್ರಿಯೆ 

ತಮ್ಮ ವಿರುದ್ಧ ಆರೋಪ ಮಾಡುವವರು ತೊಂದರೆ ಅನುಭವಿಸಿ ಸಾಯುತ್ತಾರೆ. ಇದು ಬೆಂಗಳೂರಿನ ಸಿ ವಿ ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ರಘು ಪ್ರತಿಕ್ರಿಯೆ.

'ನನ್ನ ಮೇಲೆ ಆರೋಪ ಮಾಡಿದವರು ತೊಂದರೆ ಅನುಭವಿಸಿ ಸಾಯುತ್ತಾರೆ': ಲಸಿಕೆ ದುರ್ಬಳಕೆ ಆರೋಪಕ್ಕೆ ಶಾಸಕ ರಘು ಪ್ರತಿಕ್ರಿಯೆ 
ಶಾಸಕ ರಘು
Published On :

ಬೆಂಗಳೂರು: ತಮ್ಮ ವಿರುದ್ಧ ಆರೋಪ ಮಾಡುವವರು ತೊಂದರೆ ಅನುಭವಿಸಿ ಸಾಯುತ್ತಾರೆ. ಇದು ಬೆಂಗಳೂರಿನ ಸಿ ವಿ ರಾಮನ್ ನಗರ ಕ್ಷೇತ್ರದ ಬಿಜೆಪಿ ಶಾಸಕ ಎಸ್ ರಘು ಪ್ರತಿಕ್ರಿಯೆ.

ಸರ್ಕಾರದ ಕೋವಿಡ್ ಲಸಿಕೆಗಳನ್ನು ತಮ್ಮ ಕ್ಷೇತ್ರದಲ್ಲಿ ಖಾಸಗಿಯಾಗಿ ನಡೆಸಿ ಅಲ್ಲಿಗೆ ತರಿಸಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕೇಳಿಬರುತ್ತಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಶಾಸಕ ರಘು ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ತಮ್ಮ ವಿರುದ್ಧ ಕೇಳಿಬರುತ್ತಿರುವ ಆರೋಪಕ್ಕೆ ಏನು ಹೇಳುತ್ತೀರಿ ಎಂದು ಮಾಧ್ಯಮ ಪ್ರತಿನಿಧಿ ಕೇಳಿದಾಗ ಶಾಸಕ ರಘು ಅವರ ಬೆಂಬಲಿಗರು ಮಾಧ್ಯಮ ಪ್ರತಿನಿಧಿಯನ್ನು ತಡೆದು ಹೆದರಿಸಲು ಮುಂದಾದರು. ಈ ಬಗ್ಗೆ ರಾಜ್ಯ ಬಿಜೆಪಿ ಏನು ಹೇಳುತ್ತದೆ ಎಂದು ಮಾಧ್ಯಮ ಪ್ರತಿನಿಧಿ ಪ್ರಶ್ನೆ ಮಾಡಿದ್ದಾರೆ.

ನನ್ನ ವಿರುದ್ಧ ಆರೋಪ ಮಾಡುವವರು ಕಷ್ಟ ಅನುಭವಿಸಿ ಸಾಯುತ್ತಾರೆ ಎಂದಷ್ಟೇ ಶಾಸಕ ರಘು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.