ರಾಜ್ಯ

ಧಾರವಾಡ: ಕುಡಿಯೋಕೆ ಹಣ ಕೊಡದ ಪತ್ನಿಯ ಮೂಗು ಕಚ್ಚಿದ ಪತಿ ಪರಾರಿ

ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಜಗಳವಾಡಿ ಪತ್ನಿಯ ಮೂಗನ್ನು ಕಚ್ಚಿ ಗಾಯಗೊಳಿಸಿದ ಪತಿ ಪರಾರಿಯಾಗಿರುವ ಘಟನೆ ಧಾರವಾಡದ ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.

ಧಾರವಾಡ: ಕುಡಿಯೋಕೆ ಹಣ ಕೊಡದ ಪತ್ನಿಯ ಮೂಗು ಕಚ್ಚಿದ ಪತಿ ಪರಾರಿ
ಸಂಗ್ರಹ ಚಿತ್ರ
Published On :

ಧಾರವಾಡ: ಕುಡಿಯಲು ಹಣ ನೀಡಿಲ್ಲ ಎಂಬ ಕಾರಣಕ್ಕೆ ಜಗಳವಾಡಿ ಪತ್ನಿಯ ಮೂಗನ್ನು ಕಚ್ಚಿ ಗಾಯಗೊಳಿಸಿದ ಪತಿ ಪರಾರಿಯಾಗಿರುವ ಘಟನೆ ಧಾರವಾಡದ  ಅಮ್ಮಿನಬಾವಿ ಗ್ರಾಮದಲ್ಲಿ ನಡೆದಿದೆ.

ಉಮೇಶ್  ಎಂಬಾತ ಪತ್ನಿ ಗೀತಾಳ ಮೂಗು ಕಚ್ಚಿ ಗಾಯಗೊಳಿಸಿದ್ದಲ್ಲದೆ ಪತ್ನಿಯ ಮೇಲೆ ಹಲ್ಲೆ ನಡೆಸುವುದನ್ನು ತಡೆಯಲು ಬಂದ ಅತ್ತೆಯ ಕತ್ತು ಹಿಸುಕಿ ಅವಳ ಮೇಲೆ ಸಹ ಹಲ್ಲೆ ಮಾಡಿದ್ದಾನೆ.

ಗಾರೆ ಕೆಲಸ ಮಾಡುವ ಉಮೇಶ್ ಕಳೆದ ಐದು ವರ್ಷದ ಹಿಂದೆ ಪತ್ನಿಯನ್ನು ಬಿಟ್ಟು ಹೋದವನು ಐದು ತಿಂಗಳ ಹಿಂದೆ ವಾಪಾಸಾಗಿದ್ದ.

ಆದರೆ ಹಾಗೆ ಹಿಂತಿರುಗಿದವ ಮದ್ಯ ಸೇವಿಸಲಿಕ್ಕಾಗಿ ಹಣ ನೀಡುವಂತೆ ಪ್ರತಿ ದಿನ ಗೀತಾಳ ಜತೆ ಜಗಳವಾಡುತ್ತಿದ್ದ. ಕಳೆದ ರಾತ್ರಿ ಸಹ ಇದೇ ವಿಷಯದಲ್ಲಿ ಜಗಳವಾದಾಗ ಉಮೇಶ್ ಆಕೆಯ ಮೂಗನ್ನು ಕಚ್ಚಿ ಕತ್ತರಿಸಿದ್ದಾನೆ.

ಗೀತಾಗೆ  ಧಾರವಾಡ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತಿಯ ಈ ಕೃತ್ಯದ ಬಗ್ಗೆ ಗೀತಾ  ಗ್ರಾಮೀಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಉಮೇಶ್ ಗಾಗಿ ಪೋಲೀಸರ ಶೋಧ ಮುಂದುವರಿದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.