ರಾಜ್ಯ

ಕೋರ್ಟ್ ಪ್ರಕರಣಗಳ ಸ್ಥಿತಿಗತಿ, ಮಾಹಿತಿ ಒದಗಿಸಲು 'ಟೆಲಿಗ್ರಾಮ್ ಚಾನೆಲ್' ಆರಂಭ

ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸಲು ಟೆಲಿಗ್ರಾಮ್ ಚಾನೆಲ್‌ ಅನ್ನು ಹೈಕೋರ್ಟ್ ಪ್ರಾರಂಭಿಸಿದೆ.

ಕೋರ್ಟ್ ಪ್ರಕರಣಗಳ ಸ್ಥಿತಿಗತಿ, ಮಾಹಿತಿ ಒದಗಿಸಲು 'ಟೆಲಿಗ್ರಾಮ್ ಚಾನೆಲ್' ಆರಂಭ
ಸಂಗ್ರಹ ಚಿತ್ರ
Published On :

ಬೆಂಗಳೂರು: ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳ ಕಲಾಪಗಳ ಮಾಹಿತಿ ಒದಗಿಸಲು ಟೆಲಿಗ್ರಾಮ್ ಚಾನೆಲ್‌ ಅನ್ನು ಹೈಕೋರ್ಟ್ ಪ್ರಾರಂಭಿಸಿದೆ. 

ಹೈಕೋರ್ಟ್‌ ವರ್ಚುವಲ್ ಕೇಸ್ ಇನ್ಫರ್ಮೇಷನ್ ಸರ್ವೀಸ್ ಎಂಬ ಹೆಸರಿನಲ್ಲಿ ಟೆಲಿಗ್ರಾಮ್ ಚಾಟ್‌ಬಾಟ್‌ (HCKChatBot) ಅಭಿವೃದ್ಧಿಪಡಿಸಲಾಗಿದೆ. ‌ಚಾನೆಲ್ ಅನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್‌. ಓಕಾ ಅವರು ಗುರುವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿತ ಅವರು, ‘ಈಗಾಗಲೇ 6,500 ಸದಸ್ಯರು ಹೈಕೋರ್ಟ್‌ ಚಾನೆಲ್‌ನ ಚಂದಾದಾರರಾಗಿದ್ದಾರೆ ಮತ್ತು 5 ಸಾವಿರಕ್ಕೂ ಹೆಚ್ಚು ಸದಸ್ಯರು ಜಿಲ್ಲಾ ನ್ಯಾಯಾಲಯಗಳ ಚಾನೆಲ್‌ನ ಚಂದಾದಾರರಾಗಿದ್ದಾರೆ’ ಎಂದು ಅವರು ಹೇಳಿದರು.

‘ವಕೀಲರು, ಕಕ್ಷಿದಾರರು ಮತ್ತು ಸಾರ್ವಜನಿಕರಿಗೆ ಈ ಸೇವೆ ಉಪಯೋಗ ಆಗಲಿದೆ. ಡಿಜಿಟಲ್ ಯುಗದಲ್ಲಿ ನೈಜ ಸಮಯದಲ್ಲಿ ಎಲ್ಲಾ ವಿಚಾರಣೆಗಳನ್ನು ಜನ ನೋಡಬಹುದಾಗಿದೆ ಎಂದು ತಿಳಿಸಿದರು.

ಇ–ನ್ಯಾಯಾಲಯದ ವಿಚಾರಣೆಯ ನೈಜ ಸಮಯ, ಪ್ರಕರಣಗಳ ಪಟ್ಟಿ, ವಿಚಾರಣೆಯ ಸ್ಥಿತಿ, ದೈನಂದಿನ ಆದೇಶಗಳು ಈ ಚಾನೆಲ್‌ನಲ್ಲಿ ಲಭ್ಯವಾಗಲಿವೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.